For Quick Alerts
ALLOW NOTIFICATIONS  
For Daily Alerts
 

ಏಷ್ಯಾ ಕಪ್‌ನಲ್ಲಿ RCB ಪ್ಲೇಯರ್‌ಗೆ ಸಿಗದ ಅವಕಾಶ: ಬೆಂಚ್‌ ಕಾಯ್ದು ಸುಸ್ತಾದ ಸ್ಟಾರ್‌

ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿಯ ಫೈನಲ್‌ ಪಂದ್ಯ ಮುಗಿದಿದೆ. ಪಂದ್ಯದಲ್ಲಿ ಟೀಮ್ ಇಂಡಿಯಾ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿತು. ಈ ವೇಳೆ ಟೀಮ್ ಇಂಡಿಯಾದ 2 ಬದಲಾವಣೆಗಳನ್ನು ಮಾಡಿಕೊಂಡಿತ್ತು. ಅಲ್ಲದೆ ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ ಅವರು ಗಾಯಕ್ಕೆ ತುತ್ತಾಗಿದ್ದರಿಂದ ಇವರ ಬದಲಿಗೆ ರಿಂಕು ಸಿಂಗ್‌ ಅವರಿಗೆ ಅವಕಾಶ ನೀಡಲಾಯಿತು. ಆದರೆ ಆರ್‌ಸಿಬಿ ಈ ಸ್ಟಾರ್‌ ಪ್ಲೇಯರ್‌ ಬರೀ ಯುಎಇನಲ್ಲಿ ಬೆಂಚ್‌ ಕಾಯ್ದೇ ಸುಸ್ತಾಗಿದ್ದಾರೆ.

ಟೀಮ್ ಇಂಡಿಯಾ ಪಾಕ್ ವಿರುದ್ಧದ ಪಂದ್ಯದಲ್ಲಿ ಬಲಿಷ್ಠ ತಂಡವನ್ನು ಕಣಕ್ಕೆ ಇಳಿಸಿತು. ಜಸ್ಪ್ರೀತ್ ಬುಮ್ರಾ, ವರುಣ್‌ ಚಕ್ರವರ್ತಿ ಮತ್ತೆ ತಂಡಕ್ಕೆ ಕಂ ಬ್ಯಾಕ್ ಮಾಡಿದ್ದಾರೆ. ಅಲ್ಲದೆ ಹಲವು ಪಂದ್ಯಗಳಲ್ಲಿ ಬೆಂಚ್ ಕಾಯ್ದಿದ್ದ ರಿಂಕು ಸಿಂಗ್ ಅವರಿಗೆ ಫೈನಲ್‌ ಪಂದ್ಯದಲ್ಲಿ ಅವಕಾಶ ನೀಡಲಾಗಿದೆ. 2025 ರ ಏಷ್ಯಾಕಪ್ ಉದ್ದಕ್ಕೂ ಆಡದೆ ಬೆಂಚ್‌ನಲ್ಲಿ ಕುಳಿತ ಆಟಗಾರರಲ್ಲಿ ಕಾಣಿಸಿಕೊಳ್ಳುವುದು ಒಬ್ಬನೇ ಆಟಗಾರ. ಆತನೇ ಆರ್‌ಸಿಬಿ ತಂಡದ ಸ್ಟಾರ್ ಪ್ಲೇಯರ್‌ ಜಿತೇಶ್‌ ಶರ್ಮಾ.

Benched All Asia Cup RCB Star Jitesh Sharma Misses Final Rinku Singh Replaces Hardik

ಏಷ್ಯಾ ಕಪ್‌ ಟಿ20 ಟೂರ್ನಿ ಆರಂಭವಾಗುವಾಗ ಸಂಜು ಸ್ಯಾಮ್ಸನ್‌ ಅವರ ಬದಲಿಗೆ ಜಿತೇಶ್ ಶರ್ಮಾ ಅವರಿಗೆ ಅವಕಾಶ ನೀಡಲಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಟೂರ್ನಿ ಆರಂಭವಾಗುತ್ತಿದ್ದಂತೆ ಟೀಮ್ ಮ್ಯಾನೇಜ್ಮೆಂಟ್‌ ಸಂಜು ಸ್ಯಾಮ್ಸನ್‌ ಅವರಿಗೆ ಮಣೆ ಹಾಕಿತು. ಇವರು ಓಮನ್‌ ವಿರುದ್ದದ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಅಬ್ಬರಿಸಿದರು. ಈ ಪಂದ್ಯದಲ್ಲಿ ಇವರು 56 ರನ್‌ ಬಾರಿಸಿದ್ದರು. ಅಲ್ಲದೆ ಇವರು ದೇಶೀಯ ಟೂರ್ನಿಗಳಲ್ಲಿ ಅಮೋಘ ಪ್ರದರ್ಶನ ನೀಡಿದ ಪರಿಣಾಮ ಜಿತೇಶ್‌ ಶರ್ಮಾ ಅವರು ಬೆಂಚ್‌ ಕಾಯುವಂತೆ ಆಯಿತು.

ಜಿತೇಶ್‌ ಸಾಧನೆ

ಈಗಾಗಲೇ ಆರ್‌ಸಿಬಿ ತಂಡದ ಸ್ಟಾರ್ ಪ್ಲೇಯರ್‌ ಜಿತೇಶ್‌ ಶರ್ಮಾ ಟೀಮ್ ಇಂಡಿಯಾದ ಪರ 2023 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಅಲ್ಲದೆ ಈ ವೇಳೆ ಇವರು 100 ರನ್‌ ಸಿಡಿಸಿದ್ದಾರೆ. ಇವರ ಬೆಸ್ಟ್‌ ಸ್ಕೋರ್‌ 35 ರನ್‌ ಆಗಿದೆ. ಆದರೆ ಇವರಿಗೆ ವಿಕೆಟ್‌ ಕೀಪರ್ ಹಾಗೂ ಫಿನಿಷರ್ ರೋಲ್‌ನ್ನು ನೀಡಬಹುದು ಎಂಬ ಮಾತುಗಳು ಆರಂಭದಲ್ಲಿ ಕೇಳಿ ಬಂದಿದ್ದವು. ಆದರೆ ಏಷ್ಯಾ ಕಪ್ ಟಿ20 ಟೂರ್ನಿಯುದ್ದಕ್ಕೂ ಇವರು ಬೆಂಚ್‌ ಮೇಲೆ ಕಾಯ್ದು ಕುಳಿತರು. ಕೊನೆಯ ಪಂದ್ಯದಲ್ಲಿ ಇವರಿಗೆ ಆಡುವ ಪ್ಲೇಯಿಂಗ್ ಇಲೆವೆನ್‌ನಲ್ಲಿ ಆಡುವ ಅವಕಾಶ ಸಿಗುವ ಕನಸು ಕಂಡಿದ್ದರು. ಆದರೆ ಆ ಕನಸು ಸಹ ನುಚ್ಚು ನೂರಾಯಿತು.

Benched All Asia Cup RCB Star Jitesh Sharma Misses Final Rinku Singh Replaces Hardik

ಜಿತೇಶ್‌ ಶರ್ಮಾ 18ನೇ ಆವೃತ್ತಿಯ ಐಪಿಎಲ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ಬ್ಯಾಟ್ ಮಾಡಿ ಸೈ ಎನಿಸಿಕೊಂಡಿದ್ದರು. ಇವರು ಆಡಿದ 15 ಐಪಿಎಲ್‌ ಪಂದ್ಯಗಳಲ್ಲಿ 261 ರನ್‌ ಸಿಡಿಸಿದ್ದರು. ಇದರಲ್ಲಿ ಒಂದು ಅರ್ಧಶತಕವೂ ಸೇರಿತ್ತು. ಇವರು ಕಳೆದ ಐಪಿಎಲ್‌ನಲ್ಲಿ 85 ರನ್‌ ಬಾರಿಸಿದ್ದು ಗರಿಷ್ಠ ಸ್ಕೋರ್‌ ಆಗಿತ್ತು. ಇವರ ಈ ಪ್ರದರ್ಶನದ ಬಲದಿಂದ ಟೀಮ್ ಇಂಡಿಯಾಕ್ಕೆ ಕಂ ಬ್ಯಾಕ್‌ ಮಾಡುವ ಕನಸು ಕಂಡಿದ್ದರು. ಅಲ್ಲದೆ ತಂಡದಲ್ಲಿ ಸ್ಥಾನ ಪಡೆಯುವ ಕನಸು ಸಹ ಕಂಡಿದ್ದರು. ಆದರೆ ಈ ಆಸೆ ಮುಂದಿನ ಸರಣಿಗೆ ಶಿಫ್ಟ್‌ ಆಗಿದೆ.

Story first published: Monday, September 29, 2025, 8:05 [IST]
Other articles published on Sep 29, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+