ಬೆಂಗಾಲ್ ಕ್ರಿಕೆಟ್ ಆಯ್ಕೆದಾರರಿಗೆ ಕೊರೊನಾವೈರಸ್ ಸೋಂಕು

ಕೋಲ್ಕತ್ತಾ, ಮೇ 29: ಬೆಂಗಾಲ್ ಕ್ರಿಕೆಟ್‌ನ ಆಯ್ಕೆದಾರ ಸಾಗರ್ಮೋಯ್ ಸೇನ್‌ಶರ್ಮ ಅವರಿಗೆ ಕೊರೊನಾವೈರಸ್ ಸೋಂಕು ತಲುಲಿರುವುದು ಪತ್ತೆಯಾಗಿದೆ. ಈ ವಿಚಾರವನ್ನು ಬೆಂಗಾಲ್ ಕ್ರಿಕೆಟ್ ಅಸೋಸಿಯೇಶನ್‌ನ ಅಧ್ಯಕ್ಷ ಅವಿಷೇಕ್ ಡಾಲ್ಮಿಯಾ ತಿಳಿಸಿದ್ದಾರೆ.
1989-90ರ ರಣಜಿ ವಿಜೇತ ಬೆಂಗಾಲ್ ತಂಡದ ಸದಸ್ಯರಾಗಿದ್ದ ಮಾಜಿ ವೇಗಿ ಸೇನ್‌ಶರ್ಮ ಅವರಿಗೆ ಅವರ ಪತ್ನಿಯಿಂದ ಕೊರೊನಾವೈರಸ್ ತಲುಲಿದೆ ಎಂದು ತಿಳಿದುಬಂದಿದೆ. 47 ಪ್ರಥಮದರ್ಜೆ ಕ್ರಿಕೆಟ್ ಪಂದ್ಯಗಳಲ್ಲಿ ಸೇನ್‌ಶರ್ಮ 149 ವಿಕೆಟ್, 19 ಲಿಸ್ಟ್ ಎ ಪಂದ್ಯಗಳಲ್ಲಿ 16 ವಿಕೆಟ್‌ಗಳನ್ನು ಪಡೆದಿದ್ದಾರೆ.
'ಸೇನ್‌ಶರ್ಮ ಅವರ ಪತ್ನಿಗೆ ಮೊದಲು ಕೋವಿಡ್ 19 ಸೋಂಕು ಇರುವುದು ಪತ್ತೆಯಾಗಿತ್ತು. ಅವರು ಸೋಂಕಿನಿಂದ ಚೇತರಿಸಿಕೊಂಡರು, ಈಗ ಸೇನ್‌ಶರ್ಮರ ಪರೀಕ್ಷಾ ಫಲಿತಾಂಶ ಪಾಸಿಟಿವ್ ಎಂದು ಬಂದಿದೆ. ಆದರೆ ಅವರ ಇನ್ನುಳಿದ ಕುಟುಂಬಸ್ಥರ ಫಲಿತಾಂಶ ನೆಗೆಟಿವ್ ಎಂದು ಬಂದಿದೆ,' ಎಂದು ಡಾಲ್ಮಿಯಾ ಪಿಟಿಐಗೆ ಮಾಹಿತಿ ನೀಡಿದ್ದಾರೆ.
54ರ ಹರೆಯದ ಸೇನ್‌ಶರ್ಮ ಈಗ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗುರುವಾರ (ಮೇ 28) ಬೆಂಗಾಲ್‌ನಲ್ಲಿ 344 ಹೊಸ ಸೋಂಕಿತರು ಪತ್ತೆಯಾಗಿದ್ದರು. ಆ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ ಸುಮಾರು 4,536ರಷ್ಟಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications