For Quick Alerts
ALLOW NOTIFICATIONS  
For Daily Alerts
 

Pro Kabaddi: ಎಲಿಮಿನೇಟರ್‌ನಲ್ಲಿ ಬುಲ್ಸ್‌ಗೆ ಸೋಲು: ತೆಲುಗುಗೆ ಜಯ

ಕೊನೆಯ ಅವಧಿಯ ವಗೆಗೂ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಗೆಲುವು ದಾಖಲಿಸುವಲ್ಲಿ ವಿಫಲವಾಯಿತು. ಮಿನಿ ಕ್ವಾಲಿಫೈಯರ್‌ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ 32-37 ತೆಲುಗು ಟೈಟಾನ್ಸ್ ವಿರುದ್ಧ ಸೋಲು ಕಂಡಿತು. ಈ ಪಂದ್ಯದಲ್ಲಿ ಸೋಲು ಕಂಡರೂ ಬುಲ್ಸ್‌ ತಂಡಕ್ಕೆ ಮತ್ತೊಂದು ಅವಕಾಶ ಇದೆ. 2ನೇ ಎಲಿಮಿನೇಟರ್‌ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌, ಪಾಟ್ನಾ ಪೈರೇಟ್ಸ್‌ ವಿರುದ್ಧ ಕಾದಾಟ ನಡೆಸಲಿದೆ.

ಎರಡನೆ ಅವಧಿಯ 6ನೇ ನಿಮಿಷದಲ್ಲಿ ಬೆಂಗಳೂರು ಬುಲ್ಸ್ ಎದುರಾಳಿ ತೆಲುಗು ಟೈಟಾನ್ಸ್ ತಂಡವನ್ನು ಆಲೌಟ್ ಮಾಡಿತು. ಈ ಮೂಲಕ ಅಂಕಗಳಿಕೆಯಲ್ಲಿ ಕಂಡಿದ್ದ ಅಂಕಗಳ ಹಿನ್ನಡೆಯನ್ನು ಮುನ್ನಡೆ ಸಾಧಿಸಲು ಸಾಧ್ಯವಾಯತು. ಈ ಅವಧಿಯ ಆಟದಲ್ಲಿ ಬೆಂಗಳೂರು ಬುಲ್ಸ್ ಕ್ಲಾಸಿಕ್ ಆಟದ ಪ್ರದರ್ಶನ ನೀಡಿ ಅಂಕಗಳಿಕೆಯಲ್ಲಿ ಕೊಂಚ ಮುನ್ನಡೆ ಸಾಧಿಸಿತು. ಈ ಅವಧಿಯ 10ನೇ ನಿಮಿಷದಲ್ಲಿ ಉಭಯ ತಂಡಗಳು 24-24 ಅಂಕಗಳನ್ನು ಕಲೆ ಹಾಕಿ ರೋಚಕತೆ ಹೆಚ್ಚಿಸಿತು.

Bengaluru Bulls Lose Mini-Qualifier to Telugu Titans 32-37 Face Patna Pirates in Eliminator 2

ಎರಡನೇ ಅವಧಿಯ 14ನೇ ನಿಮಿಷದಲ್ಲಿ ಬೆಂಗಳೂರು ಬುಲ್ಸ್ ಒಮ್ಮೆ ಅಂಗಳವನ್ನು ಖಾಲಿ ಮಾಡಿತು. ಈ ಅವಧಿಯಲ್ಲಿ 28-31 ಅಂಕಗಳಿಂದ ಬುಲ್ಸ್ ಹಿನ್ನಡೆ ಸಾಧಿಸಿತು. ಇಲ್ಲಿಂದ ಬುಲ್ಸ್‌ ಜಿದ್ದಾಜಿದ್ದಿನ ಪ್ರದರ್ಶನ ನೀಡಿದ ಬುಲ್ಸ್ ರಂಜಿಸಿತು. ಆದರೆ ಕೊನೆಯ ಅವಧಿಯ ವರೆಗೂ ಅಂಕಗಳಿಕೆಯಲ್ಲಿ ಮುನ್ನಡೆ ಸಾಧಿಸುವ ಬುಲ್ಸ್ ಆಸೆ ಫಲಿಸಲಿಲ್ಲ. ಪರಿಣಾಮ ಯೋಗೇಶ್‌ ಪಡೆ ಸೋಲು ಕಂಡಿತು. ಈ ಮೂಲಕ ಬುಲ್ಸ್‌ ಎಲಿಮಿನೇಟರ್‌ 1ರಲ್ಲಿ ಜಯ ಸಾಧಿಸಿ ಮುನ್ನಡೆ ಸಾಧಿಸುವ ಆಸೆಯನ್ನು ಕೈ ಚೆಲ್ಲಿತು. ಕೊನೆಯ ಅವಧಿಯವರೆಗೂ ಅಂಕಗಳಿಸುವ ಆಸೆ ಫಲಿಸಲಿಲ್ಲ. ಪರಿಣಾಮ ಬುಲ್ಸ್‌ ಎಲಿಮಿನೇಟರ್‌ ಪಂದ್ಯದಲ್ಲಿ ಸೋಲು ಕಂಡಿತು.

ಮೊದಲಾವಧಿಯಲ್ಲಿ ಹಿನ್ನಡೆ

ಮೊದಲಾವಧಿಯ ಪಂದ್ಯದಲ್ಲಿ ಬುಲ್ಸ್‌ 14-16 ಅಂಕಗಳಿಂದ ಹಿನ್ನಡೆ ಅನುಭವಿಸಿತು. ಈ ವೇಳೆ ಬುಲ್ಸ್ ದಾಳಿ ಹಾಗೂ ಟ್ಯಾಕಲ್‌ನಲ್ಲಿ ಸೊಗಸಾದ ಪ್ರದರ್ಶನ ನೀಡಿತು. ಈ ಅವಧಿಯಲ್ಲಿ ಬೆಂಗಳೂರು ಬುಲ್ಸ್ ಸ್ಥಿರ ಪ್ರದರ್ಶನ ನೀಡಿದರೂ, ಅಂಕಗಳಿಕೆಯಲ್ಲಿ ಹಿನ್ನಡೆ ಅನುಭವಿಸಿತು. ಈ ಅವಧಿಯಲ್ಲಿ ಸಾಧಿಸಿದ್ದ ಅಂಕಗಳ ಹಿನ್ನಡೆಯನ್ನು ಕಡಿಮೆ ಮಾಡುವಲ್ಲೆ ಬೆಂಗಳೂರು ಕೊನೆಯ ಹಂತದವರೆಗೂ ಪ್ರಯತ್ನ ಪಟ್ಟಿತು. ಆದರೆ ಫಲಿಸಲಿಲ್ಲ. ಪರಿಣಾಮ ಬೆಂಗಳೂರು ಬುಲ್ಸ್ ಸೋಲು ಕಂಡಿತು.

Story first published: Sunday, October 26, 2025, 22:58 [IST]
Other articles published on Oct 26, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+