Pro Kabaddi 2025: ಗೆಲುವಿನ ಟ್ರ್ಯಾಕ್‌ಗೆ ಮರಳಲು ಬುಲ್ಸ್ ಹೆಣಗಾಟ: ಹ್ಯಾಟ್ರಿಕ್ ಸೋಲು
ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್ ಪ್ರಸಕ್ತ ಆವೃತ್ತಿ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಗೆಲುವಿನ ಖಾತೆಯನ್ನು ಓಪನ್ ಮಾಡಲು ಹೆಣಗಾಟ ನಡೆಸಿದೆ. ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ಬುಲ್ಸ್ ಹೀನಾಯ ಸೋಲು ಕಂಡಿದೆ. ಯು ಮುಂಬಾ 48-28 ಅಂಕಗಳ ಅಂತರದಿಂದ ಬೆಂಗಳೂರು ಬುಲ್ಸ್ ತಂಡವನ್ನು ಮಣಿಸಿದೆ. ಈ ಮೂಲಕ ಬುಲ್ಸ್ ಪ್ರಸಕ್ತ ಆವೃತ್ತಿಯಲ್ಲಿ ಸತತ ಮೂರನೇ ಸೋಲು ಕಂಡಿದೆ.
ಶುಕ್ರವಾರ ನಡೆದ ಪಂದ್ಯದಲ್ಲಿ ಯು ಮುಂಬಾ ತಂಡ ಆರಂಭದಿಂದಲೂ ಪಂದ್ಯದ ಮೇಲೆ ಹಿಡಿತ ಸಾಧಿಸುತ್ತಾ ಸಾಗಿತು. ಈ ವೇಳೆ ಮುಂಬಾ 29-12 ಅಂಕಗಳಿಂದ ಬುಲ್ಸ್ ವಿರುದ್ಧ ಮುನ್ನಡೆ ಸಾಧಿಸಿತು. ಈ ವೇಳೆ ಮುಂಬಾ ದಾಳಿಯಲ್ಲಿ ಅಮೋಘ ಪ್ರದರ್ಶನ ನೀಡಿ ಅಂಕಗಳನ್ನು ಬಾಚಿಕೊಂಡಿತು. ಇನ್ನು ಟ್ಯಾಕಲ್‌ನಲ್ಲಿ 6 ಅಂಕ ಸೇರಿಸಿತು. ಬುಲ್ಸ್ ಕೋರ್ಟ್‌ಗೆ ನುಗ್ಗಿದ ಮುಂಬಾ 17 ಅಂಕ ತನ್ನ ಖಾತೆಗೆ ಮೊದಲ 20 ನಿಮಿಷದಲ್ಲಿ ಹಾಕಿಕೊಂಡಿತು. ಈ ಅವಧಿಯಲ್ಲಿ ಬುಲ್ಸ್ ಎರಡು ಬಾರಿ ಆಲೌಟ್ ಆಯಿತು.

ಎರಡನೇ ಅವಧಿಯಲ್ಲಿ ಬುಲ್ಸ್ ಜಿದ್ದಾಜಿದ್ದಿನ ಆಟದ ಪ್ರದರ್ಶನ ನೀಡುವ ಸೂಚನೆ ನೀಡಿತ್ತು. ಆದರೆ ಮೊದಲಾವಧಿಯಲ್ಲಿ ಸಾಧಿಸಿದ್ದ ಭಾರೀ ಅಂತರ ಮುಂಬಾಗೆ ವರವಾಯಿತು. ಈ ಅವಧಿಯಲ್ಲಿ ಬುಲ್ಸ್ ದಾಳಿಯಲ್ಲಿ 9, ಟ್ಯಾಕಲ್‌ನಲ್ಲಿ 5 ಅಂಕ ಸೇರಿಸಿತು. ಇನ್ನು ಮುಂಬಾ ದಾಳಿಯಲ್ಲಿ 6, ಟ್ಯಾಕಲ್‌ನಲ್ಲಿ 9 ಅಂಕ ಕಲೆ ಹಾಕಿತು. ಈ ಅವಧಿಯಲ್ಲಿ ಬೆಂಗಳೂರು ಬುಲ್ಸ್ ಮತ್ತೊಮ್ಮೆ ಆಲೌಟ್‌ಗೆ ಗುರಿಯಾಯಿತು. ಮುಂಬಾ ತಂಡದ ಅಜಿತ್ ಚೌಹಾಣ್ ಮಾಡಿದ 13 ರೈಡ್‌ಗಳಲ್ಲಿ 13 ಅಂಕ ಸೇರಿಸಿ ಮಿಂಚಿದರು. ಸತೀಶ್ 6 ಅಂಕ ಕಲೆ ಹಾಕಿದರು. ಪರಾಜಿತ ತಂಡದ ಪರ ಅಶೀಶ್ ಮಲಿಕ್ ಹಾಗೂ ಅಲಿರೆಜಾ ಮಿರ್ಜಾಯನ್ ತಲಾ 6 ಅಂಕ ಕಲೆ ಹಾಕಿದರು.
ಹರಿಯಾಣಗೆ ಜಯ
ಶುಕ್ರವಾರ ನಡೆದ ಎರಡನೇ ಪಂದ್ಯದಲ್ಲಿ ಹರಿಯಾಣ ಸ್ಟಿಲರ್ಸ್ 37-32 ರಿಂದ ಯುಪಿ ಯೋಧಾಸ್ ತಂಡವನ್ನು ಮಣಿಸಿತು. ಮೊದಲಾವಧಿಯ ಆಟದಲ್ಲಿ ಯುಪಿ ಯೋಧಾಸ್ ಅಮೋಘ ಆಟದ ಪ್ರದರ್ಶನ ನೀಡಿ ಮುನ್ನಡೆ ಸಾಧಿಸಿತು. ಈ ವೇಳೆ ದಾಳಿ ಹಾಗೂ ಟ್ಯಾಕಲ್‌ನಲ್ಲಿ ಸಮಬಲದ ಪ್ರದರ್ಶನ ನೀಡಿದ ಯುಪಿ ಅಬ್ಬರಿಸಿತು. ಅಲ್ಲದೆ ಹರಿಯಾಣ ಸ್ಟೀಲರ್ಸ್ ತಂಡವನ್ನು ಒಮ್ಮೆ ಆಲೌಟ್ ಸಹ ಮಾಡಿತು. ಎರಡನೇ ಅವಧಿಯ ಆಟ ರೋಚಕತೆ ಹುಟ್ಟಿಸಿತ್ತು. ಈ ಅವಧಿಯಲ್ಲಿ ಹರಿಯಾಣ ಸ್ಟೀಲರ್ಸ್ 25-15 ರಿಂದ ಯುಪಿ ಯೋಧಾಸ್ ತಂಡದ ವಿರುದ್ಧ ಮುನ್ನಡೆ ಸಾಧಿಸಿತು. ಈ ವೇಳೆ ಹರಿಯಾಣ ತಂಡದ ಸ್ಟಾರ್ ರಕ್ಷಣಾ ಆಟಗಾರರು ಅಮೋಘ ಪ್ರದರ್ಶನ ನೀಡಿದರು. ಇವರು ಟ್ಯಾಕಲ್‌ನಲ್ಲಿ 10 ಅಂಕ ಕಲೆ ಹಾಕಿ ತಂಡ ಮುನ್ನಡೆ ಸಾಧಿಸಲು ನೆರವಾದರು. ಇದೇ ಅವಧಿಯಲ್ಲಿ ಹರಿಯಾಣ ಬೋನಸ್ ಅಂಕವನ್ನು ಸಹ ಪಡೆಯಿತು. ಹರಿಯಾಣ ಸ್ಟೀಲರ್ಸ್ ಪರ ನವೀನ್ ಕುಮಾರ್ ಹಾಗೂ ರಾಹುಲ್ ಅಹ್ರೆ ತಲಾ 6 ಅಂಕ ಕಲೆ ಹಾಕಿದರು. ಕರ್ನಾಟಕದ ಸ್ಟಾರ್ ಆಟಗಾರ ಗಗನ್ ಗೌಡ 13 ಅಂಕ ಸೇರಿಸಿ ಸೋಲಿನಲ್ಲಿ ಮಿಂಚಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications