IPL 2026: ಗುಜರಾತ್, ಆರ್‌ಸಿಬಿ ಪಂದ್ಯದ ವೇಳೆ ದೊಡ್ಡ ಭದ್ರತಾ ಲೋಪ: ಇಬ್ಬರ ಬಂಧನ
ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ 19ನೇ ಆವೃತ್ತಿ ಐಪಿಎಲ್‌ನ ಲೀಗ್ ಹಂತದ ಪಂದ್ಯಗಳು ಮುಗಿದಿವೆ. ಈ ವೇಳೆ ಭದ್ರತಾ ಲೋಪ ಆಗಿರುವುದು ಬೆಳಕಿಗೆ ಬಂದಿದೆ. ಏಪ್ರಿಲ್ 24 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ಗುಜರಾತ್ ಟೈಟಾನ್ಸ್ (ಜಿಟಿ) ನಡುವಣ ಪಂದ್ಯ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಿತು. ಈ ಪಂದ್ಯದ ವೇಳೆ ಕ್ರೀಡಾಂಗಣದ ಸುಮಾರು 240ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಉದ್ದೇಶಪೂರ್ವಕವಾಗಿ ಹಾಳುಮಾಡಲಾಗಿದ್ದು, ಪೊಲೀಸರು ಈಗಾಗಲೇ ಇಬ್ಬರನ್ನು ಬಂಧಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕಬ್ಬನ್ ಪಾರ್ಕ್ ಪೊಲೀಸರು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಜಿಲ್ಲೆಯ ಹಿರಿಯೂರು ಮೂಲದ ಮಂಜುನಾಥ್ (37) ಮತ್ತು ಉತ್ತರ ಪ್ರದೇಶದ ಅಬ್ದುಲ್ ಕಲಾಂ (19) ಎಂದು ತಿಳಿದು ಬಂದಿದೆ. ಇವರಿಬ್ಬರೂ ಕ್ರೀಡಾಂಗಣಕ್ಕೆ ಡಿಜಿಟಲ್ ಸೇವೆ ಒದಗಿಸುವ 'ಐವಿಎಸ್ ಡಿಜಿಟಲ್ ಸೊಲ್ಯೂಷನ್ಸ್' ಕಂಪನಿಯಲ್ಲಿ ಕೆಲಸವನ್ನು ಮಾಡುತ್ತಿದ್ದರು.

ಸ್ಟಾಕ್ ಟೆಕ್ನಾಲಜೀಸ್' ಸಂಸ್ಥೆಯ ಉದ್ಯೋಗಿ ಆದಿತ್ಯ ಭಟ್ ನೀಡಿದ ದೂರಿನ ಮೇರೆಗೆ ಕಬ್ಬನ್ ಪಾರ್ಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಆರ್‌ಸಿಬಿ ಪಂದ್ಯ ಇದ್ದ ದಿನದಂದೇ ಇಷ್ಟು ದೊಡ್ಡ ಭದ್ರತಾ ಲೋಪ ನಡೆದಿರುವುದು ಆತಂಕ ಸೃಷ್ಟಿಸಿದೆ. ಪಂದ್ಯದ ದಿನದಂದು ನಡೆದ ಘಟನೆ ನಿಜಕ್ಕೂ ಎಲ್ಲರ ಆತಂಕವನ್ನು ಹೆಚ್ಚಿಸಿದೆ. ಗೇಟ್‌ಗಳು, ಪ್ರೇಕ್ಷಕರ ಗ್ಯಾಲರಿ ಮತ್ತು ಪ್ರಮುಖ ಆಯಕಟ್ಟಿನ ಪ್ರದೇಶಗಳಲ್ಲಿ ನೇರಪ್ರಸಾರದ ದೃಶ್ಯಗಳು ಭದ್ರತಾ ಸಿಬ್ಬಂದಿಗೆ ಲಭ್ಯವಾಗದೇ ಇದ್ದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
ಇಬ್ಬರೂ ಆರೋಪಿಗಳು ಯಾವುದೇ ಅಧಿಕೃತ ಪಾಸುಗಳು ಇಲ್ಲದೇ ಸಿಸಿಟಿವಿ ನಿಯಂತ್ರಣಾ ಕೊಠಡಿ ಪ್ರವೇಶಿಸಿ ನೆಟ್‌ವರ್ಕ್ ವಿಡಿಯೋ ರೆಕಾರ್ಡರ್ ಸಿಸ್ಟಮ್‌ಗಳು ಮತ್ತು ಫೈಬರ್ ಕೇಬಲ್ ಸಂಪರ್ಕಗಳಿಗೆ ಹಾನಿ ಮಾಡಿದ್ದಾರೆ ಎಂದು ದೂರಲಾಗಿದೆ.
ಈ ಘಟನೆಗೆ ಕಾರಣ ಏನು?
ಕಬ್ಬನ್ ಪಾರ್ಕ್ ಪೊಲೀಸರು ತನಿಖೆಯ ವೇಳೆ ಈ ಕೃತ್ಯ ನಡೆದಿದ್ದು ಏಕೆ ಎಂಬುವುದನ್ನು ಪ್ರಾಥಮಿಕ ತನಿಖೆಯ ವೇಳೆ ಬಹಿರಂಗ ಪಡಿಸಿದ್ದಾರೆ. ಬಂಧಿತರು ತಮಗೆ ಸೇರಬೇಕಿದ್ದ 10 ಲಕ್ಷ ರೂಪಾಯಿ ಬಾಕಿ ಹಣ ಪಾವತಿಸದ ಹಿನ್ನೆಲೆಯಲ್ಲಿ ಈ ಕೃತ್ಯವನ್ನು ಎಸಗಿದ್ದಾರೆ ಎಂದು ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications