Rohit Sharma: ಆರ್‌ಸಿಬಿಗೆ ಬನ್ನಿ ರಾಜನಂತೆ ನೋಡ್ಕೊಂತೀವಿ- ರೋಹಿತ್ ಶರ್ಮಾಗೆ ಸ್ವಾಗತ ಕೋರಿದ ಬೆಂಗಳೂರು ಫ್ಯಾನ್ಸ್
ಮುಂಬೈ ಇಂಡಿಯ್ಸ್ ಡ್ರೆಸಿಂಗ್ ರೂಮ್‌ನಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದು ಪದೆ ಪದೇ ನಿಜವಾಗುತ್ತದೆ. ಆರಂಭದಲ್ಲೇ ಕ್ಯಾಪ್ಟನ್ಸಿ ರೋಹಿತ್ ಶರ್ಮಾ ಅವರಿಂದ ಕಸಿದು ಕೊಳ್ಳಲಾಯಿತು. ಇವರಿಂದ ಪಡೆದ ನಾಯಕತ್ವವನ್ನು ಗುಜರಾತ್ ತಂಡದಿಂದ ಕರೆತಂದ ಹಾರ್ದಿಕ್ ಪಾಂಡ್ಯ ಅವರಿಗೆ ನೀಡಲಾಯಿತು.
ನಿಜಕ್ಕೂ ಇಷ್ಟೇ ಮುಂಬೈ ತಂಡದಲ್ಲಿ ಅಸಮಾಧಾನ ಭುಗಿಲೇಳಲು ಸಾಕಾಗಿತ್ತು. ನಾಯಕತ್ವದ ಮೇಲೆ ಕಣ್ಣು ನೆಟ್ಟಿದ್ದ ಸ್ಟಾರ್ ಆಟಗಾರರು ಮ್ಯಾನೇಜ್ಮೆಂಟ್ ಈ ನಿರ್ಧಾರಿಂದ ಬೇಸರಗೊಂಡಿದ್ದರು. ಅಲ್ಲದೆ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗೆ ಇಳಿಸಿದ್ದಕ್ಕೆ ಕೆಂಡ ಕಾರಿದ್ದರು. ರೋಹಿತ್ ಶರ್ಮಾ ಅವರ ಸಾಧನೆಯನ್ನು ಕಡೆಗಣನೆ ಮಾಡಲಾಗಿದೆ ಎಂಬ ಕೂಗು ಸಹ ಕೇಳಿ ಬರುತ್ತಿತ್ತು. ಇದಕ್ಕೆ ರೋಹಿತ್ ಶರ್ಮಾ ಫ್ಯಾನ್ಸ್ ಫುಲ್ ಗರಂ ಆಗಿದ್ದರು.

ನಾಯಕತ್ವದ ಮೇಲೆ ಇವರಿಗೂ ಕಣ್ಣು!
ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದ ಮೇಲೆ ಕಣ್ಣು ನೆಟ್ಟಿದ್ದ ಜಸ್ಪ್ರಿತ್ ಬುಮ್ರಾ ಹಾಗೂ ಮಿಡ್ಲ್ ಆರ್ಡರ್ ಸ್ಪೆಷಲಿಸ್ಟ್ ಸೂರ್ಯಕುಮಾರ್ ಯಾದವ್‌ಗೆ ಬೇಸರವಾಗಿದೆ. ನಾಯಕತ್ವ ಅವರಿಗೆ ಸಿಗುವುದು ಇನ್ನು ದೂರದ ಮಾತು ಎಂಬುದು ಅವರಿಗೂ ಸ್ಪಷ್ಟವಾಗಿತ್ತು. ಹೀಗಾಗಿಯೇ ಹಾರ್ದಿಕ್ ಆಗಮನಕ್ಕೆ ಈ ಮೂರು ಮೌನಕ್ಕೆ ಶರಣಾಗಿದ್ದರು.
ಮೈದಾನದಲ್ಲಿ ಮುನಿಸು
ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಳ್ಳುತ್ತಾರಾ ಇಲ್ಲವೋ ಎಂಬ ಬಗ್ಗೆ ಪ್ರಶ್ನೆಗಳು ಇದ್ದವು. ರೋಹಿತ್ ಕೊನೆಯ ಕ್ಷಣದಲ್ಲಿ ಮುಂಬೈ ಕ್ಯಾಂಪ್ ಸೇರಿದರು. ಅಲ್ಲದೆ ಹಾರ್ದಿಕ್ ಅವರೊಂದಿಗೆ ಅಭ್ಯಾಸದ ವೇಳೆ ನಗುತ್ತಲೆ ಮಾತನಾಡಿದರು. ಈ ದೃಶ್ಯ ಕಂಡು ಅಭಿಮಾನಿಗಳು ಎಲ್ಲವೂ ತಣ್ಣಗಾಗಿತ್ತು ಎಂದು ಲೆಕ್ಕಾಹಾಕಿದ್ದರು. ಆದರೆ ಹಾರ್ದಿಕ್ ಹೊಂಚು ಹಾಕಿಕೊಂಡು ಕುಳಿತಂತೆ ಇತ್ತು.

ಗುಜರಾತ್ ಟೈಟನ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರನ್ನು ಹಾರ್ದಿಕ್ ಪಾಂಡ್ಯ ಮೈದಾನದ ತುಂಬೆಲ್ಲಾ ತಿರುಗಾಡಿಸಿದರು. ಇದರಿಂದ ರೋಹಿತ್ ಫ್ಯಾನ್ಸ್ ಗರಂ ಆದರು. ಹಾರ್ದಿಕ್ ಯಾರ ಮಾತನ್ನು ಕೇಳುತ್ತಿಲ್ಲ ಎಂಬ ಮಾತುಗಳು ಸಹ ಕೇಳಲು ಆರಂಭಿಸಿದರು.
ಮುಂದಿನ ಆವೃತ್ತಿಯಲ್ಲಿ ಹೊರ ಬೀಳುತ್ತಾ ಗರಂ ಗರಂ ಸುದ್ದಿ?
ಇದನ್ನು ಬೇರೆ ಫ್ರಾಂಚೈಸಿಗಳು ಸೂಕ್ಷ್ಮವಾಗಿ ಗಮನಸಿಸುತ್ತಿದ್ದಾರೆ. ರೋಹಿತ್ ಶರ್ಮಾ ಅವರನ್ನು ಮುಂದಿನ ಆವೃತ್ತಿಯಲ್ಲಿ ಬೇರೆ ತಂಡಗಳ ಪರ ಆಡುವುದನ್ನು ನೋಡಬಹುದ ಎಂಬ ಸಂದೇಹ ಮೂಡುತ್ತಿದೆ. ಈ ಬೆನ್ನಲ್ಲೆ ಸಾಮಾಜಿಕ ತಾಣದಲ್ಲಿ ಆರ್‌ಸಿಬಿ ಅಭಿಮಾನಿಗಳು ಮಾಡಿದ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications