Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ISL: ಚೆನ್ನೈಯಿನ್ ಎಫ್‌ಸಿ ಮಣಿಸಿದ ಬೆಂಗಳೂರು ಎಫ್‌ಸಿ

ಚೆನ್ನೈ: ಭರವಸೆಯ ಆಟಗಾರ ವಿಲಿಯಮ್ಸ್‌ ಹಾಗೂ ಸೆರ್ಟೊ ವೊರ್ನೆಲೆನ್ ಕೋಮ್ ಅವರು ಬಾರಿಸಿದ ಗೋಲುಗಳ ಸಹಾಯದಿಂದ ಬೆಂಗಳೂರು ಫುಟ್ಬಾಲ್ ಕ್ಲಬ್‌ (ಬಿಎಫ್‌ಸಿ) ಇಂಡಿಯನ್ ಸೂಪರ್ ಲೀಗ್‌ ಫುಟ್ಬಾಲ್ ಟೂರ್ನಿಯಲ್ಲಿ ಚೆನ್ನೈಯಿನ್‌ ಎಫ್‌ಸಿ ತಂಡವನ್ನು 2-1 ಗೋಲುಗಳಿಂದ ಮಣಿಸಿ ಅಬ್ಬರಿಸಿದೆ. ಈ ಮೂಲಕ ಬೆಂಗಳೂರು ತಂಡ ಆಡಿದ 13 ಪಂದ್ಯಗಳಲ್ಲಿ 6 ಜಯ, 5 ಡ್ರಾ, 2 ಸೋಲು ಅನುಭವಿಸಿದ್ದು 23 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ.

ಶನಿವಾರ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡ ಅಮೋಘ ಪ್ರದರ್ಶನ ನೀಡಿತು. ಆರಂಭದಲ್ಲಿ ಚೆನ್ನೈನ ತಂಡದ ಆಟಗಾರರು ಗೋಲು ಬಾರಿಸಿ ಒತ್ತಡ ಹೇರುವ ತಂತ್ರವನ್ನು ಅನುಸರಿಸಿದರು. ಪರಿಣಾಮ ಮೊದಲ ಅವಧಿಯ 34ನೇ ನಿಮಿಷದಲ್ಲಿ ಚೆನ್ನೈ ತಂಡ ಬೆಂಗಳೂರು ತಂಡದ ರಕ್ಷಣಾ ವಿಭಾಗವನ್ನು ವಂಚಿಸಿ ಮೊದಲ ಗೋಲಿನ ನಗೆ ಬೀರಿತು. ಈ ಮೂಲಕ ಚೆನ್ನೈ 1-0 ಮುನ್ನಡೆ ಸಾಧಿಸಿತು. ಈ ಮುನ್ನಡೆಯನ್ನು ಹೆಚ್ಚು ಹೊತ್ತು ಕಾಯ್ದುಕೊಳ್ಳಲು ಆಗಲಿಲ್ಲ.

Bengaluru

ಬೆಂಗಳೂರು ಎಫ್‌ಸಿ 43ನೇ ನಿಮಿಷದಲ್ಲಿ ಸೊಗಸಾದ ಪ್ರದರ್ಶನ ನೀಡಿ ಅಬ್ಬರಿಸಿತು. ಇದೇ ಸಮಯದಲ್ಲಿ ಬೆಂಗಳೂರು ತಂಡದ ಭರವಸೆಯ ಆಟಗಾರ ವಿಲಿಯಮ್ಸ್‌ ಗೋಲು ಪೆಟ್ಟಿಗೆ ಎಡಭಾಗದಿಂದ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿ, ಚೆಂಡಿಗೆ ಗೋಲು ಪೆಟ್ಟಿಗೆಯ ದರ್ಶನ ಮಾಡಿಸಿದರು. ಬೆಂಗಳೂರು ಫುಟ್ಬಾಲ್‌ ಕ್ಲಬ್ ಅಭಿಮಾನಿಗಳ ಮನದಲ್ಲಿ ಸಂಭ್ರಮ ಮನೆ ಮಾಡಿತು. ಈ ಗೋಲಿನ ನೆರವಿನಿಂದ ಬೆಂಗಳೂರು 1-1 ಸಮಬಲ ಸಾಧಿಸಿತು.

ಮೊದಲ ಅವಧಿಯ ಕೊನೆಯ ಹಂತದ ವರೆಗೆ ಚೆನ್ನೈ ಗೋಲು ಬಾರಿಸಲು ಹರಸಾಹಸ ಪಟ್ಟಿತು. ಆದರೆ ಆಸೆ ಫಲಿಸಲಿಲ್ಲ.

ಭರ್ಜರಿ ಪ್ರದರ್ಶನ ನೀಡಿದ ಬಿಎಫ್‌ಸಿ

ಎರಡನೇ ಅವಧಿಯ ಆಟದಲ್ಲಿ ಬೆಂಗಳೂರು ತಂಡ ಪಕ್ಕಾ ಪ್ಲ್ಯಾನಿಂಗ್ ಮೂಲಕ ಅಂಗಳಕ್ಕೆ ಇಳಿಯಿತು. ಈ ಹಂತದಲ್ಲಿ ಬಿಎಫ್‌ಸಿ ಎದುರಾಳಿ ತಂಡಕ್ಕೆ ಯಾವುದೇ ಅವಕಾಶವನ್ನು ನೀಡದಂತೆ ಎಚ್ಚರಿಕೆಯಿಂದ ತಡೆಯಿತು. ಈ ಅವಧಿಯ ಆರಂಭದಲ್ಲಿ ಗೋಲು ಬಾರಿಸುವ ಉಭಯ ತಂಡಗಳ ಆಸೆ ಫಲಿಸಲಿಲ್ಲ. ಬೆಂಗಳೂರು ತಂಡದ ಸ್ಟಾರ್ ಆಟಗಾರರು ಸತತ ಪ್ರಯತ್ನ ಮಾಡುತ್ತಲೇ ಸಾಗಿದರು. ಆದರೆ ಇದಕ್ಕೆ ಫಲ ಪಂದ್ಯದ ಕೊನೆಯ ಕ್ಷಣದಲ್ಲಿ ಲಭಿಸಿತು.

ಪಂದ್ಯದ 89ನೇ ನಿಮಿಷದಲ್ಲಿ ವಿಲಿಯಮ್ಸ್‌ ಚೆಂಡಿನ ಮೇಲೆ ಹಿಡಿತ ಸಾಧಿಸಿ ಮತ್ತೆ ಗೋಲು ಪೆಟ್ಟಿಗೆಯ ಎಡಭಾಗದಿಂದ ಅಟ್ಯಾಕ್ ಮಾಡಲು ಪ್ರಯತ್ನಿಸಿದರು. ಆದರೆ ಅವರನ್ನು ಚೆನ್ನೈ ತಂಡದ ರಕ್ಷಣಾ ಆಟಗಾರರು ಸುತ್ತು ವರೆದಿದ್ದರು. ಗೋಲು ಪೆಟ್ಟಿಗೆಯ ಮುಂಭಾಗದಲ್ಲಿ ಬಿಎಫ್‌ಸಿ ತಂಡದ ಸಹ ಆಟಗಾರ ಸೆರ್ಟೊ ವೊರ್ನೆಲೆನ್ ಕೋಮ್ ನಿಂತಿದನ್ನು ಗಮನಿಸಿದ ವಿಲಿಯಮ್ಸ್‌ ಅವರಿಗೆ ಪಾಸ್ ನೀಡಿದರು. ಸೆರ್ಟೊ ವೊರ್ನೆಲೆನ್ ಕೋಮ್ ಯಾವುದೇ ತಪ್ಪು ಮಾಡದೇ ಗೋಲು ಬಾರಿಸಿದರು. ಬೆಂಗಳೂರು ತಂಡದಲ್ಲಿ ಸಂಭ್ರಮ ಮನೆ ಮಾಡಿತು. ಈ ಮೂಲಕ ಬೆಂಗಳೂರು ಎಫ್‌ಸಿ 2-0 ಮುನ್ನಡೆ ಸಾಧಿಸಿತು.

ಕೊನೆಯ ಕ್ಷಣದವರೆಗೂ ಗೋಲು ಬಾರಿಸುವ ಚೆನ್ನೈ ಆಸೆ ಫಲಿಸಲಿಲ್ಲ. ಪರಿಣಾಮ ಪಂದ್ಯವನ್ನು ಕೈ ಚೆಲ್ಲಿದರು.

Story first published: Saturday, May 16, 2026, 20:56 [IST]
Other articles published on May 16, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+