ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಂಗಳವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್‌ಗಳಿಂದ ಮಣಿಸಿ ಐಪಿಎಲ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಈ ವೇಳೆ ಆರ್‌ಸಿಬಿ ಅಭಿಮಾನಿಗಳು ಮಂಗಳವಾರ ರಸ್ತೆಗೆ ಇಳಿದು ಸಂಭ್ರಮಾಚರಣೆ ನಡೆಸಿದರು. ಇನ್ನು ಆರ್‌ಸಿಬಿ ಆಟಗಾರರು ಬುಧವಾರ ಬೆಂಗಳೂರುಗೆ ಬಂದಿಳಿದರು. ಈ ವೇಳೆ ಸಂಭ್ರಾಮಚರಣೆಗೆ ಅಭಿಮಾನಿಗಳು ಸಹ ಜಮಾಯಿಸಿದ್ದರು. ಆಗ ಎಲ್ಲರ ಕಣ್ಣುಗಳು ತಮ್ಮ ತಮ್ಮ ನೆಚ್ಚಿನ ಆಟಗಾರರ ಮೇಲೆ ನೆಟ್ಟಿದ್ದವು.
ಆರ್‌ಸಿಬಿ ಆಟಗಾರರಿಗೆ ಚಿನ್ನಸ್ವಾಮಿ ಮೈದಾನದಲ್ಲಿ ಸನ್ಮಾನ ಎಂಬುದ ಅಭಿಮಾನಿಗಳ ಕಿವಿಯ ಮೇಲೆ ಬೀಳ್ತಾ ಇದ್ದಂತೆ ಅಭಿಮಾನಿಗಳು, ಚಿನ್ನಸ್ವಾಮಿ ಮೈದಾನದತ್ತ ದೌಡಾಯಿಸಲು ಆರಂಭಿಸಿದರು. ಕರ್ನಾಟಕ ಕ್ರಿಕೆಟ್ ಸಂಸ್ಥೆ ಅಭಿಮಾನಿಗಳಿಗೆ ಉಚಿತ ಪ್ರವೇಶವನ್ನು ನೀಡಿತ್ತು. ಆಗಲೇ ನೋಡಿ ಅಭಿಮಾನಿಗಳು ಸಾಗರದಂತೆ ನುಗ್ಗಲು ಆರಂಭಿಸಿದರು. ಒಂದು ಅಂದಾಜಿನ ಪ್ರಕಾರ ಚಿನ್ನಸ್ವಾಮಿ ಸ್ಟೇಡಿಯಂ ಕ್ಯಾಪಿಸಿಟಿಗಿಂತಲೂ 8 ರಿಂದ 9 ಪಟ್ಟು ಜನ ಹೊರಗಡೆ ಇದ್ದರು. ಇನ್ನು ಗೇಟ್‌ಗಳು ಓಪನ್ ಆಗ್ತಾ ಇದ್ದಂತೆ ಸೀಟ್ ಹಿಡಿದುಕೊಳ್ಳಲು ಹೊರಟರು.

ಆಗಲೇ ಅಲಲ್ಲಿಯೇ ಕುಳಿತು ಹೊಂಚುಹಾಕಿದ್ ಜವಾರಾಯ ಅಭಿಮಾನಿಗಳ ಜೀವನದ ಜೊತೆ ಆಟವಾಡಿದ್ದಾನೆ. ಅರ್‌ಸಿಬಿ ಕಪ್ ಗೆದ್ದ ಸಂಭ್ರಮಾಚರಣೆಯನ್ನು ಮಾಡಲು ಬಂದಿದ್ದ ಅಭಿಮಾನಿಗಳಲ್ಲಿ 10 ಜನ ಈಹಲೋಕದ ಪ್ರಯಾಣವನ್ನು ಮುಗಿಸಿದ್ದಾರೆ. ಅತಿರೇಕದ ಅಭಿಮಾನಕ್ಕೆ ಅಮಾಯಕ ಜೀವಗಳು ಬಲಿಯಾಗಿವೆ.
ಈ ಘಟನೆ ನಡೆದಾಗ ಆಟಗಾರರಿಗೆ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸನ್ಮಾನ ಕಾರ್ಯಕ್ರಮ ಭರದಿಂದ ಸಾಗಿತ್ತು. ಒಂದು ಕಡೆ ಅಭಿಮಾನಿಗಳ ನೋವಿನ ಆಕ್ರಂದನ ಮುಗಿಲು ಮುಟ್ತಾ ಇದ್ದರೆ, ಇತ್ತ ಆರ್‌ಸಿಬಿ ಅಭಿಮಾನಿಗಳ ಸಂತಸಕ್ಕೆ ಪಾರವೇ ಇರಲಿಲ್ಲ. ವಿಧಾಸೌಧದ ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿರಲಿಲ್ಲ ಎಂದು ಭಾವಿಸಿದ್ರೂ, ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಕಾರ್ಯಕ್ರಮದ ಮುನ್ನವಂತೂ ನಡೆದಿದೆ.
ಈಗ ಆರ್‌ಸಿಬಿ ಅಭಿಮಾನಿಗಳು ತಮ್ಮ ಅಭಿಮಾನವನ್ನೇ ದೂಷಿಸಿಕೊಳ್ಳುವ ಸ್ಥಿತಿಗೆ ಬಂದು ನಿಂತಿದೆ ಸಂಭ್ರಮಾಚರಣೆ. ಚಿನ್ನಸ್ವಾಮಿ ಸ್ಟೇಡಿಯಂ ಪಕ್ಕದಲ್ಲಿದ್ದ ಆಸ್ಪತ್ರೆಗಳಲ್ಲಿ ಅಭಿಮಾನಿಗಳು ಚಿಕಿತ್ಸೆ ಪಡೆಯುವುದ, ಮೃತ ದೇಹಗಳು ಇದ್ದರೆ, ಇನ್ನೊಂದು ಕಡೆ ಆರ್‌ಸಿಬಿ ಪ್ಲೇಯರ್ಸ್ ಚಿನ್ನಸ್ವಾಮಿ ಅಂಗಳದಲ್ಲಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಅಭಿಮಾನಿಗಳು ಸಾವನ್ನಪ್ಪಿದಾಗ ಸಂಭ್ರಮಾಚರಣೆ ಮಾಡುವುದು ಎಷ್ಟು ಸರಿ ಎಂಬ ಪ್ರಶ್ನೆಗಳು ಈಗ ಉದ್ಭವಿಸಿವೆ. ಇನ್ನು ಆರ್‌ಸಿಬಿ ಮ್ಯಾನೇಜ್ಮೆಂಟ್ ಅಂತೂ ತಮ್ಮ ತಂಡದ 12ನೇ ಆಟಗಾರ ಎಂದರೆ ಅಭಿಮಾನಿಗಳು ಎಂದು ಗೌರವ ನೀಡಿದ್ದರು. ಆದರೆ ಇಂತಹ ದುರ್ಘಟನೆಗಳು ನಡೆದಾಗಲೂ, ಸಂಭ್ರಮಾಚರಣೆಯ ಕಾರ್ಯಕ್ರಮವನ್ನು ಏಕೆ ಮುಂದೂಡಲಿಲ್ಲ ಎಂಬ ಪ್ರಶ್ನೆಗಳು ಏಳುತ್ತಲೇ ಇವೆ.

ಚಿನ್ನಸ್ವಾಮಿ ಮೈದಾನದ ಹಲವು ಗೇಟ್‌ಗಳ ಬಲಿ ಶೂ, ಚಪ್ಪಲಗಳ ರಾಶಿಗಳು ಅಭಿಮಾನದ ಕಥೆಯನ್ನು ಹೇಳುವಂತೆ ಇವೆ. ಆರ್‌ಸಿಬಿ ಮ್ಯಾನೇಜ್ಮೆಂಟ್ ಇನ್ನು ಈ ಘಟನೆಯ ಬಗ್ಗೆ ತುಟಿ ಬಿಚ್ಚಿಲ್ಲ. ಸೂತಕದ ಮನೆಯಲ್ಲಿ ಸಂಭ್ರಮಾಚರಣೆ ಬೇಕಿತ್ತ ಎಂದು ತಂಡದ 12ನೇ ಆಟಗಾರನೇ ಪ್ರಶ್ನೆ ಮಾಡುತ್ತಿದ್ದಾನೆ. ಇದಕ್ಕೆ ಮ್ಯಾನೆಜ್ಮೆಂಟ್ ಉತ್ತರ ಏನು?