RCB ಫೈನಲ್‌ಗೆ: ಬೆಂಗಳೂರಿನಲ್ಲಿ ಅಭಿಮಾನಿಗಳ ಸಂಭ್ರಮಾಚರಣೆ: ಪಾರ್ಟಿ ಶುರು
2016ರ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್‌ಗೆ ಫೈನಲ್‌ಗೆ ಎಂಟ್ರಿ ಪಡೆದಿದ್ದಾರೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಆರ್‌ಸಿಬಿ ತಂಡಗಳು ಕಾದಾಟ ನಡೆಸಿದವು. ಈ ವೇಳೆ ಆರ್‌ಸಿಬಿ ತಂಡದ ಸಂಘಟಿತ ಆಟದ ಪ್ರದರ್ಶನ ನೀಡಿ ಏಕಪಕ್ಷೀಯ ಗೆಲುವು ದಾಖಲಿಸಿತು. ಮೊದಲ ಕ್ವಾಲಿಫೈಯರ್ ಪಂದ್ಯವನ್ನು ಗೆದ್ದ ಆರ್‌ಸಿಬಿ ಫೈನಲ್‌ಗೆ ಅರ್ಹತೆ ಪಡೆದಿದೆ. ಈ ಮೂಲಕ ಆರ್‌ಸಿಬಿ ಒಂಬತ್ತು ವರ್ಷಗಳ ಬಳಿಕ ಪ್ರಶಸ್ತಿ ಸುತ್ತಿಗೆ ಕ್ವಾಲಿಫೈ ಆಗಿದೆ.
ಮುಲ್ಲಾನಪುರದಲ್ಲಿ ಸಂಘಟಿತ ಆಟದ ಪ್ರದರ್ಶನ ನೀಡಿದ ಆರ್‌ಸಿಬಿ ಅಬ್ಬರಿಸಿತು. ಆರಂಭದಲ್ಲಿ ಬೌಲಿಂಗ್‌ನಲ್ಲಿ ಅಬ್ಬರಿಸಿದ್ದ ಬೌಲರ್ಸ್, ನಂತರ ಬ್ಯಾಟರ್‌ಗಳು ಆರ್ಭಟ ನಡೆಸಿದರು. ಪರಿಣಾಮ ಆರ್‌ಸಿಬಿ ಪಂದ್ಯವನ್ನು ಸುಲಭವಾಗಿ ಗೆದ್ದು ಬೀಗಿತು. ಆರ್‌ಸಿಬಿ 9 ವರ್ಷದ ಬಳಿಕ ಫೈನಲ್‌ಗೆ ಎಂಟ್ರಿ ಪಡೆಯುತ್ತಿದ್ದಂತೆ ಆರ್‌ಸಿಬಿ ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟಿತು. ಆರ್‌ಸಿಬಿ ಫ್ಯಾನ್ಸ್ ಬೆಂಗಳೂರಿನ ಬೀದಿಗಳಿಗೆ ಇಳಿದು ಸಂಭ್ರಮಾಚರಣೆ ಆರಂಭಿಸಿದರು. ಈ ಮೂಲಕ ಆರ್‌ಸಿಬಿ ಅಭಿಮಾನಿಗಳ ಸಂಭ್ರಮಕ್ಕೆ ದೊಡ್ಡ ವೇದಿಕೆ ಸಿದ್ಧ ಪಡಿಸಿದೆ.

ಆರ್‌ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ಮುಶೀರ್ ಖಾನ್ ಎತೆದಲ್ಲಿ ಡೀಪ್ ಮಿಡ್ ವಿಕೆಟ್ ಮೇಲೆ ಸಿಕ್ಸರ್ ಬಾರಿಸುತ್ತಿದ್ದಂತೆ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಅಷ್ಟೊತ್ತು ಟಿವಿ ಸೆಟ್‌ಗಳ ಮುಂದೆ ಕುಳಿತು ಮ್ಯಾಚ್ ಆನಂದಿಸುತ್ತಿದ್ದ ಆರ್‌ಸಿಬಿ ಫ್ಯಾನ್ಸ್, ಸಂಭ್ರಮಾಚರಣೆ ತಡೆಯದೇ ಬೀದಿಗೆ ಇಳಿದು ಡ್ಯಾನ್ಸ್ ಮಾಡಿದರು. ಈ ವೇಳೆ ಅಭಿಮಾನಿಗಳು ಪಟಾಕಿ ಹೊಡೆದು ಸಂಭ್ರಮಿಸಿದರು. ಈ ಮೂಲಕ 17 ವರ್ಷಗಳಿಂದ ಮಾಯಾಜಿಂಕೆಯಂತೆ ಕಾಡಿದ ಕಪ್ ಎತ್ತುವ ಕನಸು ಈಗ ಹತ್ತಿದ ಬಂದು ನಿಂತಿದೆ.
ಗುರುವಾರವೇ ಪಾರ್ಟಿ ಆರಂಭ
ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಶುಕ್ರವಾರ ಸಂಜೆ ಆಗುತ್ತಿದ್ದಂತೆ ವೀಕೆಂಡ್ ಮೂಡ್ ಆರಂಭವಾಗುತ್ತದೆ. ಆದರೆ ಈ ವಾರ ಗುರುವಾರ ರಾತ್ರಿಯಿಂದಲೇ ಪಾರ್ಟಿ ಆರಂಭವಾಯಿತು. ಬೆಂಗಳೂರಿನ ಪ್ರತಿಷ್ಠಿತ ಕ್ಲಬ್ ಹಾಗೂ ಹಲವೆಡೆ ಬಿಗ್ ಸ್ಕ್ರಿನ್‌ಗಳಲ್ಲಿ ಮೊದಲ ಕ್ವಾಲಿಫೈಯರ್ ನೋಡಲು ಅವಕಾಶ ಕಲ್ಪಿಸಲಾಗಿತ್ತು. ಆರ್‌ಸಿಬಿ ಅಭಿಮಾನಿಗಳು ರಸ್ತೆಗೆ ಇಳಿದು ಕುಣಿದು ಕುಪ್ಪಳಿಸಿದರು.
ಪಂದ್ಯದ ಫಲಿತಾಂಶ
ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫೀಲ್ಡಿಂಗ್ ಮಾಡಿತು. ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 14.1 ಓವರ್‌ಗಳಲ್ಲಿ 101 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಆರ್‌ಸಿಬಿ 10 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 106 ರನ್ ಸಿಡಿಸಿ ಜಯ ಸಾಧಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications