ಬೆಂಗಳೂರು, ಮಾರ್ಚ್ 4: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರದಿಂದ (ಮಾರ್ಚ್ 4) ಆರಂಭವಾಗಿರುವ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಕ್ರಿಕೆಟ್ ನಲ್ಲಿ ಟಾಸ್ ಗೆದ್ದ ಭಾರತದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಪುಣೆಯಲ್ಲಿ ನಡೆದ ಮೊದಲನೇ ಟೆಸ್ಟ್ ನಲ್ಲಿ ಭಾರತ ಹೀನಾಯವಾಗಿ ಸೋತಿತ್ತು.
ಆ ಮೂಲಕ ಸರಣಿಯಲ್ಲಿ ಆಸ್ಟ್ರೇಲಿಯಾ 1-0 ಯಿಂದ ಮುನ್ನಡೆ ಪಡೆದಿದೆ. ಬೆಂಗಳೂರಿನಲ್ಲಿ ಆಡಲಿರುವ ಆಸ್ಟ್ರೇಲಿಯಾ ತಂಡದ ವಿವರ ಇಂತಿದೆ. ಡೇವಿಡ್ ವಾರ್ನರ್, ಮ್ಯಾಟ್ ರೆನ್ಷಾ, ಸ್ಟೀವನ್ ಸ್ಮಿತ್ (ನಾಯಕ), ಶಾನ್ ಮಾರ್ಷ್, ಪೀಟರ್ ಹ್ಯಾಂಡ್ಸ್ ಕಾಂಬ್, ಮಿಷೆಲ್ ಮಾರ್ಷ್, ಮಾಥ್ಯೂ ವೇಡ್ (ವಿಕೆಟ್ ಕೀಪರ್), ಮಿಷೆಲ್ ಸ್ಟಾರ್ಕ್, ಸ್ಟೀವ್ ಓ ಕೆಫೆ, ನಥಾನ್ ಲ್ಯಾನ್, ಜೋಷ್ ಹೆಜೆಲ್ ವುಡ್.[ಪುಣೆ ಟೆಸ್ಟ್: ಕೊಹ್ಲಿ ಪಡೆಗೆ 333 ರನ್ ಗಳ ಹೀನಾಯ ಸೋಲು]

ಭಾರತ ತಂಡ: ಕೆಎಲ್ ರಾಹುಲ್, ಅಭಿನವ್ ಮುಕುಂದ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ಕೆಕೆ ನಾಯರ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜಾ, ಉಮೇಶ್ ಯಾದವ್, ಇಶಾಂತ್ ಶರ್ಮಾ.
ಅಂಪೈರ್ ಗಳು- ಆರ್ ಕೆ ಇಲಿಂಗ್ ವರ್ಥ್ (ಇಂಗ್ಲೆಂಡ್) ಮತ್ತು ಎನ್ ಜೆ ಲಾಂಗ್ (ಇಂಗ್ಲೆಂಡ್), ಟಿವಿ ಅಂಪೈರ್ - ಆರ್ ಎ ಕೆಟ್ಲ್ ಬೊರೊಗ್ (ಇಂಗ್ಲೆಂಡ್), ಮ್ಯಾಚ್ ರೆಫ್ರಿ- ಬಿಸಿ ಬ್ರಾಡ್ (ಇಂಗ್ಲೆಂಡ್), ರಿಸರ್ವ್ ಅಂಪೈರ್ ನಿತಿನ್ ಮೆನನ್.