Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಂಡೊ ಇಂಟರ್‌ನ್ಯಾಷನಲ್‌ ಕಬಡ್ಡಿ: ಬೆಂಗಳೂರು ರೈನೋಸ್‌ ಚಾಂಪಿಯನ್ಸ್‌

IIPKL 2019 bengaluru vs pune Final.jpg

ಬೆಂಗಳೂರು, ಜೂನ್‌ 04: ಮನೆಯಂಗಣದ ಪ್ರೇಕ್ಷಕರ ಎದುರು ಮಿಂಚು ಮೂಡಿಸಿದ ಬೆಂಗಳೂರು ರೈನೋಸ್‌ ತಂಡ, ಇಲ್ಲಿ ನಡೆದ ಚೊಚ್ಚಲ ಆವೃತ್ತಿಯ ಇಂಡೊ ಇಂಟರ್‌ನ್ಯಾಷನಲ್‌ ಪ್ರೀಮಿಯರ್‌ ಕಬಡ್ಡಿ ಲೀಗ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಪುಣೆ ಪ್ರೈಡ್‌ ತಂಡವನ್ನು ಬಗ್ಗುಬಡಿದು ಚಾಂಪಿಯನ್ಸ್‌ ಪಟ್ಟ ಅಲಂಕರಿಸಿದೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು

ಇಲ್ಲಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಹೈ ವೋಲ್ಟೇಜ್‌ ಫೈನಲ್‌ ಪಂದ್ಯವು ಅತ್ಯಂತ ರೋಚಕವಾಗಿ ಮೂಡಿಬಂದಿತು. ಪಂದ್ಯದ ಮೊದಲ ಕ್ವಾರ್ಟರ್‌ನಲ್ಲಿ ಹಿನ್ನಡೆ ಅನುಭವಿಸಿದರೂ ಬಳಿಕ ಫೀನಿಕ್ಸ್‌ ಪಕ್ಷಿಯಂತೆ ಪುಟಿದೆದ್ದು, ಪುಣೆ ಪ್ರೈಡ್‌ ತಂಡದ ಸವಾಲನ್ನು ಮೆಟ್ಟಿನಿಂತ ಬೆಂಗಳೂರು ರೈನೋಸ್‌ ಅಂತಿಮವಾಗಿ 42-38 ಅಂಕಗಳ ಅಂತರದಲ್ಲಿ ಗೆದ್ದು ಟ್ರೋಫಿ ತನ್ನದಾಗಿಸಿಕೊಂಡಿತು. ಈ ಮೂಲಕ ಐಐಪಿಕೆಎಲ್‌ನ ಚೊಚ್ಚಲ ಆವೃತ್ತಿಯ ಚಾಂಪಿಯನ್ಸ್‌ ಎಂಬ ಇತಿಹಾಸ ಬರೆಯಿತು.

ಪಂದ್ಯದಲ್ಲಿ ಬೆಂಗಳೂರು ತಂಡದ ಪರ ಮಿಂಚಿದ ಸ್ಟಾರ್‌ ರೇಡರ್‌ ವಿಶಾಲ್‌ ಒಟ್ಟು 12 ಅಂಕಗಳನ್ನು ಗಳಿಸುವ ಮೂಲಕ ಪಂದ್ಯಶ್ರೇಷ್ಠ, ಪಂದ್ಯದ ಅತ್ಯುತ್ತಮ ರೇಡರ್‌ ಹಾಗೂ ಪಂದ್ಯದ ಅತ್ಯುತ್ತಮ ಪ್ರೊಡಕ್ಟೀವ್‌ ರೇಡರ್‌ ಗೌರವಗಳನ್ನು ಬಾಚಿಕೊಂಡರು. ಹಿಂದಿನ ಪಂದ್ಯದಲ್ಲಿ 30ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿ ಮಿಂಚಿದ್ದ ವಿಶಾಲ್‌, ಮತ್ತೊಮ್ಮೆ ಸ್ಥಿರತೆ ಕಾಯ್ದುಕೊಳ್ಳುವ ಬೆಂಗಳೂರು ತಂಡದ ಜಯದ ರೂವಾರಿ ಎನಿಸಿದರು. ಇನ್ನು ಡಿಫೆನ್ಸ್‌ನಲ್ಲಿ 6 ಅಂಕಗಳನ್ನು ಗಳಿಸಿ ಗೆಲುವಿಗೆ ಬಲವಾದ ಜಿ. ಅಂಬೇಶ್ವರನ್‌ ಪಂದ್ಯದ ಅತ್ಯುತ್ತಮ ಡಿಫೆಂಡರ್‌ ಗೌರವವನ್ನು ತಮ್ಮದಾಗಿಸಿಕೊಂಡರು.

ಪುಣೆ ತಂಡದ ಪರ ಏಕಾಂಗಿ ಹೋರಾಟ ನಡೆಸಿದ ನಾಯಕ ಅಮರ್‌ಜೀತ್‌ ಸಿಂಗ್‌ 13 ಅಂಕಗಳನ್ನು ಗಳಿಸಿದರಾರೂ ಸೋಲು ತಪ್ಪಿಸಲು ಸಾಧ್ಯವಾಗಲಿಲ್ಲ. ಅವರಿಗೆ ಜೀತೇಂದರ್‌ ಯಾದವ್‌ (7) ಮತ್ತು ಶೇಖ್‌ ಅಬ್ದುಲ್‌ (6) ಉತ್ತಮ ಸಾಥ್‌ ನೀಡಿದರಾದರೂ ಪ್ರಯೋಜನಕ್ಕೆ ಬರಲಿಲ್ಲ. ಲೀಗ್‌ ಹಂತದಲ್ಲಿ ಕೇವಲ 2 ಪಂದ್ಯಗಳನ್ನಷ್ಟೇ ಸೋತು ಉಳಿದ ಪಂದ್ಯಗಳಲ್ಲಿ ಅಬ್ಬರಿಸಿ ಫೈನಲ್‌ಗೆ ತಲುಪಿದ್ದ ಪ್ರಶಸ್ತಿ ಫೇವರಿಟ್ಸ್‌ ಪುಣೆ ಪ್ರೈಡ್‌ ರನ್ನರ್ಸ್‌ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟಿತು.

ಕರ್ನಾಟಕ ರಾಜ್ಯದ ಗೌರವಾನ್ವಿತ ರಾಜ್ಯಪಾಲರಾದ ವಾಜೂಭಾಯ್‌ ವಾಲ, ಬಿಜೆಪಿ ಮುಖಂಡ ಆರ್‌. ಅಶೋಕ್‌, ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌ ದೊರೆ ಸ್ವಾಮಿ ಮತ್ತು ಕರ್ನಾಟಕ ರಾಜ್ಯ ಒಲಿಂಪಿಕ್ಸ್‌ ಸಂಸ್ಥೆ ಅಧ್ಯಕ್ಷ ಕೆ. ಗೋವಿಂದರಾಜು ಸೇರಿದಂತೆ ಮೊದಲಾದ ಗಣ್ಯರು ಫೈನಲ್‌ ಪಂದ್ಯ ವೀಕ್ಷಿಸಿದರು.

ಚೆನ್ನೈ ಚಾಲೆಂಜರ್ಸ್‌ಗೆ 3ನೇ ಸ್ಥಾನ
ಇದಕ್ಕೂ ಮುನ್ನ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಒತ್ತಡ ನಿಭಾಯಿಸಿದ ಚೆನ್ನೈ ಚಾಲೆಂಜರ್ಸ್‌ ತಂಡ ಬಲಿಷ್ಠ ದಿಲರ್‌ ದಿಲ್ಲಿ ತಂಡವನ್ನು 1 ಅಂಕಗಳ ಅಂತರದಲ್ಲಿ ಮಣಿಸುವ ಮೂಲಕ ರೋಚಕ ಗೆಲುವಿನೊಂದಿಗೆ 3ನೇ ಸ್ಥಾನ ತನ್ನದಾಗಿಸಿಕೊಂಡಿತು. ಹಾವು ಏಣಿ ಆಟದಂತೆ ಸಾಗಿದ ಪಂದ್ಯದಲ್ಲಿ ಗೆಲುವು ಯಾರ ಪಾಲಿಗಾದರೂ ಒಲಿಯುವಂತಿತ್ತು. ಅಂತಿಮವಾಗಿ ಚೆನ್ನೈ ತಂಡ 37-36 ಅಂಕಗಳಿಂದ ಡೆಲ್ಲಿ ಪಡೆಯ ಸವಾಲನ್ನು ಮೆಟ್ಟಿನಿಂತಿತು. ಪಂದ್ಯದಲ್ಲಿ ಚೆನ್ನೈ ತಂಡದ ರೇಡರ್‌ ಸುನಿಲ್‌ ಕುಮಾರ್‌ 13 ಅಂಕಗಳನ್ನು ಗಳಿಸಿ ಪಂದ್ಯಶ್ರೇಷ್ಠ, ಪಂದ್ಯದ ಅತ್ಯುತ್ತಮ ರೇಡರ್‌ ಹಾಗೂ ಅತ್ಯುತ್ತಮ ಪ್ರೊಡಕ್ಟೀವ್‌ ರೇಡರ್‌ ಗೌರವಕ್ಕೆ ಪಾತ್ರರಾದರು. ಡಿಫೆನ್ಸ್‌ನಲ್ಲಿ ಮುರು ಅಂಕಗಳನ್ನು ಗಳಿಸಿದ ಚೆನ್ನೈ ಡಿಫೆಂಡರ್‌ ಮೋಫಿಮೊಂಡಲ್‌ ಶ್ರೇಷ್ಠ ಡಿಫೆಂಡರ್‌ ಗೌರವಕ್ಕೆ ಪಾತ್ರರಾದರು.

ಕ್ವಾರ್ಟರ್‌ಗಳ ವಿವರ

1ನೇ ಕ್ವಾರ್ಟರ್‌: ಬೆಂಗಳೂರು 07-09 ಪುಣೆ

2ನೇ ಕ್ವಾರ್ಟರ್‌: ಬೆಂಗಳೂರು 14-06 ಪುಣೆ

3ನೇ ಕ್ವಾರ್ಟರ್‌: ಬೆಂಗಳೂರು 10-10 ಪುಣೆ

4ನೇ ಕ್ವಾರ್ಟರ್‌: ಬೆಂಗಳೂರು 11-13 ಪುಣೆ

ಟೂರ್ನಿಶ್ರೇಷ್ಠ ಆಟಗಾರ: ಸುನಿಲ್‌ ಜೈಪಾಲ್‌
ಟೂರ್ನಿಯ ಅತ್ಯುತ್ತಮ ಆಲ್‌ರೌಂಡರ್‌: ವಿಶಾಲ್‌

Story first published: Tuesday, June 4, 2019, 22:50 [IST]
Other articles published on Jun 4, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+