ಐಪಿಎಲ್ 2020: ತಂಡದಲ್ಲಿದ್ದರೂ ಮೈದಾನಕ್ಕಿಳಿಯದೇ ಬೆಂಚ್ ಕಾದ ಸ್ಟಾರ್ ಆಟಗಾರರು

ಇಂಡಿಯನ್ ಪ್ರೀಮಿಯರ್ ಲೀಗ್ ಅಂದ್ರೆ ಹೊಸ ಪ್ರತಿಭೆಗಳ ಅನ್ವೇಷಣೆ ಎನ್ನಲಾಗುತ್ತದೆ. ಪ್ರತಿ ವರ್ಷವೂ ಹೊಸ ಆಟಗಾರರು ಅವಕಾಶ ಪಡೆದುಕೊಂಡು ತಮ್ಮ ಪ್ರತಿಭೆ ಪ್ರದರ್ಶಿಸುತ್ತಾರೆ. 2020ನೇ ಐಪಿಎಲ್ ಯಶಸ್ವಿಯಾಗಿ ಮುಗಿದಿದೆ. ಈ ಆವೃತ್ತಿಯಲ್ಲಿ ದೇಶಿಯ ಆಟಗಾರರು ಉತ್ತಮ ಪ್ರದರ್ಶನ ತೋರಿದ್ದಾರೆ.
ಆರ್‌ಸಿಬಿ ತಂಡದ ದೇವದತ್ ಪಡಿಕ್ಕಲ್, ಸನ್‌ರೈಸ್ ತಂಡದ ನಟರಾಜನ್, ರಾಹುಲ್ ತೇವಾಟಿಯ, ರವಿ ಬಿಷ್ಣೋಯಿ ಸೇರಿದಂತೆ ಹಲವು ಯುವ ಪ್ರತಿಭೆಗಳು ಈ ವರ್ಷ ಮಿಂಚಿದರು. ಆದ್ರೆ, ದುಬಾರಿ ಬೆಲೆಗೆ ಖರೀದಿಸಿದರೂ ಒಂದೇ ಒಂದು ಪಂದ್ಯ ಆಡಲು ಅವಕಾಶ ದೊರೆಯದೆ ಬೆಂಚ್ ಕಾದವರು ಪಟ್ಟಿಯೂ ದೊಡ್ಡದಿದೆ. ಹಾಗಾದ್ರೆ, ಈ ವರ್ಷ ಮೈದಾನಕ್ಕಿಳಿಯದೇ ಬೆಂಚ್ ಕಾದ ಸ್ಟಾರ್ ಆಟಗಾರರು ಯಾರು? ಮುಂದೆ ಓದಿ....

ಆಸಿಸ್ ಆಟಗಾರ ಕ್ರಿಸ್ ಲೀನ್
ಕಳೆದ ಆವೃತ್ತಿಯಲ್ಲಿ ಕೆಕೆಆರ್ ತಂಡದಲ್ಲಿದ್ದ ಆಸಿಸ್ ಆಟಗಾರ ಕ್ರಿಸ್ ಲೀನ್ ಅವರನ್ನು ಮುಂಬೈ ಇಂಡಿಯನ್ಸ್ 2 ಕೋಟಿ ನೀಡಿ ಖರೀದಿಸಿತ್ತು. ಬಿಗ್‌ಬ್ಯಾಷ್ ಲೀಗ್‌ನಲ್ಲಿ ಅಪಾಯಕಾರಿ ಆಟಗಾರ ಎನಿಸಿಕೊಂಡಿರುವ ಕ್ರಿಸ್ ಲೀನ್ ಮುಂಬೈ ತಂಡದಲ್ಲಿ ಪಕ್ಕಾ ಮಿಂಚ್ತಾರೆ ಎಂಬ ನಿರೀಕ್ಷೆ ಇತ್ತು. ಆದ್ರೆ, ಐಪಿಎಲ್ 2020ರ ಆವೃತ್ತಿಯಲ್ಲಿ ಲೀನ್ ಒಂದೇ ಒಂದು ಪಂದ್ಯ ಆಡಿಲ್ಲ. ಮೈದಾನಕ್ಕಿಳಿಯದೇ ಕ್ರೀಸ್ ಲೀನ್ ಹಿಂತಿರುಗಿದರು.

ಆರ್‌ಸಿಬಿಯಲ್ಲಿ ಪಾರ್ಥಿವ್ ಪಟೇಲ್
ಕಳೆದ ಎರಡು ಆವೃತ್ತಿಯಲ್ಲೂ ಆರ್‌ಸಿಬಿ ಪರವಾಗಿ ಆರಂಭಿಕನಾಗಿ ಉತ್ತಮ ಪ್ರದರ್ಶನ ತೋರಿದ್ದ ಪಾರ್ಥಿವ್ ಪಟೇಲ್ ಈ ಬಾರಿ ಮೈದಾನಕ್ಕೆ ಇಳಿಯಲೇ ಇಲ್ಲ. ದೇವದತ್ ಪಡಿಕ್ಕಲ್‌ಗೆ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡ ಪರಿಣಾಮ ಪಾರ್ಥಿವ್ ಗೆ ತಂಡದಲ್ಲಿ ಸ್ಥಾನ ಸಿಗಲಿಲ್ಲ.

ಸಂದೀಪ್ ಲಮಿಚಾನೆ
ನೇಪಾಳ ಮೂಲದ ಸಂದೀಪ್ ಲಮಿಚಾನೆ ಕಳೆದ ಎರಡು ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸಿದ್ದರು. 9 ಪಂದ್ಯಗಳಿಂದ 13 ವಿಕೆಟ್ ಪಡೆದಿದ್ದರು. ಆದ್ರೆ, ಈ ವರ್ಷ ಸಂದೀಪ್ ಲಮಿಚಾನೆಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶವೇ ಸಿಗಲಿಲ್ಲ. ಆರ್ ಅಶ್ವಿನ್ ಹಾಗೂ ಅಕ್ಷರ್ ಪಟೇಲ್ ಉತ್ತಮ ಆಟದ ಪರಿಣಾಮ ಸಂದೀಪ್ ಲಮಿಚಾನೆ ಇಡೀ ಆವೃತ್ತಿಯಲ್ಲಿ ಬೆಂಚ್ ಕಾದರು.

ಮನನ್ ವೊಹ್ರಾ
ಆರ್‌ಸಿಬಿ ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಪರವಾಗಿ ಒಳ್ಳೆಯ ಆಟ ಪ್ರದರ್ಶಿಸಿದ್ದ ಮನನ್ ವೊಹ್ರಾ ಈ ಬಾರಿ ರಾಜಸ್ಥಾನ ರಾಯಲ್ಸ್ ತಂಡದಲ್ಲಿದ್ದರು. ಆದ್ರೆ, ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಪಡೆಯಲು ಸಾಧ್ಯವಾಗಲಿಲ್ಲ. ಈ ಸೀಸನ್‌ನಲ್ಲಿ ಬೆಂಚ್ ಕಾದರು.

ಶೆರ್ಫೇನ್ ರುದರ್ಫೋರ್ಡ್
ಕಳೆದ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದ ಶೆರ್ಫೇನ್ ರುದರ್ಫೋರ್ಡ್ ಈ ವರ್ಷ ಮುಂಬೈ ಇಂಡಿಯನ್ಸ್ ತಂಡಕ್ಕೆ ಬಂದಿದ್ದರು. ಆದ್ರೆ, ಒಂದೇ ಒಂದು ಪಂದ್ಯ ಸಹ ಮುಂಬೈ ತಂಡದಲ್ಲಿ ಆಡಿಲ್ಲ. ಕ್ರಿಸ್ ಲೀನ್ ಜೊತೆ ಇವರು ಬೆಂಚ್ ಕಾದರು.

ಹಲವು ಸ್ಟಾರ್ ಆಟಗಾರರು
ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಬೌಲರ್ ಮಿಚೆಲ್ ಮೆಕ್ಲೆನಾಘನ್, ರಾಜಸ್ಥಾನ ರಾಯಲ್ಸ್ ತಂಡದ ಓಶೇನ್ ಥಾಮಸ್, ಆರ್‌ಸಿಬಿ ತಂಡದ ಪವನ್ ನೇಗಿ, ಮುಂಬೈ ಇಂಡಿಯನ್ಸ್ ತಂಡದ ಅಂಕುಲ್ ರಾಯ್, ರಾಜಸ್ಥಾನ ರಾಯಲ್ಸ್ ತಂಡದ ಮಿಲ್ಲರ್ ಆಡಿದ್ದು ಒಂದೇ ಪಂದ್ಯ, ಹೈದರಾಬಾದ್ ತಂಡದ ಬಿಲ್ಲಿ ಸ್ಟಾನ್ಲೇಕ್ ಸಹ ಈ ಆವೃತ್ತಿಯಲ್ಲಿ ಬೆಂಚ್ ಕಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications