Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅತ್ಯುತ್ತಮ ಟೆಸ್ಟ್ ತಂಡವನ್ನು ಕನಿಷ್ಠ 3 ಪಂದ್ಯಗಳಿಂದ ನಿರ್ಧರಿಸಬೇಕು: ಕೊಹ್ಲಿ

Best Test team should be decided over at least three games: Virat Kohli

ಸೌಥಾಂಪ್ಟನ್: ಟೆಸ್ಟ್‌ ಕ್ರಿಕೆಟ್‌ನ ಅತ್ಯುತ್ತಮ ತಂಡ ನಿರ್ಧರಿಸಲು ಕನಿಷ್ಠ ಮೂರು ಪಂದ್ಯಗಳಾದರೂ ಇರಬೇಕು. ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್ ಆರಂಭಿಕ ಆವೃತ್ತಿಯ ಫೈನಲ್‌ನಲ್ಲಿ ಒಂದೇ ಪಂದ್ಯ ನಡೆಸಿದಂತೆ ಒಂದೇ ಪಂದ್ಯದಲ್ಲಿ ನಿಜವಾದ ಉತ್ತಮ ತಂಡವನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಸೌಥಾಂಪ್ಟನ್‌ನಲ್ಲಿ ಬುಧವಾರ (ಜೂನ್ 23) ಮುಕ್ತಾಯಗೊಂಡ ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ತಂಡ 8 ವಿಕೆಟ್‌ಗಳ ಸುಲಭ ಸೋಲನುಭವಿಸಿತು. ಈ ಸೋಲಿನ ಬಳಿಕ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ.

'ವಿಶ್ವದ ತ್ಯುತ್ತಮ ತಂಡವನ್ನು ಇದು ನಿರ್ಧರಿಸುತ್ತದೆ ಎಂದು ನಾನು ಒಪ್ಪಲಾರೆ. ಅದು ಟೆಸ್ಟ್‌ ಸರಣಿ ಅನ್ನೋದಾದರೆ ಅದು ಟೆಸ್ಟ್‌ನ ಗುಣ ಲಕ್ಷಣಗಳನ್ನು ಹೊಂದಿರಬೇಕು. ಅಂದರೆ ಮೂರು ಟೆಸ್ಟ್‌ ಪಂದ್ಯಗಳಿರಬೇಕು. ಆಗ ಯಾವುದಾದರೂ ತಂಡಕ್ಕೆ ಕಮ್‌ಬ್ಯಾಕ್‌ ಮಾಡಲು ಅಥವಾ ಎದುರಾಳಿ ತಂಡದ ವಿರುದ್ಧ ಸಂಪೂರ್ಣ ಪಾರಮ್ಯ ಮೆರೆಯಲು ಸಾಧ್ಯವಾಗುತ್ತದೆ,' ಎಂದು ಕೊಹ್ಲಿ ಹೇಳಿದ್ದಾರೆ.

ಟೀಮ್ ಇಂಡಿಯಾದ ಮುಖ್ಯ ಕೋಚ್ ರವಿ ಶಾಸ್ತ್ರಿ ಕೂಡ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ನಲ್ಲಿ ಮೂರು ಪಂದ್ಯಗಳಿರಬೇಕು ಎಂದು ಹೇಳಿದ್ದರು. ಇಂಗ್ಲೆಂಡ್‌ಗೆ ಪ್ರವಾಸ ಹೋಗುವ ಮುನ್ನವೇ ಶಾಸ್ತ್ರಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅಂದ್ಹಾಗೆ, ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯ ಮಳೆಯಿಂದಾಗಿ 4 ದಿನ ಮಾತ್ರ ನಡೆದಿತ್ತು. 2 ದಿನಗಳು ಪಂದ್ಯ ನಡೆಯದಿದ್ದರಿಂದ ರಿಸರ್ವ್ ಡೇನಲ್ಲಿ ಪಂದ್ಯ ಮುಗಿಸಲಾಯ್ತು.

Story first published: Thursday, June 24, 2021, 18:30 [IST]
Other articles published on Jun 24, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+