Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RCB ಪರ ಆಡಿದ್ದು ಮಾನಸಿಕ ಸಿದ್ಧತೆ ಸಹಾಯಕ: ಬೆಥೆಲ್

ಆಷಸ್‌ ಸರಣಿಯಲ್ಲಿ ಇಂಗ್ಲೆಂಡ್ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿ ಜಯ ಸಾಧಿಸಿದೆ. ಆಷಸ್‌ ಸರಣಿಯ ಮೊದಲು ಮೂರು ಪಂದ್ಯಗಳನ್ನು ಗೆದ್ದು ಸರಣಿಯನ್ನು ಈಗಾಗಲೇ ವಶಕ್ಕೆ ಪಡೆದಿರುವ ಆಸ್ಟ್ರೇಲಿಯಾ, ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಸೋಲು ಕಂಡಿದೆ. ಮೆಲ್ಬೋರ್ನ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಇಂಗ್ಲೆಂಡ್‌ 3-1 ರಿಂದ ಹಿನ್ನಡೆ ಅನುಭವಿಸುತ್ತಿದೆ. ಜನವರಿಯಲ್ಲಿ ಆರಂಭವಾಗಲಿರುವ ಸರಣಿಯ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದ ಮೇಲೆ ಈಗ ಎಲ್ಲರ ಚಿತ್ತ ನೆಟ್ಟಿದೆ.

ಮೆಲ್ಬೋರ್ನ್‌ನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್‌ ಬ್ಯಾಟರ್‌ ಜಾಕೋಬ್‌ ಬೆಥೆಲ್‌ ಸ್ಥಿರ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾದರು. ಇವರು ಸಿಡ್ನಿಯಲ್ಲೂ ಇದೇ ಪ್ರದರ್ಶನ ನೀಡುವ ವಿಶ್ವಾಸವನ್ನು ಹೊಂದಿದ್ದಾರೆ. ಅಲ್ಲದೆ ಮೂರನೇ ಕ್ರಮಾಂಕಕ್ಕೆ ನ್ಯಾಯ ಒದಗಿಸುವ ಆಸೆ ಇವರದ್ದಾಗಿದೆ.

Bethell Credits RCB Experience for Mental Toughness as England Wins Fourth Ashes Test at MCG

ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್ ಭರ್ಜರಿ ಜಯ ಸಾಧಿಸುವಲ್ಲಿ ಬೆಥೆಲ್ ಪ್ರಮುಖ ಪಾತ್ರವಹಿಸಿದ್ದರು. ಇವರು ಎರಡನೇ ಇನಿಂಗ್ಸ್‌ನಲ್ಲಿ ಒತ್ತಡದ ಸನ್ನಿವೇಶದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ 40 ರನ್‌ ಬಾರಿಸಿದ್ದರು. ಇವರ ಉತ್ತಮ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್‌ 4 ವಿಕೆಟ್‌ ಜಯ ಸಾಧಿಸಿತ್ತು. ಇಂಗ್ಲೆಂಡ್‌ ಮೊದಲ ಮೂರು ಪಂದ್ಯದಲ್ಲಿ ಓಲಿ ಪೋಪ್ ಅವರಿಗೆ ಮೂರನೇ ಕ್ರಮಾಂಕದಲ್ಲಿ ಆಡಲು ಸೂಚಿಸಿತ್ತು. ಆದರೆ ಇವರು ನಿರೀಕ್ಷಿತ ಪ್ರದರ್ಶನ ನೀಡದ್ದರಿಂದ ಇವರಿಗೆ ಹೊರಗಿಟ್ಟು, ಬೆಥೆಲ್‌ಗೆ ಅವಕಾಶ ನೀಡಲಾಯಿತು.

ಮೂರನೇ ಕ್ರಮಾಂಕದಲ್ಲಿ ಆಡುವುದನ್ನು ಆನಂದಿಸುತ್ತೇನೆ. ಹೊಸ ಚೆಂಡಿನೊಂದಿಗೆ ಮಾತನಾಡುವುದು ಸುಲಭವಲ್ಲ. ಚೆಂಡನ್ನು ಚಲನೆಯನ್ನು ಅರ್ಥಮಾಡಿಕೊಂಡು ಬ್ಯಾಟ್ ಮಾಡಬೇಕಾಗುತ್ತದೆ. ತಾವು ತಂಡ ನೀಡುವ ಯಾವುದೇ ಜವಾಬ್ದಾರಿಯನ್ನು ನಿಭಾಯಿಸಲು ಸಿದ್ಧರಿರುವುದಾಗಿ ಬೆಥೆಲ್‌ ತಿಳಿಸಿದ್ದಾರೆ. ತಂಡದಲ್ಲಿ ಸ್ಥಾನ ಪಡೆದು ಜಯದಲ್ಲಿ ಮಿಂಚುವುದೇ ಅವರ ಗುರಿಯನ್ನು ಬೆಥೆಲ್ ಸ್ಪಷ್ಟಪಡಿಸಿದ್ದಾರೆ.

Bethell Credits RCB Experience for Mental Toughness as England Wins Fourth Ashes Test at MCG

ಐಪಿಎಲ್‌ ಬಗ್ಗೆ ಹೇಳಿದ್ದೇನು?

ಇನ್ನು ಮುಂದುವರೆದ ಮಾತನಾಡಿದ ಬೆಥೆಲ್‌, ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಕಳೆದ ಸಮಯ ದೊಡ್ಡ ಪಂದ್ಯಗಳಿಗೆ ಮಾನಸಿಕವಾಗಿ ಸಿದ್ಧ ಪಡಿಸಿಕೊಳ್ಳಲು ನೆರವಾಯಿತು. ಮೆಲ್ಬೋರ್ನ್‌ನಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳ ಸಮ್ಮುಖದಲ್ಲಿ ಆಡಲು ಐಪಿಎಲ್‌ನಲ್ಲಿ ಆಡಿದ್ದು ನೆರವಾಯಿತು ಎಂದು ಇಂಗ್ಲೆಂಡ್‌ ಯುವ ಆಲ್‌ರೌಂಡರ್‌ ತಿಳಿಸಿದ್ದಾರೆ.

ಇಂಗ್ಲೆಂಡ್‌ ಹಾಗೂ ಆಸ್ಟ್ರೇಲಿಯಾ ನಡುವಣ ಆಷಸ್‌ ಟೆಸ್ಟ್‌ ಸರಣಿಯ 5ನೇ ಪಂದ್ಯ ಸಿಡ್ನಿಯಲ್ಲಿ ಜನವರಿ 4 ರಂದು ನಡೆಯಲಿದೆ. ಈ ಬಾರಿಯ ಆಷಸ್‌ ಸರಣಿ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿದೆ. ಈಗಾಗಲೇ ಆಸ್ಟ್ರೇಲಿಯಾ ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ 8 ವಿಕೆಟ್‌ಗಳಿಂದ ಜಯ ಸಾಧಿಸಿತ್ತು. ಬ್ರಿಸ್ಬೇನ್‌ನಲ್ಲಿ ನಡೆದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಆಸೀಸ್‌ 8 ವಿಕೆಟ್‌ಗಳಿಂದ ಗೆದ್ದು ಬೀಗಿತ್ತು. ಆಡಿಲೇಡ್‌ನಲ್ಲಿ ನಡೆದ ಮೂರನೇ ಟೆಸ್ಟ್‌ ಪಂದ್ಯವನ್ನು ಆತಿಥೇಯ ತಂಡ 82 ರನ್‌ಗಳಿಂದ ಗೆದ್ದು ಆಷಸ್‌ ಸರಣಿಯನ್ನು ತನ್ನ ವಶಕ್ಕೆ ಪಡೆದುಕೊಂಡಿತ್ತು. ನಾಲ್ಕನೇ ಟೆಸ್ಟ್‌ ಪಂದ್ಯವನ್ನು ಗೆದ್ದ ಇಂಗ್ಲೆಂಡ್‌ ಸರಣಿಯಲ್ಲಿ ಪುಟಿದೆದ್ದಿದೆ.

Story first published: Tuesday, December 30, 2025, 13:00 [IST]
Other articles published on Dec 30, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+