ಹಾಕಿ ಸ್ಟಿಕ್‌ನಿಂದ ಕ್ರಿಕೆಟ್ ಬ್ಯಾಟ್‌ವರೆಗೆ ಜೇಮಿಮಾ ಜರ್ನಿ
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಆತಿಥೇಯ ತಂಡ ಅಮೋಘ ಪ್ರದರ್ಶನ ನೀಡಿದೆ. ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಗೆಲುವು ದಾಖಲಿಸುವಲ್ಲಿ ಮುಂಬೈ ಬ್ಯಾಟರ್ ಜೇಮಿಮಾ ರೋಡ್ರಿಗಸ್ ಪ್ರಮುಖ ಪಾತ್ರವನ್ನು ವಹಿಸಿದರು. 25ನೇ ಜೇಮಿಮಾ ತಮ್ಮ ವೃತ್ತಿ ಜೀವನದಲ್ಲಿ ಎಂದು ನೆನಪು ಹಾರದ ಇನಿಂಗ್ಸ್ ಕಟ್ಟಿ ತಂಡಕ್ಕೆ ಆಧಾರವಾದರು. ಜೇಮಿಮಾ ಅವರ ಆಟ ಕಂಡು ಅಭಿಮಾನಿಗಳು ಫುಲ್ ಖುಷ್ ಆದ್ರು. ಇವರಿಗೆ ಅಭಿಮಾನಿಗಳಿಗೆ ಪ್ರೀತಿಯಿಂದ ಹಿಟ್‌ವುಮನ್ ಎಂದು ಕರೆಯಲು ಆರಂಭಿಸಿದ್ದಾರೆ.
ಜೇಮಿಮಾ ಅವರ ರೋಲ್ ಮಾಡೆಲ್ ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ. ಜೇಮಿಮಾ ಅವರ ಫಿಯರ್‌ಲೆಸ್ ಬ್ಯಾಟಿಂಗ್ ನೋಡಿದರೆ ರೋಹಿತ್ ಆಟ ನೆನಪಾಗುತ್ತದೆ. ಗುರುವಾರ ಪಂದ್ಯ ಮುಗಿದ ಬಳಿಕ ರೋಹಿತ್ ಸಹ ಈ ಬಗ್ಗೆ ಟ್ವೀಟ್ ಮಾಡಿದರು. ಜೇಮಿಮಾ ಅಭಿಮಾನಿಗಳ ಹೃದಯ ಮಂದಿರದಲ್ಲಿ ಎಂದೂ ಅಚ್ಚಳೆಯದ ಉಳಿಯುವ ಇನ್ನಿಂಗ್ಸ್ ಕಟ್ಟಿದರು. ಜೇಮಿಮಾ ಒಬ್ಬ ಪರ್ಫೆಕ್ಟ್ ಟೀಮ್ ಪ್ಲೇಯರ್ ಎನ್ನುವುದರಲ್ಲಿ ಎರಡು ಮಾತಿಲ್ಲ.

ಜೇಮಿಮಾ ಯಾರು?
ಭಾರತ ತಂಡದ ಪ್ರತಿಭಾನ್ವಿತ ಬ್ಯಾಟರ್ ಜೇಮಿಮಾ ರೋಡ್ರಿಗಸ್. ಅಲ್ಲದೆ ಪಾರ್ಟ್ ಟೈಮ್ ಆಫ್ ಸ್ಪಿನ್ ಬೌಲರ್. ಇವರು ದೇಶವನ್ನು ಏಕದಿನ, ಟಿ20 ಹಾಗೂ ಟೆಸ್ಟ್ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ಇವರು ಸೆಪ್ಟಂಬರ್ 5, 2000 ರಂದು ಮುಂಬೈನಲ್ಲಿ ಜನಿಸಿದರು. ಇವರು 2018ರಲ್ಲಿ ಸೀಮಿತ ಓವರ್‌ಗಳ ಪಂದ್ಯದಲ್ಲಿ ಭಾರತ ಪರ ಕಣಕ್ಕೆ ಇಳಿದಿರು. ಜೂನಿಯರ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಪರಿಣಾಮ ಇವರಿಗೆ ಭಾರತ ತಂಡದಲ್ಲಿ ಆಡುವ ಅವಕಾಶ ಲಭಿಸಿತು.
ಜೇಮಿಮಾ ಆರಂಭಿಕ ದಿನಗಳು
ಜೇಮಿಮಾ ಕ್ರಿಶ್ಚಿಯನ್ ಕುಟುಂಬದಲ್ಲಿ ಹುಟ್ಟಿದ್ದು, ಇವರ ತಂದೆ ಇವಾನ್ ರೋಡ್ರಿಗಸ್ ಜೂನಿಯರ್ ಕ್ರಿಕೆಟ್ ತಂಡಕ್ಕೆ ಕೋಚ್ ಮಾಡುತ್ತಾರೆ. ಅವರೇ ಜೇಮಿಮಾ ಅವರನ್ನು ಈ ಕ್ರೀಡೆಯತ್ತ ಕರೆತಂದರು. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸೆಂಟ್ ಜೋಸೆಫ್ ಶಾಲೆಯಲ್ಲಿ ಪೂರ್ಣಗೊಳಿಸಿದರು. ಬಳಿಕ ಇವರು ರಿಜ್ವಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ.
ಜೇಮಿಮಾ ಬಹು ಮುಖ ಪ್ರತಿಭೆ
ಜೇಮಿಮಾ ರೋಡ್ರಿಗಸ್ ಒಬ್ಬ ಬಹುಮುಖ ಪ್ರತಿಭೆ. ಇವರು ಹಾಕಿ ಮೈದಾನದಲ್ಲೂ ಸದ್ದು ಮಾಡಿರುವ ಆಟಗಾರ್ತಿ. ಇವರು ಅಂಡರ್ 17 ಹಾಗೂ ಅಂಡರ್ 19 ಮಹಾರಾಷ್ಟ್ರ ತಂಡವನ್ನು ಪ್ರತಿನಿಧಿಸಿದ್ದಾರೆ. ಕೊನೆಗೆ ಹಾಕಿ ಹಾಗೂ ಕ್ರಿಕೆಟ್‌ನಲ್ಲಿ ಒಂದೇ ಬಾರಿ ಅವಕಾಶಗಳು ಸಿಕ್ಕಾಗ ಕ್ರಿಕೆಟ್ ಆಟವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇವರು ಒಬ್ಬ ಬೆಸ್ಟ್ ಗಿಟಾರ್ ಪ್ಲೇಯರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications