Border-Gavaskar Trophy: ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್ ಬಗ್ಗೆ ಮರುಕ ವ್ಯಕ್ತಪಡಿಸಿದ ಅಲನ್ ಬಾರ್ಡರ್

ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಎರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಸೋಲು ಅನುಭವಿಸಿದ ಬಳಿಕ ಸಾಕಷ್ಟು ಟೀಕೆಗಳು ಆಸ್ಟ್ರೇಲಿಯಾ ತಂಡಕ್ಕೆ ಎದುರಾಗಿದೆ. ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗರು ಸೇರಿದಂತೆ ಕ್ರಿಕೆಟ್ ಪಂಡಿತರು ಆಸ್ಟ್ರೇಲಿಯಾ ತಂಡದ ಪ್ರದರ್ಶನಕ್ಕೆ ಭಾರೀ ಟೀಕೆ ವ್ಯಕ್ತಪಡಿಸಿದ್ದಾರೆ. ಆದರೆ ಈ ಸಂದರ್ಭದಲ್ಲಿ ಆಸ್ಟ್ರೇಲಿಯಾದ ದಿಗ್ಗಜ ಆಟಗಾರ ಅಲನ್ ಬಾರ್ಡರ್ ಆಸಿಸ್ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಬಗ್ಗೆ ಮರುಕ ವ್ಯಕ್ತಪಡಿಸಿದ್ದಾರೆ.
ಉಪಖಂಡದಲ್ಲಿ ವೇಗದ ಬೌಲರ್ ಆಗಿದ್ದುಕೊಂಡು ತಂಡವನ್ನು ಮುನ್ನಡೆಸುವುದು ಬಹಳ ಕಠಿಣ ವಿಚಾರ ಎಂದಿರುವ ಅವರು ಸ್ವತಃ ಅವರೇ ಬಹಳ ಕಡಿಮೆ ಓವರ್‌ಗಳ ಬೌಲಿಂಗ್ ದಾಳಿ ನಡೆಸಿದ್ದಾರೆ ಎಂದಿದ್ದಾರೆ. ನಾಯಕನಾಗಿ ಪ್ಯಾಟ್ ಕಮ್ಮಿನ್ಸ್‌ಗೆ ಭಾರತದಲ್ಲಿ ನಿಜವಾದ ಪರೀಕ್ಷೆ ಎದುರಿಸುತ್ತಿದ್ದಾರೆ ಎಂದಿದ್ದಾರೆ.
ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಮೊದಲ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದ ಬಳಿಕ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಬಗ್ಗೆಯೂ ಪ್ರಶ್ನೆಗಳು ಏಳತೊಡಗಿದೆ. ಮೊದಲ ಟೆಸ್ಟ್‌ನಲ್ಲಿ 177 ಹಾಗೂ 91 ರನ್‌ಗಳಿಗೆ ಆಲೌಟ್ ಆಗಿದ್ದ ಆಸ್ಟ್ರೇಲಿಯಾ ಎರಡನೇ ಪಂದ್ಯದಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ 113 ರನ್‌ಗಳಿಗೆ ಆಲೌಟ್ ಆಗಿತ್ತು. ಟೆಸ್ಟ್ ಮಾದರಿಯಲ್ಲಿ ನಂಬರ್ 1 ತಂಡವಾಗಿರುವ ಆಸ್ಟ್ರೇಲಿಯಾ ಈ ಎರಡು ಪಂದ್ಯಗಳಲ್ಲಿಯೂ ಮೂರೇ ದಿನಕ್ಕೆ ಪಂದ್ಯವನ್ನು ಮುಗಿಸಿತ್ತು.
"ನನ್ನ ಪ್ರಕಾರ ಪ್ಯಾಟ್ ಕಮ್ಮಿನ್ಸ್‌ಗೆ ಇದು ಮೊದಲ ನಿಜವಾದ ಅಗ್ನಿಪರೀಕ್ಷೆಯಾಗಿದೆ. ಉಳಿದವೆಲ್ಲಾ ಸುಲಭ ಸವಾಲಾಗಿದ್ದು ಯಾವಾಗ ಉಪಖಂಡಕ್ಕೆ ಪ್ರವಾಸ ಕೈಗೊಳ್ಳುತ್ತೀರೋ ಆಗ ನಿಮ್ಮ ನಿಜವಾದ ಅಗ್ನಿ ಪರೀಕ್ಷೆ ಎದುರಾಗುತ್ತದೆ. ಎಲ್ಲಾ ವಿಭಾಗಗಳು ಕೂಡ ಪರೀಕ್ಷೆಗೆ ಒಳಗಾಗುತ್ತದೆ" ಎಂದಿದ್ದಾರೆ ಆಲನ್ ಬಾರ್ಡರ್.
"ಆತ ಬಹಳಷ್ಟು ವಿಚಾರಗಳ ಬಗ್ಗೆ ತಲೆಕೆಡಿಕೊಳ್ಳುವಂತಾಗಿದೆ. ಸ್ವತಃ ತಾನೇ ಬೌಲಿಂಗ್ ಮಾಡುವುದನ್ನು ಕೂಡ ಮರೆತಿದ್ದಾರೆ ಎನಿಸುತ್ತದೆ. ನಿಮ್ಮ ತಂಡದ ಪ್ರಮುಖ ಬೌಲರ್ ನಾಯಕನಾದರೆ ಇದೆಲ್ಲಾ ಸಂಭವಿಸುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದಿದ್ದಾರೆ ಆಸಿಸ್ ದಿಗ್ಗಜ ಆಲನ್ ಬಾರ್ಡರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications