ಭಾರತದಲ್ಲಿ ಅಭ್ಯಾಸ ಪಂದ್ಯಗಳ ಅಗತ್ಯವೇ ಇಲ್ಲ: ಸರಣಿಗೂ ಮುನ್ನವೇ ಸ್ಟೀವ್ ಸ್ಮಿತ್ ಕ್ಯಾತೆ

ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಗಾಗಿ ಆಸ್ಟ್ರೇಲಿಯಾ ತಂಡ ಈಗಾಗಲೇ ಭಾರತಕ್ಕೆ ಪ್ರಯಾಣ ಬೆಳೆಸಿದೆ. ಇದಕ್ಕೂ ಮುನ್ನ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವ್ ಸ್ಮಿತ್ ಬಾರ್ಡರ್-ಗವಾಸ್ಕರ್ ಸರಣಿಗೂ ಮುನ್ನ ಭಾರತದಲ್ಲಿ ಅಭ್ಯಾಸ ಪಂದ್ಯಗಳಲ್ಲಿ ಆಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಸ್ಮಿತ್ ಭಾರತದಲ್ಲಿ ಅಭ್ಯಾಸ ಪಂದ್ಯಗಳನ್ನು ಆಡುವ ಅಗತ್ಯವೇ ಇಲ್ಲ ಎಂದಿದ್ದಾರೆ. ಅಭ್ಯಾಸ ಪಂದ್ಯಗಳನ್ನು ಆಡಿದರು ಕೂಡ ಅದರಿಂದ ಪ್ರಯೋಜನೆವಾಗದು ಎಂದು ಸ್ಮಿತ್ ಹೇಳಿಕೊಂಡಿದ್ದಾರೆ.
ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ಭಾರತ ಅಭ್ಯಾಸ ಪಂದ್ಯಕ್ಕಾಗಿ ಹಸಿರು ಪಿಚ್‌ಗಳನ್ನು ಸಿದ್ದಪಡಿಸುತ್ತದೆ. ಹೀಗಾಗಿ ನಿಜವಾದ ಪಂದ್ಯದಲ್ಲಿ ಪಿಚ್‌ನ ಪರಿಸ್ಥಿತಿ ಭಿನ್ನವಾಗಿರುತ್ತದೆ. ಇದರಿಂದಾಗಿ ಯಾವುದೇ ಪ್ರಯೋಜನೆವಾಗುವುದಿಲ್ಲ ಎಂದಿದ್ದಾರೆ.
"ಕಳೆದ ಬಾರಿ ನಾವು ಪ್ರವಾಸಕ್ಕೆ ತೆರಳಿದ್ದಾಗ ಅಭ್ಯಾಸ ಪಂದ್ಯದಲ್ಲಿ ಅಭ್ಯಾಸಕ್ಕಾಗಿ ಹಸಿರು ಪಿಚ್ ಸಿಗಲಿದೆ ಎಂದು ಖಚಿತವಾಗಿ ತಿಳಿದಿತ್ತು. ಇದರಿಂದಾಗಿ ಯಾವುದೇ ಪ್ರಯೋಜನವಾಗುವುದಿಲ್ಲ. ಇದರ ಬದಲಾಗಿ ನಾವು ನಮ್ಮದೇ ನೆಟ್ಸ್‌ನಲ್ಲಿ ಸ್ಪಿನ್ನರ್‌ಗಳ ವಿರುದ್ಧ ಸಾಧ್ಯವಾದಷ್ಟು ಎದುರಿಸಬಹುದು. ನಾವು ಯಾವಾಗ ಮೈದಾನಕ್ಕೆ ಇಳಿಯಬಹುದು ಎಂಬುದನ್ನು ಕಾದು ನೋಡೋಣ. ಅಭ್ಯಾಸ ಪಂದ್ಯಗಳನ್ನು ಆಡದಿರುವ ನಮ್ಮ ನಿರ್ಧಾರ ಸರಿಯಾಗಿದೆ" ಎಂದು ಸ್ಟೀವ್ ಸ್ಮಿತ್ ಪೂರ್ವಾಗ್ರಹಪೀಡಿತ ಹೇಳಿಕೆ ನೀಡಿ ಕ್ಯಾತೆ ತೆಗೆದಿದ್ದಾರೆ.
ಇನ್ನು ಇದೇ ವಿಚಾರವಾಗಿ ಆಸ್ಟ್ರೇಲಿಯಾದ ಕೋಚ್ ಮೆಕ್‌ಡಿನಾಲ್ಡ್ ಕೂಡ ಇತ್ತೀಚೆಗೆ ಹೇಳಿಕೆ ನೀಡಿದ್ದರು. "ಕಳೆದ ಹಲವು ವಿದೇಶಿ ಸರಣಿಗಳಿಗಾಗಿ ಪ್ರವಾಸ ಕೈಗೊಂಡಾಗ ನಾವು ಯಾವುದೇ ಅಭ್ಯಾಸ ಪಂದ್ಯವನ್ನು ಆಡಿಲ್ಲ. ಅಷ್ಟು ಪ್ರಮಾಣದ ಅಭ್ಯಾಸದ ಅಗತ್ಯವಿದೆ ಎಂದು ನಮಗೆ ಅನಿಸಿಲ್ಲ. ನಾವು ಭಾರತಕ್ಕೆ ಮೊದಲ ಪಂದ್ಯಕ್ಕೂ ಒಂದು ವಾರ ಮುನ್ನ ತೆರಳುತ್ತಿದ್ದೇವೆ. ಈ ಪ್ರವಾಸವನ್ನು ಹೆಚ್ಚು ಸುದೀರ್ಘಗೊಳಿಸಲು ಬಯಸುವುದಿಲ್ಲ" ಎಂದು ಆಸ್ಟ್ರೇಲಿಯಾದ ಕೋಚ್ ಸಿಡ್ನಿ ಹೆರಾಲ್ಡ್‌ಗೆ ನೀಡಿದ್ದ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದರು.
ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯ ಫೆಬ್ರವರಿ 9ರಂದು ನಾಗ್ಪುರದಲ್ಲಿ ನಡೆಯಲಿದ್ದು ಅದಾದ ಬಳಿಕ ಎರಡನೇ ಟೆಸ್ಟ್ ಪಂದ್ಯ ದೆಹಲಿಯಲ್ಲಿ ನಡೆಯಲಿದೆ. ಮೂರನೇ ಪಂದ್ಯ ಧರ್ಮಶಾಲಾದಲ್ಲಿ ಆಯೋಜನೆಯಾದರೆ ಅಂತಿಮ ಟೆಸ್ಟ್ ಪಂದ್ ಅಹ್ಮದಾಬಾದ್‌ನಲ್ಲಿ ನಡೆಯಲಿದೆ
ಇತ್ತಂಡಗಳ ಸ್ಕ್ವಾಡ್ ಹೀಗಿದೆ ಆಸ್ಟ್ರೇಲಿಯಾ ತಂಡ ಹೀಗಿದೆ: ಪ್ಯಾಟ್ ಕಮ್ಮಿನ್ಸ್ (ನಾಯಕ), ಆಷ್ಟನ್ ಅಗರ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಪೀಟರ್ ಹ್ಯಾಂಡ್ಸ್‌ಕಾಂಬ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೈನ್, ನಾಥನ್ ಲಿಯಾನ್, ಲ್ಯಾನ್ಸ್ ಮೋರಿಸ್, ಟಾಡ್ ಮರ್ಫಿ, ಮ್ಯಾಥ್ಯೂ ರೆನ್ಶಾ, ಸ್ಟೀವ್ ಸ್ಮಿತ್ (ಉಪನಾಯಕ), ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವೆಪ್ಸನ್, ಡೇವಿಡ್ ವಾರ್ನರ್
ಭಾರತದ ಸ್ಕ್ವಾಡ್ ಹೀಗಿದೆ(ಮೊದಲ 2 ಟೆಸ್ಟ್ ಪಂದ್ಯಗಳಿಗೆ): ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಆರ್. ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ , ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನಾದ್ಕಟ್, ಸೂರ್ಯಕುಮಾರ್ ಯಾದವ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications