BGT 2023: ಸರಣಿಯಲ್ಲಿ ಅತಿ ಹೆಚ್ಚು ರನ್, ಅತಿ ಹೆಚ್ಚು ವಿಕೆಟ್ ಗಳಿಸಿದವರ ವಿವರ

ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ ಮುಕ್ತಾಯವಾಗಿದೆ. 4 ಪಂದ್ಯಗಳ ಸರಣಿಯನ್ನು ಭಾರತ 2-1 ಅಂತರದಲ್ಲಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಆಸ್ಟ್ರೇಲಿಯಾ ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿದರೆ, ಅಹಮದಾಬಾದ್‌ನಲ್ಲಿ ನಡೆದ ಕೊನೆಯ ಪಂದ್ಯ ಡ್ರಾನಲ್ಲಿ ಅಂತ್ಯವಾಯಿತು.
ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ ಬೌಲರ್ ಗಳು ಮಿಂಚಿದರು. ಅದರಲ್ಲೂ ಸ್ಪಿನ್ನರ್ ಗಳು ಪಂದ್ಯದ ಫಲಿತಾಂಶವನ್ನು ನಿರ್ಧರಿಸುವಂತೆ ಬೌಲಿಂಗ್ ಮಾಡಿದರು. ಮೊದಲ ಮೂರು ಪಂದ್ಯಗಳಲ್ಲಿ ದಾಖಲಾಗಿದ್ದು ಕೇವಲ ಒಂದು ಶತಕವಾದರೆ. ಕೊನೆಯ ಪಂದ್ಯದಲ್ಲಿ ಮಾತ್ರ 4 ಶತಕಗಳು ದಾಖಲಾದವು.
ಮೊದಲ ಎರಡು ಪಂದ್ಯಗಳಲ್ಲಿ ಅತ್ಯುತ್ತಮವಾಗಿ ಆಡಿದ ಭಾರತ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್, ನಾಥನ್ ಲಿಯಾನ್, ಮ್ಯಾಥ್ಯೂ ಕುಹ್ನೆಮನ್ ಹೆಚ್ಚಿನ ವಿಕೆಟ್ ಪಡೆದುಕೊಂಡರು.
ಮೊದಲ ಮೂರು ಪಂದ್ಯಗಳು ಮೂರೇ ದಿನಕ್ಕೆ ಮುಕ್ತಾಯವಾದರೆ, ಕೊನೆಯ ಪಂದ್ಯ ಮಾತ್ರ 5 ದಿನ ನಡೆಯಿತು. ಬ್ಯಾಟರ್ ಗಳು ಅತ್ಯುತ್ತಮವಾಗಿ ಆಡುವ ಮೂಲಕ ಡ್ರಾನಲ್ಲಿ ಮುಕ್ತಾಯವಾಯಿತು. ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರು, ವಿಕೆಟ್ ಪಡೆದವರು, ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ವಿವರ.

ಅಗ್ರಸ್ಥಾನದಲ್ಲಿ ಉಸ್ಮಾನ್ ಖವಾಜಾ
ಇಡೀ ಸರಣಿಯಲ್ಲಿ ಆಸ್ಟ್ರೇಲಿಯಾದ ಬ್ಯಾಟರ್ ಗಳು ರನ್ ಗಳಿಸಲು ಪರದಾಡಿದರೆ, ಉಸ್ಮಾನ್ ಖವಾಜಾ ಮಾತ್ರ ಉತ್ತಮವಾಗಿ ಆಡಿದರು. 4 ಪಂದ್ಯಗಳಿಂದ 7 ಎಸೆತಗಳಲ್ಲಿ 47.57 ಸರಾಸರಿಯಲ್ಲಿ 333 ರನ್ ಗಳಿಸುವ ಮೂಲಕ 2023ರ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಅಹಮದಾಬಾದ್ ಟೆಸ್ಟ್‌ನಲ್ಲಿ ಅವರು 180 ರನ್ ಗಳಿಸಿ ಮಿಂಚಿದರು.
ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದು, 4 ಪಂದ್ಯಗಳಲ್ಲಿ 6 ಇನ್ನಿಂಗ್ಸ್‌ಗಳಿಂದ 49.59 ಸರಾಸರಿಯಲ್ಲಿ 297 ರನ್ ಗಳಿಸಿದರು. ಅತ್ಯುತ್ತಮ ಪ್ರದರ್ಶನ ನೀಡಿದ ಅಕ್ಷರ್ ಪಟೇಲ್ 4 ಪಂದ್ಯಗಳಿಂದ 5 ಇನ್ನಿಂಗ್ಸ್‌ಗಳಲ್ಲಿ 88.00 ಸರಾಸರಿಯಲ್ಲಿ 264 ರನ್ ಗಳಿಸಿದ್ದಾರೆ.

ಅಶ್ವಿನ್, ಜಡೇಜಾ ಅತ್ಯುತ್ತಮ ಬೌಲಿಂಗ್
ಇಡೀ ಸರಣಿಯಲ್ಲಿ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಭಾರತದ ಪರವಾಗಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. 4 ಪಂದ್ಯಗಳಲ್ಲಿ ರವಿಚಂದ್ರನ್ ಅಶ್ವಿನ್ 25 ವಿಕೆಟ್ ಪಡೆದರು ಮಿಂಚಿದರು. ಎರಡು ಬಾರಿ 5 ಕ್ಕಿಂತ ಹೆಚ್ಚು ವಿಕೆಟ್ ಪಡೆದುಕೊಂಡರು. ರವೀಂದ್ರ ಜಡೇಜಾ 4 ಪಂದ್ಯಗಳಿಂದ 22 ವಿಕೆಟ್ ಪಡೆದರು. ಅವರು ಕೂಡ 2 ಬಾರಿ 5ಕ್ಕಿಂತ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದರು.
ನಾಥನ್ ಲಿಯಾನ್ ಆಸ್ಟ್ರೇಲಿಯಾ ಪರವಾಗಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. 4 ಪಂದ್ಯಗಳಲ್ಲಿ 22 ವಿಕೆಟ್ ಪಡೆದುಕೊಂಡಿದ್ದಾರೆ. ಟಾಡ್ ಮರ್ಫಿ 4 ಪಂದ್ಯಗಳಲ್ಲಿ 14 ವಿಕೆಟ್ ಪಡೆಯುವ ಮೂಲಕ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಅತಿ ಹೆಚ್ಚು ವೈಯಕ್ತಿಕ ಸ್ಕೋರ್
ಸರಣಿಯಲ್ಲಿ ಅತಿ ಹೆಚ್ಚು ವೈಯಕ್ತಿಕ ರನ್ ಗಳಿಸಿದವರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅಹಮದಾಬಾದ್ ಟೆಸ್ಟ್‌ನಲ್ಲಿ 186 ರನ್ ಗಳಿಸಿದ ಕೊಹ್ಲಿ ಮೊದಲನೇ ಸ್ಥಾನದಲ್ಲಿದ್ದರೆ, ಉಸ್ಮಾನ್ ಖವಾಜಾ 180 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಅಹಮದಾಬಾದ್ ಟೆಸ್ಟ್‌ನಲ್ಲಿ 128 ರನ್ ಗಳಿಸಿದ ಶುಭಮನ್ ಗಿಲ್ ಮೂರನೇ ಸ್ಥಾನದಲ್ಲಿದ್ದಾರೆ.
ರವೀಂದ್ರ ಜಡೇಜಾ ಮೊದಲ ಎರಡು ಟೆಸ್ಟ್ ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಪಂದ್ಯಶ್ರೇಷ್ಠ ಆಟಗಾರ ಪ್ರಶಸ್ತಿ ಜೊತೆ, ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications