Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇದು ಸರ್ವಶ್ರೇಷ್ಠ ಗೆಲುವುಗಳಲ್ಲಿ ಒಂದು: ಇಂದೋರ್ ಟೆಸ್ಟ್ ಗೆಲುವಿನ ಬಗ್ಗೆ ಮಾರ್ಕ್ ವಾ ಪ್ರತಿಕ್ರಿಯೆ

BGT 2023: Mark Waugh praises Australian team performance said One of our greatest victories in Test cricket

ಇಂದೋರ್ ಟೆಸ್ಟ್‌ನಲ್ಲಿ ಅಮೋಘ ಗೆಲುವು ಸಾಧಿಸಿದ ಆಸ್ಟ್ರೇಲಿಯಾ ತಂಡದ ಸಾಧನೆಯನ್ನು ಆಸ್ಟ್ರೇಲಿಯಾದ ಮಾಜಿ ನಾಯಕ ಮಾರ್ಕ್ ವಾ ಕೊಂಡಾಡಿದ್ದಾರೆ. ಕ್ರಿಕೆಟ್ ಇತಿಹಾಸದ ಅತ್ಯುತ್ತಮ ಗೆಲುವುಗಳಲ್ಲಿ ಇದು ಕೂಡ ಒಂದು ಎಂದು ಬಣ್ಣಿಸಿದ್ದಾರೆ ಆಸಿಸ್ ಮಾಜಿ ನಾಯಕ. ಸ್ಟೀವ್ ಸ್ಮಿತ್ ನಾಯಕತ್ವದ ಆಸ್ಟ್ರೇಲಿಯಾ ತಂಡ ಇಂದೋರ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭರ್ಜರಿ 9 ವಿಕೆಟ್‌ಗಳ ಅಂತರದ ಗೆಲುವು ಸಾಧಿಸಿದೆ.

"ಗಾಯಗಳನ್ನು ಗಮನಿಸಿದರೆ, ನಾಯಕ ಪ್ಯಾಟ್ ಕಮ್ಮಿನ್ಸ್ ತವರಿಗೆ ವಾಪಸಾಗಿದ್ದಾರೆ, ವಾರ್ನರ್ ಗಾಯಗೊಂಡಿದ್ದಾರೆ, ಇಬ್ಬರು ಹೊಸ ಸ್ಪಿನ್ನರ್‌ಗಳು ಗುಣಮಟ್ಟದ ತಂಡದ ವಿರುದ್ಧ ಕಣಕ್ಕಿಳಿದಿದ್ದಾರೆ. ಈ ಎಲ್ಲಾ ವಿಚಾರಗಳನ್ನು ನೋಡಿದಾಗ ಟೆಸ್ಟ್ ಇತಿಹಾಸದ ಶ್ರೇಷ್ಠ ಗೆಲುವುಗಳಲ್ಲಿ ಇದು ಕೂಡ ಒಂದು" ಎಂದಿದ್ದಾರೆ ಮಾರ್ಕ್ ವಾ.

ಈ ಸರಣಿಯಲ್ಲಿ ಕಮ್‌ಬ್ಯಾಕ್ ಮಾಡಲು ಆಸ್ಟ್ರೇಲಿಯಾ ತಂಡ ಹೋರಾಡಿದ ರೀತಿಗೆ ಮಾರ್ಕ್ ವಾ ವಿಶೇಷ ಮೆಚ್ಚುಗೆ ಸೂಚಿಸಿದ್ದಾರೆ. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿದೆ. ಪ್ಯಾಟ್ ಕಮ್ಮಿನ್ಸ್ ಕೌಟುಂಬಿಕ ಕಾರಣದಿಂದಾಗಿ ತವರಿಗೆ ಮರಳಿರುವ ಕಾರಣ ಸ್ಟೀವ್ ಸ್ಮಿತ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ತಂಡ ಭಾರತವನ್ನು ಎದುರಿಸಿತ್ತು.

ಇನ್ನು ಈ ಗೆಲುವಿನ ಬಳಿಕ ಸ್ಟೀವ್ ಸ್ಮಿತ್ ಮಾತನಾಡಿ, "ನನ್ನ ಪ್ರಕಾರ ಇದೊಂದು ಶ್ರೇಷ್ಟವಾದ ತಂಡದ ಪ್ರದರ್ಶನವಾಗಿತ್ತು. ಪಂದ್ಯದ ಮೊದಲ ದಿನದಿಂದಲೂ ನಮ್ಮ ತಂಡದ ಹೋರಾಟದ ರೀತಿ ಅದ್ಭುತವಾಗಿತ್ತು. ತಂಡದೊಳಗೆ ಆಟಗಾರರ ಪ್ರತಿಣೆ ಹಾಗೂ ಸಾಮರ್ಥ್ಯವನ್ನು ಒದು ಸಾಬೀತುಪಡಿಸುತ್ತದೆ" ಎಂದಿದ್ದಾರೆ.

"ನಮ್ಮ ತಂಡದಲ್ಲಿ ಸಾಕಷ್ಟು ಗುಣಮಟ್ಟದ ಆಟಗಾರರು ಇದ್ದಾರೆ. ನಮ್ಮ ಮೇಲೆ ನಾವು ನಂಬಿಕೆಯಿಟ್ಟರೆ ನಮ್ಮದೇ ಮಾದರಿಯಲ್ಲಿ ಸುದೀರ್ಘ ಕಾಲ ಆಡಿದರೆ ನಾವು ಹಿನ್ನಡೆ ಅನುಭವಿಸುವುದಕ್ಕಿಂತಲೂ ಹೆಚ್ಚಾಗಿ ಯಶಸ್ಸು ಕಾಣುತ್ತೇವೆ" ಎಂದಿದ್ದಾರೆ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್.

ಟೀಮ್ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಶ್ರೀಕರ್ ಭರತ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್,
ಬೆಂಚ್: ಕೆಎಲ್ ರಾಹುಲ್, ಮೊಹಮ್ಮದ್ ಶಮಿ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಕುಲದೀಪ್ ಯಾದವ್, ಜಯದೇವ್ ಉನದ್ಕಟ್

ಆಸ್ಟ್ರೇಲಿಯಾ: ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೈನ್, ಸ್ಟೀವನ್ ಸ್ಮಿತ್ (ನಾಯಕ), ಪೀಟರ್ ಹ್ಯಾಂಡ್ಸ್ಕಾಂಬ್, ಕ್ಯಾಮರೂನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಟಾಡ್ ಮರ್ಫಿ, ಮ್ಯಾಥ್ಯೂ ಕನ್ನೇಮನ್
ಬೆಂಚ್: ಮಿಚೆಲ್ ಸ್ವೆಪ್ಸನ್, ಸ್ಕಾಟ್ ಬೋಲ್ಯಾಂಡ್, ಮ್ಯಾಟ್ ರೆನ್ಶಾ, ಲ್ಯಾನ್ಸ್ ಮೋರಿಸ್

Story first published: Friday, March 3, 2023, 19:33 [IST]
Other articles published on Mar 3, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+