Ind vs Aus: ಆರಂಭಿಕ ಸ್ಥಾನಕ್ಕೆ ಶುಬ್ಮನ್ ಗಿಲ್ ಸೂಕ್ತ ಎಂದ ರವಿ ಶಾಸ್ತ್ರಿ

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾದ ಆರಂಭಿಕ ಸ್ಥಾನದ ಬಗ್ಗೆ ಅತಿಯಾದ ಚರ್ಚೆ ನಡೆದಿದೆ. ಅದ್ಭುತ ಫಾರ್ಮ್‌ನಲ್ಲಿರುವ ಶುಬ್ಮನ್ ಗಿಲ್ ಅವರನ್ನು ಆರಂಭಿಕ ಎರಡು ಪಂದ್ಯಗಳಲ್ಲಿ ಆಡುವ ಬಳಗದಿಂದ ಕೈಬಿಟ್ಟು ಕೆಎಲ್ ರಾಹುಲ್‌ಗೆ ಅವಕಾಶ ನೀಡುವ ನಿರ್ಧಾರಕ್ಕೆ ಟೀಮ್ ಮ್ಯಾನೇಜ್‌ಮೆಂಟ್ ಬಂದಿತ್ತು. ಆದರೆ ಈ ನಿರ್ಧಾರವನ್ನು ಸಮರ್ಥಿಸುವ ರೀತಿಯಲ್ಲಿ ಕೆಎಲ್ ರಾಹುಲ್ ಪ್ರದರ್ಶನ ನೀಡದೆ ಸಾಕಷ್ಟು ಟೀಕೆಗೆ ಗುರಿಯಾಗಿದ್ದಾರೆ. ಹೀಗಾಗಿ ಮೂರನೇ ಪಂದ್ಯದಲ್ಲಾದರೂ ಗಿಲ್‌ಗೆ ಅವಕಾಶ ದೊರೆಯಲಿ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ.
ಮಾಜಿ ಕೋಚ್ ರವಿ ಶಾಸ್ತ್ರಿ ಕೂಡ ಇದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು ಶುಬ್ಮನ್ ಗಿಲ್‌ಗೆ ಅವಕಾಶ ದೊರೆಯಬೇಕು ಎಂದಿದ್ದಾರೆ. ಶುಬ್ಮನ್ ಗಿಲ್ ಅವರಂತಾ ಆಟಗಾರನಿಗೆ ಹೇಗೆ ಅವಕಾಶ ದೊರೆಯದೆ ಇರಲು ಸಾಧ್ಯ ಎಂದಿರುವ ರವಿ ಶಾಸ್ತ್ರಿ ಆತ ಸ್ಥಾನ ಪಡೆಯಲು ಅರ್ಹ ಆಟಗಾರ ಎಂದಿದ್ದಾರೆ.
"ಈ ಕ್ಷಣಕ್ಕೆ ಶುಬ್ಮನ್ ಗಿಲ್ ಅದ್ಭುತ ಪ್ರದರ್ಶನ ನೀಡುತ್ತಿರುವ ಆಟಗಾರ ಗಿಲ್. ಆತ ರನ್ ಬಾರಿಸಲಿ ಅಥವಾ ಬಾರಿಸದೇ ಇರಲಿ. ಫಾರ್ಮ್, ಅರ್ಹತೆ, ಎಲ್ಲದರಲ್ಲೂ ಆತ ಅರ್ಹನಾಗಿರುವ ಆಟಗಾರ. ಆತನಿಗೆ ಅವಕಾಶ ದೊರೆಯಬೇಕು ಎಂದಿದ್ದಾರೆ ಮಾಜಿ ಕೋಚ್ ರವಿ ಶಾಸ್ತ್ರಿ.
"ಆಟಗಾರನೊಬ್ಬ ಆತ್ಮವಿಶ್ವಾಸದಲ್ಲಿದ್ದಾಗ ಆತನ ಬ್ಯಾಟ್‌ನಿಂದ ಸರಾಗವಾಗಿ ರನ್ ಹರಿದುಬರುತ್ತದೆ. ಶುಬ್ಮನ್ ಗಿಲ್ ಬ್ಯಾಟಿಂಗ್ ನಡೆಸುವ ರೀತಿಗೆ ಈತ ಆಡುವ ಬಳಗದಲ್ಲಿ ಇಲ್ಲದಿರಲು ಹೇಗೆ ಸಾಧ್ಯ ಎಂದು ತಂದಲ್ಲಿಯೇ ಕೆಲ ಆಟಗಾರರು ಪ್ರಶ್ನಿಸಿಕೊಳ್ಳುತ್ತಿದ್ದಾರೆ. ಅವರು ಹಾಗೆ ಚಿಂತಿಸಲೇಬೇಕು. ಯಾಕೆಂದರೆ ಡ್ರೆಸ್ಸಿಂಗ್ ರೂಮ್ ಹಾಗೆಯೇ ಇರುತ್ತದೆ" ಎಂದಿದ್ದಾರೆ ರವಿ ಶಾಸ್ತ್ರಿ.
ಟೀಮ್ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಶ್ರೀಕರ್ ಭರತ್ (ವಿಕೆಟ್ ಕೀಪರ್), ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶುಭಮನ್ ಗಿಲ್, ಇಶಾನ್ ಕಿಶನ್,
ಆಸ್ಟ್ರೇಲಿಯಾ: ಕುಲದೀಪ್ ಯಾದವ್, ಸೂರ್ಯಕುಮಾರ್ ಯಾದವ್, ಜಯದೇವ್ ಉನದ್ಕತ್, ಉಮೇಶ್ ಯಾದವ್, ಉಸ್ಮಾನ್ ಖವಾಜಾ, ಟ್ರಾವಿಸ್ ಹೆಡ್, ಮಾರ್ನಸ್ ಲ್ಯಾಬುಶೈನ್, ಸ್ಟೀವನ್ ಸ್ಮಿತ್, ಮ್ಯಾಟ್ ರೆನ್ಶಾ, ಪೀಟರ್ ಹ್ಯಾಂಡ್ಸ್ಕಾಂಬ್, ಅಲೆಕ್ಸ್ ಕ್ಯಾರಿ, ನಾಥನ್ ಲಿಯಾನ್, ಟಾಡ್ ಮರ್ಫಿ, ಮ್ಯಾಥ್ಯೂ ಕುಹ್ನೆಮನ್, ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವೆಪ್ಸನ್, ಕ್ಯಾಮರೂನ್ ಗ್ರೀನ್, ಸ್ಕಾಟ್ ಬೋಲ್ಯಾಂಡ್, ಲ್ಯಾನ್ಸ್ ಮೋರಿಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications