Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನಾನು ಎದುರಿಸಿದ ಅತ್ಯುತ್ತಮ ವಿದೇಶಿ ಸ್ಪಿನ್ನರ್ ಆತ: ಆಸಿಸ್ ದಿಗ್ಗಜನನ್ನು ಕೊಂಡಾಡಿದ ರೋಹಿತ್

BGT 2023: Rohit Sharma praises Nathan Lyon said is the best overseas spinner he faced in India

ಬಾರ್ಡರ್-ಗವಾಸ್ಕರ್ ಟ್ರೋಫಿಯ ಈ ಬಾರಿಯ ಭಾರತ ಪ್ರವಾಸದಲ್ಲಿ ಆಸ್ಟ್ರೇಲಿಯಾ ತಂಡ ಚೊಚ್ಚಲ ಗೆಲುವು ಸಾಧಿಸಿದೆ. ಮೊದಲ ಎರಡು ಪಂದ್ಯಗಳಲ್ಲಿ ನೀಡಿದ ಕಳಪೆ ಪ್ರದರ್ಶನದ ಬಳಿಕ ಸಾಕಷ್ಟು ಟೀಕೆಗೆ ಒಳಗಾಗಿದ್ದ ಆಸ್ಟ್ರೇಲಿಯಾ ತಂಡ ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿದ್ದು ಇಂದೋರ್ ಟೆಸ್ಟ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದೆ. ಆಸ್ಟ್ರೇಲಿಯಾ ತಂಡದ ಈ ಗೆಲುವಿನಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸಿದ್ದು ಆಸಿಸ್ ತಂಡದ ಅನುಭವಿ ಸ್ಪಿನ್ನರ್ ನಾಥನ್ ಲಿಯಾನ್. ಈ ಪಂದ್ಯದಲ್ಲಿ ಅಕ್ಷರಶಃ ಲಿಯಾನ್ ಭಾರತಕ್ಕೆ ದುಃಸ್ವಪ್ನವಾಗಿ ಕಾಡಿದ್ದಾರೆ.

ಈ ಅಮೋಘ ಪ್ರದರ್ಶನದ ಬಳಿಕ ಆಸ್ಟ್ರೇಲಿಯಾದ ಅನುಭವ ಸ್ಪಿನ್ನರ್ ಬಗ್ಗೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ವಿಶೇಷ ಮೆಚ್ಚುಇಗೆಯ ಮಾತುಗಳನ್ನಾಡಿದ್ದಾರೆ. ತಾನು ಎದುರಿಸಿದ ಅತ್ಯುತ್ತಮ ವಿದೇಶಿ ಸ್ಪಿನ್ನರ್ ನಾಥನ್ ಲಿಯಾನ್ ಎಂದು ಬಣ್ಣಿಸಿದ್ದಾರೆ ಟೀಮ್ ಇಂಡಿಯಾ ನಾಯಕ.

ನಾಥನ್ ಲಿಯಾನ್ ಇಂದೋರ್ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲೊ ಮ್ಯಾಚ್ ವಿನ್ನಿಂಗ್ 8 ವಿಕೆಟ್ ಪಡೆದುಕೊಂಡಿದ್ದರು. ಈ ಮೂಲಕ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಕಬಳಿಸಿದ 20 ವಿಕೆಟ್‌ಗಳ ಪೈಕಿ 11 ವಿಕೆಟ್‌ಗಳು ಲಿಯಾನ್ ಪಾಲಾದವು. ಈ ವೇಳೆ ಆಸಿಸ್ ದಿಗ್ಗಜ ಅನೇಕ ದಾಖಲೆಗಳನ್ನು ಕೂಡ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

"ನಾನು ಎದುರಿಸಿದ ವಿದೇಶಿ ಸ್ಪಿನ್ನರ್‌ಗಳ ಪೈಕಿ ಲಿಯಾನ್ ಬಹುಶಃ ಅತ್ಯುನ್ನತ ಸ್ಥಾನದಲ್ಲಿದ್ದಾರೆ. ಮುರಳಿ ಹಾಗೂ ವಾರ್ನ್ ಥರದ ಆಟಗಾರರನ್ನು ನಾನು ಎದುರಿಸಿಲ್ಲ. ಪ್ರಸ್ತುತ ಪೀಳಿಗೆಯಲ್ಲಿ ಭಾರತದಲ್ಲಿ ಎದುರಿಸಿದ ಅತ್ಯುತ್ತಮ ಬೌಲರ್" ಎಂದು ಹೇಳಿದ್ದಾರೆ ರೋಹಿತ್ ಶರ್ಮಾ. ಮುಂದುವರಿದು ಅವರು "ಆತ ತನ್ನ ಲೈನ್ ಹಾಗೂ ಲೆಂತ್‌ನಲ್ಲಿ ಅದ್ಭುತ ಸ್ಥಿರತೆಯನ್ನು ಹೊಂದಿದ್ದಾರೆ. ಬೌಲರ್ ಒಬ್ಬ ಅಷ್ಟು ನಿಖರವಾಹಗಿ ಬೌಲಿಂಗ್ ದಾಳಿ ನಡೆಸಬೇಕಾದರೆ ನೀವು ರನ್‌ಗಳಿಸಲು ಬೇರೇನಾದರೂ ಮಾಡಬೇಕಾಗುತ್ತದೆ" ಎಂದಿದ್ದಾರೆ.

ಇನ್ನು ಈ ಪಂದ್ಯದಲ್ಲಿನ ಸೋಲಿನ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ ಇಂದೋರ್‌ನಂಥಾ ಪಿಚ್‌ನಲ್ಲಿ ಆಡುವುದು ತಂಡದ ಒಟ್ಟಾರೆ ನಿರ್ಧಾರವಾಗಿತ್ತು ಎಂದು ಹೇಳಿಕೆ ನೀಡಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಅವರು ಭಾರತ ಗೆದ್ದಾಗ ಯಾರೂ ಕೂಡ ಭಾರತದ ಬ್ಯಾಟಿಂಗ್ ಬಗ್ಗೆ ಮಾತನಾಡುವುದಿಲ್ಲ, ಆದರೆ ತಂಡ ಸೋತರೆ ತಂಡದ ಬ್ಯಾಟಿಂಗ್ ವಿಚಾರವಾಗಿ ಟೀಕೆಗಳು ಬರುತ್ತವೆ ಎಂದು ಅಸಮಾಧಾನ ಹಂಚಿಕೊಂಡಿದ್ದಾರೆ.

ಟೀಮ್ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಶ್ರೀಕರ್ ಭರತ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್
ಬೆಂಚ್: ಕೆಎಲ್ ರಾಹುಲ್, ಮೊಹಮ್ಮದ್ ಶಮಿ, ಇಶಾನ್ ಕಿಶನ್, ಕುಲದೀಪ್ ಯಾದವ್, ಸೂರ್ಯಕುಮಾರ್ ಯಾದವ್, ಜಯದೇವ್ ಉನದ್ಕತ್

ಆಸ್ಟ್ರೇಲಿಯಾ: ಉಸ್ಮಾನ್ ಖವಾಜಾ, ಟ್ರಾವಿಸ್ ಹೆಡ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್ (ನಾಯಕ), ಪೀಟರ್ ಹ್ಯಾಂಡ್ಸ್ಕಾಂಬ್, ಕ್ಯಾಮರೂನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಟಾಡ್ ಮರ್ಫಿ, ಮ್ಯಾಥ್ಯೂ ಕನ್ನೇಮನ್
ಬೆಂಚ್: ಮಿಚೆಲ್ ಸ್ವೆಪ್ಸನ್, ಮ್ಯಾಟ್ ರೆನ್ಶಾ, ಸ್ಕಾಟ್ ಬೋಲ್ಯಾಂಡ್, ಲ್ಯಾನ್ಸ್ ಮೋರಿಸ್

Story first published: Friday, March 3, 2023, 18:26 [IST]
Other articles published on Mar 3, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+