ತಂಡವನ್ನು ಮುನ್ನಡೆಸಲು ಜಗತ್ತಿನಲ್ಲಿ ಭಾರತವೇ ನೆಚ್ಚಿನ ಸ್ಥಳ ಎಂದ ಸ್ಟೀವ್ ಸ್ಮಿತ್

ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಸತತ ಎರಡು ಹೀನಾಯ ಸೋಲು ಕಂಡಿದ್ದ ಆಸ್ಟ್ರೇಲಿಯಾ ಮೂರನೇ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಇಂದೋರ್‌ನಲ್ಲಿ ನಡೆದ ಸರಣಿಯ ಮೂರನೇ ಪಂದ್ಯದಲ್ಲಿಹಂಗಾಮಿ ನಾಯಕ ಸ್ಟೀವ್ ಸ್ಮಿತ್ ನೇತೃತ್ವದಲ್ಲಿ ಆಸ್ಟ್ರೇಲಿಯಾ ತಂಡ ಭಾರತದ ವಿರುದ್ಧ ಎಲ್ಲಾ ವಿಭಾಗದಲ್ಲಿಯೂ ಮೇಲುಗೈ ಸಾಧಿಸಿ ಗೆಲುವು ಕಂಡಿದೆ. ಈ ಮೂಲಕ ಸರಣಿಯಲ್ಲಿನ ಹಿನ್ನಡೆಯನ್ನು ತಗ್ಗಿಸಿಕೊಂಡಿದೆ.
ಈ ಗೆಲುವಿನ ಬಳಿಕ ಆಸ್ಟ್ರೇಲಿಯಾ ತಂಡದ ಹಂಗಾಮಿ ನಾಯಕ ಸ್ಟೀವ್ ಸ್ಮಿತ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ನಾಯಕನಾಗಿ ಜಗತ್ತಿನಲ್ಲಿ ಆಸ್ಟ್ರೇಲಿಯಾ ಟೆಸ್ಟ್ ತಂಡವನ್ನು ಮುನ್ನಡೆಸಲು ಭಾರತ ತನ್ನ ಪಾಲಿಗೆ ನೆಚ್ಚಿನ ತಾಣ ಎಂದಿದ್ದಾರೆ. ಖಾಯಂ ನಾಯಕ ಪ್ಯಾಟ್ ಕಮ್ಮಿನ್ಸ್ ಅಲಭ್ಯವಾಗಿರುವ ಹಿನ್ನೆಲೆಯಲ್ಲಿ ಸ್ಮಿತ್ ತಂಡವನ್ನು ಅಂತಿಮ ಎರಡು ಟೆಸ್ಟ್ ಪಂದ್ಯಗಳಲ್ಲಿ ಮುನ್ನಡೆಸುತ್ತಿದ್ದಾರೆ.
"ಬಹುಶಃ ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾಯಕನಾಗಿ ಜಗತ್ತಿನಲ್ಲಿ ತಂಡವನ್ನು ಮುನ್ನಡೆಸಲು ಭಾರತ ನನ್ನ ನೆಚ್ಚಿನ ತಾಣ. ಇಲ್ಲಿನ ಪಿಚ್‌ನಲ್ಲಿ ಸಾಕಷ್ಟು ಬೆಳವಣಿಗೆಗಳಾಗುತ್ತವೆ. ಹಾಗಾಗಿ ಆಟದ ಸವಾಲು ಹಾಗೂ ಮತ್ತು ಅದನ್ನು ಭೇದಿಸಬೇಕಾದರೆ ಆಡಬೇಕಾದ ಆಟದ ವೇಗವನ್ನು ನಾನು ಅರ್ಥಮಾಡಿಕೊಂಡಿದ್ದೇನೆ" ಎಂದಿದ್ದಾರೆ ಸ್ಟೀವ್ ಸ್ಮಿತ್. ಖಾಸಗಿ ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ಸ್ಮಿತ್ ಈ ಅನಿಸಿಕೆ ಹಂಚಿಕೊಂಡರು.
"ಇಲ್ಲಿ ಪ್ರತಿ ಎಸೆತ ಕೂಡ ಬಹಳ ಪ್ರಮುಖವಾಗಿರುತ್ತದೆ. ಅದು ಮುಂದಿನ ಎಸೆತಕ್ಕೂ ಪರಿಣಾಮ ಬೀರುತ್ತದೆ. ಇಲ್ಲಿ ನಾನು ಆಟಗಾರರನ್ನು ಬದಲಾಯಿಸುತ್ತಾ ಇರಲು ಇಷ್ಟಪಡುತ್ತೇನೆ. ಈ ವಾರ ಬಹಳ ಮಜವಾಗಿತ್ತು. ಆಟಗಾರರು ಕೂಡ ಅದ್ಭುತವಾಗಿ ಸ್ಪಂದಿಸಿದ್ದಾರೆ" ಎಂದಿದ್ದಾರೆ ಆಸಿಸ್ ಹಂಗಾಮಿ ನಾಯಕ ಸ್ಟೀವ್ ಸ್ಮಿತ್.
ಇಂದೋರ್ ಟೆಸ್ಟ್‌ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿಯೇ ಮುಗ್ಗರಿಸಿತ್ತು. ಕೇವಲ 109 ರನ್‌ಗಳಿಗೆ ಆಲೌಟ್ ಆದ ಭಾರತ ಬೌಲಿಂಗ್‌ನಲ್ಲಿಯೂ ಆರಂಭದಲ್ಲಿ ಹಿನ್ನಡೆ ಕಂಡಿತು. ಹೀಗಾಗಿ ಆಸ್ಟ್ರೇಲಿಯಾ 197 ರನ್‌ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿತ್ತು. ಇನ್ನು ಎರಡನೇ ಇನ್ನಿಂಗ್ಸ್‌ನಲ್ಲಿಯೂ ಭಾರತ ತಂಡದ ಪ್ರದರ್ಶನ ಕಳಪೆಯಾಗಿತ್ತು. ಕೇವಲ 163 ರನ್‌ಗಳನ್ನು ಗಳಿಸಿದ ಕಾರಣ ಆಸ್ಟ್ರೇಲಿಯಾಗೆ ಗೆಲ್ಲಲು 78 ರನ್‌ಗಳ ಸುಲಭ ಸವಾಲು ಮುಂದಿತ್ತು. ಇದನ್ನು ಆಸಿಸ್ ಪಡೆ ಕೇವಲ ಒಂದು ವಿಕೆಟ್ ಕಳೆದುಕೊಂಡು ಗುರಿ ತಲುಪಿದೆ.
ಟೀಮ್ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಶ್ರೀಕರ್ ಭರತ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್
ಬೆಂಚ್: ಕೆಎಲ್ ರಾಹುಲ್, ಮೊಹಮ್ಮದ್ ಶಮಿ, ಇಶಾನ್ ಕಿಶನ್, ಕುಲದೀಪ್ ಯಾದವ್, ಸೂರ್ಯಕುಮಾರ್ ಯಾದವ್, ಜಯದೇವ್ ಉನದ್ಕತ್
ಆಸ್ಟ್ರೇಲಿಯಾ: ಉಸ್ಮಾನ್ ಖವಾಜಾ, ಟ್ರಾವಿಸ್ ಹೆಡ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್ (ನಾಯಕ), ಪೀಟರ್ ಹ್ಯಾಂಡ್ಸ್ಕಾಂಬ್, ಕ್ಯಾಮರೂನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಟಾಡ್ ಮರ್ಫಿ, ಮ್ಯಾಥ್ಯೂ ಕನ್ನೇಮನ್
ಬೆಂಚ್: ಮಿಚೆಲ್ ಸ್ವೆಪ್ಸನ್, ಮ್ಯಾಟ್ ರೆನ್ಶಾ, ಸ್ಕಾಟ್ ಬೋಲ್ಯಾಂಡ್, ಲ್ಯಾನ್ಸ್ ಮೋರಿಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications