ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

19 ವರ್ಷಗಳ ಬಳಿಕ ಭಾರತದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಆಸ್ಟ್ರೇಲಿಯಾ ಕನಸಿಗೆ 4 ಆಟಗಾರರೇ ಅಡ್ಡಿ!

BGT 2023: These 4 Indian cricketers will be major threat for Australia in Border Gavaskar series

ಕ್ರಿಕೆಟ್ ಪ್ರೇಮಿಗಳ ಚಿತ್ತ ಈಗ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ಮೇಲೆ ನೆಟ್ಟಿದೆ. ಈಗಾಗಲೇ ಆಸ್ಟ್ರೇಲಿಯಾ ತಂಡ ಭಾರತಕ್ಕೆ ಆಗಮಿಸಿದ್ದು ಮೊದಲ ಟೆಸ್ಟ್‌ಗೆ ಸಿದ್ಧತೆ ನಡೆಸುತ್ತಿದೆ. ಬೆಂಗಳೂರಿನ ಆಲೂರು ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ಆಟಗಾರರು ಶಿಬಿರದಲ್ಲಿ ಭಾಗವಹಿಸಿದ್ದು ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ. ಕಳೆದ ಎರಡು ದಶಕಗಳಿಂದ ಭಾರತದಲ್ಲಿ ಟೆಸ್ಟ್ ಸರಣಿ ಗೆಲುವು ಕನಸಾಗಿರುವ ಕಾರಣ ಈ ಬಾರಿ ಭಾರತವನ್ನು ಕಟ್ಟಿ ಹಾಕಲು ಎಲ್ಲಾ ಸಿದ್ಧತೆಗಳೊಂದಿಗೆ ಆಸಿಸ್ ಪಡೆ ಭಾರತಕ್ಕೆ ಬಂದಿಳಿದಿದೆ. ಟೀಮ್ ಇಂಡಿಯಾ ಆಟಗಾರರು ನಾಗ್ಪುರದಲ್ಲಿ ಟೆಸ್ಟ್ ಸರಣಿಗೆ ಸಿದ್ಧತೆ ಆರಂಭಿಸಿದ್ದಾರೆ.

ಇನ್ನು ಭಾರತದ ವಿರುದ್ಧದ ಸರಣಿಗೂ ಮುನ್ನ ಆಸ್ಟ್ರೇಲಿಯಾ ತಂಡ ಅದ್ಭುತ ಲಯದಲ್ಲಿರುವುದು ಸ್ಪಷ್ಟ. ಇತ್ತೀಚಿನ ಎಲ್ಲಾ ಟೆಸ್ಟ್ ಸರಣಿಗಳಲ್ಲಿಯೂ ಅದ್ಭುತ ಪ್ರದರ್ಶನ ನೀಡಿರುವ ಆಸ್ಟ್ರೇಲಿಯಾ ಸದ್ಯ ಟೆಸ್ಟ್ ಮಾದರಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಪ್ಯಾಟ್ ಕಮ್ಮಿನ್ಸ್ ಪಡೆಯ ಎಲ್ಲಾ ಆಟಗಾರರು ಕೂಡ ಅದ್ಭುತ ಲಯದಲ್ಲಿದ್ದು ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗ ಸಾಕಷ್ಟು ಸಮತೋಲಿತವಾಗಿದೆ.

ಕಮ್‌ಬ್ಯಾಕ್‌ಗೆ ಸಜ್ಜಾದ ಬೂಮ್ರಾ: ಎನ್‌ಸಿಎನಲ್ಲಿ ಬೌಲಿಂಗ್ ಅಭ್ಯಾಸ ಆರಂಭಿಸಿದ ಭಾರತದ ವೇಗಿಕಮ್‌ಬ್ಯಾಕ್‌ಗೆ ಸಜ್ಜಾದ ಬೂಮ್ರಾ: ಎನ್‌ಸಿಎನಲ್ಲಿ ಬೌಲಿಂಗ್ ಅಭ್ಯಾಸ ಆರಂಭಿಸಿದ ಭಾರತದ ವೇಗಿ

ಹಾಗಿದ್ದರೂ ಈ ಬಾರಿಯ ಭಾರತ ಪ್ರವಾಸ ಕೂಡ ಆಸ್ಟ್ರೇಲಿಯಾ ಪಾಲಿಗೆ ಸುಲಭವಿಲ್ಲ. ಸುದೀರ್ಘ ಎರಡು ದಶಕಗಳ ಬಳಿಕ ಭಾರತದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಆಸಿಸ್ ಪಡೆಯ ಕನಸಿಗೆ ಅಡ್ಡಿಯಾಗಬಲ್ಲ ನಾಲ್ವರು ಆಟಗಾರರ ಮಾಹಿತಿ ಇಲ್ಲಿದೆ.

ಮಾಜಿ ನಾಯಕ ವಿರಾಟ್ ಕೊಹ್ಲಿ

ಮಾಜಿ ನಾಯಕ ವಿರಾಟ್ ಕೊಹ್ಲಿ

ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಆಸ್ಟ್ರೇಲಿಯಾ ಯಾವತ್ತಿಗೂ ನೆಚ್ಚಿನ ಎದುರಾಳಿ. ಆಸ್ಟ್ರೇಲಿಯಾ ತಂಡದ ವಿರುದ್ಧ ಅದರ ತವರಿನಲ್ಲಿಯೇ ಅದ್ಭುತ ಪ್ರದರ್ಶನ ನೀಡಿ ಹಿಮ್ಮೆಟ್ಟಿರುವ ಆಟಗಾರ ಕೊಹ್ಲಿ. ಪ್ರತಿ ಬಾರಿಯೂ ಆಸ್ಟ್ರೇಲಿಯಾ ವಿರುದ್ಧ ಕೊಹ್ಲಿ ಅದ್ಭುತ ಪ್ರದರ್ಶನ ನೀಡಿಕೊಂಡೇ ಬಂದಿದ್ದಾರೆ. ಇನ್ನು ಕಳೆದ ಕೆಲ ತಿಂಗಳುಗಳಿಂದ ವಿರಾಟ್ ಕೊಹ್ಲಿ ಅದ್ಭುತ ಲಯದಲ್ಲಿದ್ದು ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ರನ್ ಮಳೆಹರಿಸಿದ್ದಾರೆ. ಈಗ ಟೆಸ್ಟ್ ಮಾದರಿಯಲ್ಲಿಯೂ ರನ್ ಮಳೆಹರಿಸುವತ್ತ ಕೊಹ್ಲಿ ಚಿತ್ತ ನೆಟ್ಟಿದ್ದು ಆಸಿಸ್ ತಂಡಕ್ಕೆ ಕೊಹ್ಲಿ ಕಂಠಕವಾಗುವುದರಲ್ಲಿ ಅನುಮಾನವಿಲ್ಲ.

ಆಲ್‌ರೌಂಡರ್ ಆರ್ ಅಶ್ವಿನ್

ಆಲ್‌ರೌಂಡರ್ ಆರ್ ಅಶ್ವಿನ್

ಟೀಮ್ ಇಂಡಿಯಾದ ಆಲ್‌ರೌಂಡರ್ ಆರ್ ಅಶ್ವಿನ್ ತವರಿನಲ್ಲಿ ಯಾವಾಗಲೂ ಎದುರಾಳಿಗಳ ಪಾಲಿಗೆ ದುಃಸ್ವಪ್ನವಾಗುವ ಆಟಗಾರ. ಭಾರತದ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಸುದೀರ್ಘ ಕಾಲ ಆಡಿರುವ ಅನುಭವ ಹೊಂದಿರುವ ಅಶ್ವಿನ್ ಆಸಿಸ್ ದಾಂಡಿಗರನ್ನು ತಮ್ಮ ಚಾಣಾಕ್ಷ ಎಸೆತಗಳಿಂದ ಕಂಗೆಡಿಸಲು ಸಜ್ಜಾಗಿದ್ದಾರೆ. ಇನ್ನು ಅಶ್ವಿನ್ ಟೆಸ್ಟ್ ಮಾದರಿಯಲ್ಲಿ ಬೌಲಿಂಗ್ ಮಾತ್ರವಲ್ಲದೆ ಬ್ಯಾಟಿಂಗ್‌ನಲ್ಲಿಯೂ ಅದ್ಭುತ ಲಯದಲ್ಲಿದ್ದು ಕಳೆದ ಕೆಲ ವರ್ಷಗಳಿಂದ ಸಾಕಷ್ಟು ರನ್ ಮಳೆ ಹರಿಸಿದ್ದಾರೆ. ಅಲ್ಲದೆ ಸ್ಪಿನ್ ವಿರುದ್ಧ ಅಶ್ವಿನ್ ಬ್ಯಾಟಿಂಗ್ ಕೌಶಲ್ಯವೂ ಅದ್ಭುತವಾಗಿರುವ ಕಾರಣ ನಥನ್ ಲಿಯೋನ್ ನೇತೃತ್ವದ ಆಸಿಸ್ ಪಡೆಯ ಸ್ಪಿನ್ ವಿಭಾಗಕ್ಕೂ ಅಶ್ವಿನ್ ಸವಾಲಾಗಲಿದ್ದಾರೆ.

ವೇಗದ ಬೌಲಿಂಗ್ ಅಸ್ತ್ರ ಮೊಹಮ್ಮದ್ ಸಿರಾಜ್

ವೇಗದ ಬೌಲಿಂಗ್ ಅಸ್ತ್ರ ಮೊಹಮ್ಮದ್ ಸಿರಾಜ್

ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ಜಸ್ಪ್ರೀತ್ ಬೂಮ್ರಾ ಅಲಭ್ಯವಾಗಿದ್ದರೂ ಭಾರತದ ಮತ್ತೋರ್ವ ವೇಗಿ ಮೊಹಮ್ಮದ್ ಸಿರಾಜ್ ಆಸಿಸ್ ತಂಡವನ್ನು ಕಾಡುವುದು ನಿಶ್ಚಿತ. 2020-21ನೇ ಸಾಲಿನ ಬಾರ್ಡರ್-ಗವಾಸ್ಕರ್ ಸರಣಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದಾಗ ಮೊಟ್ಟ ಮೊದಲ ಬಾರಿಗೆ ಭಾರತ ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದ ಸಿರಾಜ್ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು. ಅದಾದ ಬಳಿಕ ಸಿರಾಜ್ ಬೌಲಿಂಗ್‌ನಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದು ಸಾಕಷ್ಟು ಕೌಶಲ್ಯಗಳನ್ನು ವೃದ್ಧಿಸಿಕೊಂಡಿದ್ದಾರೆ. ಸಿಕ್ಕ ಅವಕಾಶವನ್ನೆಲ್ಲಾ ಎರಡೂ ಕೈಗಳಿಂದ ಬಾಚಿಕೊಳ್ಳುತ್ತಿರುವ ಸಿರಾಜ್ ಆಸಿಸ್ ಪಡೆಗೆ ಮತ್ತೊಮ್ಮೆ ಆಘಾತ ನೀಡಲು ಸಂಪೂರ್ಣ ಸಜ್ಜಾಗಿದ್ದಾರೆ.

ಸ್ಪಿನ್ ಆಲ್‌ರೌಂಡರ್ ಅಕ್ಷರ್ ಪಟೇಲ್

ಸ್ಪಿನ್ ಆಲ್‌ರೌಂಡರ್ ಅಕ್ಷರ್ ಪಟೇಲ್

ಇನ್ನು ಟೀಮ್ ಇಂಡಿಯಾದ ಮತ್ತೋರ್ವ ಸ್ಪಿನ್ ಬೌಲರ್ ಅಕ್ಷರ್ ಪಟೇಲ್ ಭಾರತದ ಪಿಚ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತದಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ಐದು ವಿಕೆಟ್‌ ಗೊಂಚಲು ಪಡೆಯುವುದನ್ನು ಅಕ್ಷರ್ ಅಭ್ಯಾಸ ಮಾಡಿಕೊಂಡುಬಿಟ್ಟಿರುವುದು ಎದುರಾಳಿಗಳಿಗೆ ತಲೆ ನೋವಾಗಿದೆ. ಹೀಗಾಗಿ ಆಸ್ಟ್ರೇಲಿಯಾ ತಂಡ ಕೂಡ ಕೂಡ ಅಕ್ಷರ್ ಪಟೇಲ್ ವಿರುದ್ಧದ ಯಾವ ರೀತಿ ರಣತಂತ್ರ ಹೆಣೆಯಬೇಕು ಎಂದು ಈಗಾಗಲೇ ಯೋಜನೆಗಳನ್ನು ಸಿದ್ಧಪಡಿಸಿಕೊಂಡಿರುತ್ತಾರೆ. ಹೀಗಾಗಿ ಈ ಸವಾಲನ್ನು ಆಸಿಸ್ ಪಡೆ ಹೇಗೆ ಮೆಟ್ಟಿ ನಿಲ್ಲಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ.

Story first published: Friday, February 3, 2023, 13:08 [IST]
Other articles published on Feb 3, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X