For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌ನಲ್ಲಿ ಭಾರತವನ್ನು ಹುರಿದುಂಬಿಸಲಿದೆ 8000 ಜನರ 'ಭಾರತ್ ಆರ್ಮಿ'

Bharat Army’s 8000 fans from 22 countries to converge in UK

ನವದೆಹಲಿ, ಮಾರ್ಚ್ 21: ಇಂಗ್ಲೆಂಡ್ ಆ್ಯಂಡ್ ವೇಲ್ಸ್‌ನಲ್ಲಿ ಮೇ 30ರಿಂದ ನಡೆಯಲಿರುವ ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾವನ್ನು ಹುರಿದುಂಬಿಸುವುದಕ್ಕಾಗಿ ವಿಶ್ವದ 22 ರಾಷ್ಟ್ರಗಳಿಂದ ಸುಮಾರು 8000 ಅಭಿಮಾನಿಗಿಳಿರುವ 'ಭಾರತ್ ಆರ್ಮಿ' ಇಂಗ್ಲೆಂಡ್‌ನಲ್ಲಿ ಒಟ್ಟು ಸೇರಲಿದೆ.

ವಿಶ್ವಕಪ್ ವೇಳೆ ಭಾರತ ಆರ್ಮಿಯ ಸುಮಾರು 8 ಸಾವಿರ ಅಭಿಮಾನಿಗಳು ಕ್ರೀಡಾಂಗಣದ ಸಮೀಪ ಕಾಣಿಸಿಕೊಳ್ಳಲಿದ್ದಾರೆ ಎಂದು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅಂದಾಜಿಸಿದೆ. ಭಾರತ್ ಆರ್ಮಿ ಅನ್ನೋ ವಿಶಿಷ್ಟ ಅಭಿಮಾನಿಗಳ ಬಣ ಶುರುವಾಗಿದ್ದು 1999ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದಿದ್ದ ವಿಶ್ವಕಪ್ ವೇಳೆ.

1999ರಲ್ಲಿ ಕೇವಲ ನಾಲ್ಕು ಮಂದಿಯಿಂದ ಶುರುವಾದ ಈ ಅಭಿಮಾನಿಗಳ ಗುಂಪು ಬೆಳೆಯುತ್ತಲೇ ಇದೆ. ವರ್ಷದಿಂದ ವರ್ಷಕ್ಕೆ ಭಾರತ್ ಆರ್ಮಿಯ ಸದಸ್ಯರ ಸಂಖ್ಯೆ ಹೆಚ್ಚುತ್ತಿದ್ದು, ವಿಶ್ವದಲ್ಲಿ ಎಲ್ಲೇ ಪಂದ್ಯಗಳಿದ್ದರೂ ಅಲ್ಲಿ ಭಾರತವನ್ನು ಬೆಂಬಲಿಸಲು ಪ್ರತೀಸಾರಿ ಸುಮಾರು 5000-6000 ಭಾರತ್ ಆರ್ಮಿಯ ಅಭಿಮಾನಿಗಳು ಉಪಸ್ಥಿತರಿರುತ್ತಾರೆ.

'ವಿಶ್ವಮಟ್ಟದ ಪಂದ್ಯಗಳಾದಾಗ ಭಾರತವನ್ನು ಬೆಂಬಲಿಸುವ ಉದ್ದೇಶದಿಂದ ಯುಕೆ ಮೂಲದ ಬೆಂಬಲಿಗರಿಂದ ಶುರುವಾದ ಈ 'ಭಾರತ್ ಆರ್ಮಿ' ಬೆಳೆಯುತ್ತಲೇ ಇದೆ' ಎಂದು ಭಾರತ್ ಆರ್ಮಿಯ ಸ್ಥಾಪಕರಲ್ಲಿ ಒಬ್ಬರಾದ ರಾಕೇಶ್ ಪಾಟೆಲ್ ಹೇಳಿದ್ದಾರೆ.

Story first published: Thursday, March 21, 2019, 16:12 [IST]
Other articles published on Mar 21, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+