Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

KIWG 2026: ಚಿನ್ನದ ಸಾಧನೆ ಮಾಡಿದ ಕೊಡಗಿನ ಬೆಡಗಿ ಭವಾನಿ

ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್‌ನಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ವಿಂಟರ್ ಗೇಮ್ಸ್ 2026ರಲ್ಲಿ, ಕರ್ನಾಟಕದ ಭವಾನಿ ನಂಜುಂಡ ಅವರು ನಾರ್ಡಿಕ್ ಮಹಿಳೆಯರ 1.5 ಕಿಮೀ ಸ್ಪ್ರಿಂಟ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

ಕರ್ನಾಟಕದ ಕೊಡಗಿನ ಕಾಫಿ ತೋಟದ ಪರಿಮಳಗಳ ತಪ್ಪಲಿನಲ್ಲಿ ಬೆಳೆದ ಭವಾನಿ ನಂಜುಂಡ ಅವರಿಗೆ ಹಿಮದ ಅನುಭವ ಇದ್ದಿರುವುದು ಕಡಿಮೆ. ಆದರೆ ಮಂಗಳವಾರ, ಇವರು ಸಮುದ್ರ ಮಟ್ಟದಿಂದ 8,700 ಅಡಿ ಎತ್ತರದಲ್ಲಿ ನಡೆದ ಸ್ಪರ್ಧೆಯಲ್ಲಿ, ಕೊಡಗಿನ ಬೆಡಗಿ ಖೇಲೋ ಇಂಡಿಯಾ ವಿಂಟರ್ ಗೇಮ್ಸ್ 2026 ರ ಸ್ಪ್ರಿಂಟ್ ರಾಣಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಹಿಮದಿಂದ ಆವೃತವಾದ ಗುಲ್ಮಾರ್ಗ್ ಗಾಲ್ಫ್ ಕೋರ್ಸ್‌ನಲ್ಲಿ ಕೊಡಗಿನ ಭವಾನಿ ನಂಜುಂಡ ಅಮೋಘ ಪ್ರದರ್ಶನ ನೀಡಿ ಮಿಂಚಿದರು. 30 ವರ್ಷದ ಅಥ್ಲೀಟ್ ಪೋಡಿಯಂನಲ್ಲಿ ನಿಂತು ಚಿನ್ನದ ಪದಕಕ್ಕೆ ಕೊರಳು ಒಡ್ಡಿದರು. ಇದೇ ಗೇಮ್ಸ್‌ನಲ್ಲಿ ಇವರು 15 ಕಿಮೀ ಮತ್ತು 10 ಕಿಮೀ ರಿಲೇಗಳಲ್ಲಿ ಇವರು ಕಂಚಿನ ಪದಕದ ಸಾಧನೆ ಮಾಡಿದ್ದರು. ಭವಾನಿ ಅವರು ಈಗಾಗಲೇ ಖೇಲೋ ಇಂಡಿಯಾ ವಿಂಟರ್ ಗೇಮ್ಸ್‌ನಲ್ಲಿ ಆರು ಆವೃತ್ತಿಗಳಲ್ಲಿ ಸ್ಪರ್ಧಿಸಿದ ಅನುಭವ ಹೊಂದಿದ್ದರು.

ಹಿಮವೇ ಇಲ್ಲದ ಕರ್ನಾಟಕದಂತಹ ಭಾಗದಿಂದ ಬಂದು, ಭವಾನಿ ನಂಜುಂಡ ಸ್ಕೀಯಿಂಗ್‌ನಲ್ಲಿ ಗೆದ್ದಿದ್ದು ಕೇವಲ ದೈಹಿಕ ಜಯವಲ್ಲ, ಬದಲಿಗೆ ಇದು ಅವರ ಮಾನಸಿಕ ಸ್ಥೈರ್ಯವನ್ನು ತೋರಿಸುತ್ತದೆ. ಪದಕವನ್ನು ಗೆದ್ದ ಬಳಿಕ ಭವಾನಿ ಅವರು ಈ ಜಯವನ್ನು, ಪೋಷಕರಿಗೆ ಅರ್ಪಣೆ ಮಾಡಿದ್ದಾರೆ. ಅಲ್ಲದೆ ನಮ್ಮ ತಂದೆ-ತಾಯಿ ಇನ್ನು ವರೆಗೂ ಹಿಮವನ್ನೇ ನೋಡಿಲ್ಲ. ಮುಂದೆ ಎಂದಾದರೂ ಅವರು ಬಂದು ತಮ್ಮ ಪ್ರದರ್ಶನವನ್ನು ನೋಡಬೇಕು ಎಂಬ ಮಹದಾಸೆಯನ್ನು ವ್ಯಕ್ತ ಪಡಿಸಿದರು.

ಭವಾನಿ ಅವರ ತಂದೆ ಕಾಫಿ ತೋಟವನ್ನು ಹೊಂದಿದ್ದಾರೆ. ಇವರ ಮಗಳು ಇಷ್ಟ ಪಟ್ಟ ಕ್ರೀಡೆಗೆ ಅವರು ಪ್ರೋತ್ಸಾಹ ನೀಡಿದರು. ಮಗಳ ಮೇಲಿನ ನಂಬಿಕೆ ಹಾಗೂ ಸಾಧಿಸಬಲ್ಲಳು ಎಂಬ ವಿಶ್ವಾಸದಿಂದ ಬೆನ್ನು ತಟ್ಟಿ ಪ್ರೋತ್ಸಾಹ ನೀಡಿದ್ದರು.

ಭವಾನಿ ಸಾಧನೆ

ಭವಾನಿ 2014 ರಲ್ಲಿ ಪರ್ವತಾರೋಹಿಯಾಗಿ ತನ್ನ ಕ್ರೀಡಾ ಪ್ರಯಾಣವನ್ನು ಆರಂಭಿಸಿದರು. ಬಳಿಕ ಇವರು ನಾರ್ಡಿಕ್ ಸ್ಕೀಯಿಂಗ್‌ ಕ್ರೀಡೆಯತ್ತ ಮನಸ್ಸು ಮಾಡಿ ಯಶ ಕಂಡರು. ಆರಂಭದಲ್ಲಿ ಇವರ ಸಾಧನೆಗೆ ಆರ್ಥಿಕತೆ ಸಂಕಷ್ಟ ಸಿಲುಕಿತು. ಆದರೆ ಸಿಕ್ಕ ಅವಕಾಶವನ್ನು ಬಳಸಿಕೊಂಡು ಬೆಳೆದ ಪ್ರತಿಭೆ ಭವಾನಿ. ಇವರು 2025ರ ಚಿಲಿ ದಕ್ಷಿಣ ಅಮೇರಿಕಾ ಕಪ್‌ನಲ್ಲಿ ಕಂಚು ಗೆದ್ದು ಸಾಧನೆ ಮಾಡಿದ್ದರು. ಇವರು ಮಾನ್ಯತೆ ಪಡೆದ ಕ್ರಾಸ್-ಕಂಟ್ರಿ ಸ್ಕೀಯಿಂಗ್ ಸ್ಪರ್ಧೆಯಲ್ಲಿ ಪದಕ ಬಾಚಿಕೊಂಡ ಮೊದಲ ಭಾರತೀಯ ಮಹಿಳೆ ಎಂಬ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ.

ಈ ಚಿತ್ರ ಅಥ್ಲೀಟ್‌ ಆಗಲು ಪ್ರೇರಣೆ

23 ವರ್ಷದ ವರೆಗೆ ನಾನು ಹಿಮವನ್ನೇ ನೋಡಿರಲಿಲ್ಲ. ತಡವಾಗಿ ನಾನು ಈ ಕ್ರೀಡೆಗೆ ಎಂಟ್ರಿ ನೀಡಿದರೂ ದೊಡ್ಡ ಸಾಧನೆ ಮಾಡಲು ಸಾಧ್ಯವಾಗಿದೆ. ಈ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಬೇಕು ಎಂಬ ಕನಸು ಹೊಂದಿರುವವರಿಗೆ ಉತ್ತಮ ತರಬೇತಿ, ಸೌಲಭ್ಯಗಳು ಸಿಕ್ಕರೆ ಯಾವುದೇ ಸಾಧನೆ ಮಾಡಬಹುದು ಎಂದು ತಿಳಿಸಿದ್ದಾರೆ. ಅಲ್ಲದೆ 2029ರಲ್ಲಿ ಕಝಾಕಿಸ್ತಾನ್‌ನ ಅಲ್ಮಾಟಿಯಲ್ಲಿ ನಡೆಯಲಿರುವ ಏಷ್ಯನ್ ವಿಂಟರ್ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ದೊಡ್ಡ ಕನಸನ್ನು ಇವರು ಹೊಂದಿದ್ದಾರೆ. ಭವಾನಿ ಬಾಲಿವುಡ್ ಚಿತ್ರ "ಯೇ ಜವಾನಿ ಹೈ ದಿವಾನಿ" ನೋಡಿದ ಪ್ರಭಾವಿತಳಾಗಿ ಕ್ರೀಡೆಯತ್ತ ಮನಸ್ಸು ಮಾಡಿದರು. ಯೇ ಜವಾನಿ ಹೈ ದಿವಾನಿ ಚಿತ್ರ ಹಿಮಭರಿತ ಪ್ರದೇಶಗಳ ಬಗ್ಗೆ ಸೆಳೆತ ಹುಟ್ಟುವಂತೆ ಮಾಡಿತು. ಅಲ್ಲದೆ ಈ ಹಿಮ ಪರ್ವತವನ್ನು ಏರಲು ಪ್ರೇರೆಪಿಸಿತು.

Story first published: Wednesday, February 25, 2026, 21:57 [IST]
Other articles published on Feb 25, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+