ಕ್ರಿಕೆಟಿಗ ಭುವನೇಶ್ವರ್ ಕುಮಾರ್ ತಂದೆ ಇನ್ನಿಲ್ಲ

ಭಾರತದ ಖ್ಯಾತ ವೇಗಿ ಭುವನೇಶ್ವರ್ ಕುಮಾರ್ ತಂದೆ ಕಿರಣ್ ಪಾಲ್ ಸಿಂಗ್ (63) ಗುರುವಾರ ಕ್ಯಾನ್ಸರ್‌ನಿಂದ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲ ದಿನಗಳಿಂದ ತೀವ್ರ ಆನಾರೋಗ್ಯಕ್ಕೆ ಒಳಗಾಗಿದ್ದ ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.
ದೆಹಲಿಯ ಏಮ್ಸ್ ನಂತರ ಹಲವಾರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಸಹ ಕಿರಣ್ ಪಾಲ್ ಸಿಂಗ್ ಆರೋಗ್ಯ ಸರಿಯಾದ ಸ್ಥಿತಿಗೆ ಬರಲಿಲ್ಲ ಹೀಗಾಗಿ ಮನೆಯಲ್ಲಿಯೇ ಔಷಧಿ ಪಡೆದುಕೊಂಡು ವಿಶ್ರಾಂತಿ ಪಡೆಯುತ್ತಿದ್ದ ಅವರು ಗುರುವಾರ ಅಸುನೀಗಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಭುವನೇಶ್ವರ್ ಕುಮಾರ್ ತಂದೆ ಕಿರಣ್ ಪಾಲ್ ಸಿಂಗ್ ಸ್ವಲ್ಪ ದಿನಗಳ ಮುಂಚೆ ಸ್ವಯಂ ನಿವೃತ್ತಿ ಪಡೆದಿದ್ದರು.
ಭುವನೇಶ್ವರ್ ಕುಮಾರ್ ಕೂಡ ತಂದೆ ಮತ್ತು ಕುಟುಂಬದವರನ್ನು ಹತ್ತಿರದಿಂದಲೇ ಇದ್ದು ನೋಡಿಕೊಳ್ಳುತ್ತಿದ್ದರು. ಲಿವರ್ ಸಂಬಂಧಿಸಿದ ಕ್ಯಾನ್ಸರ್‌ನಿಂದ ಭುವನೇಶ್ವರ್ ಕುಮಾರ್ ತಂದೆ ಮೃತಪಟ್ಟಿರುವುದು ತಂದೆಯ ಮೇಲೆ ತುಂಬಾ ಕಾಳಜಿಯನ್ನು ಇಟ್ಟುಕೊಂಡಿದ್ದ ಭುವನೇಶ್ವರ್ ಕುಮಾರ್‌ಗೆ ತೀವ್ರ ನೋವನ್ನುಂಟುಮಾಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications