
ನವದೆಹಲಿ: ದಿನಬಳಕೆ ವಸ್ತುಗಳ ಬೆಲೆಯೇರಿಕೆ ಆಗಿರುವುದು ನಿಮಗೆಲ್ಲರಿಗೂ ಗೊತ್ತೇಯಿದೆ. ಗ್ಯಾಸ್, ಪೆಟ್ರೋಲ್, ಡೀಸೆಲ್ ಬೆಲೆಯೂ ಹಿಂದೆದೂ ಇಲ್ಲದ ಮಟ್ಟಿಗೆ ಏರಿಕೆ ಕಂಡಿದೆ. ಈ ಬಗ್ಗೆ ಆಸಾಮಾಜಿಕ ಜಾಲತಾಣದಲ್ಲಿ ವಿರೋಧಗಳು, ತಮಾಷೆಯ ಮೀಮ್ಸ್‌ಗಳು ಹರಿದಾಡುತ್ತ ಕೂಡ ಇದೆ.
ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದ್ದ ತಮಾಷೆಯ ಸಂಗತಿಗಳಲ್ಲಿ ಇಲ್ಲೊಂದು ನಿಜವಾಗಿದೆ. ಕ್ರಿಕೆಟಿಗನೊಬ್ಬನಿಗೆ ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿ ಲಭಿಸಿದ್ದಕ್ಕಾಗಿ ಆತನಿಗೆ 5 ಲೀಟರ್ ಪೆಟ್ರೋಲ್ ನೀಡಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಗೆ ಬಗೆ ಪೋಸ್ಟ್‌ಗಳು ಓಡಾಡುತ್ತಿವೆ.
ಭೋಪಾಲ್‌ನಲ್ಲಿ ನಡೆದ ಕ್ರಿಕೆಟ್ ಟೂರ್ನಮೆಂಟ್ ಒಂದರಲ್ಲಿ ಸಲಾವುದ್ದೀನ್ ಅಬ್ಬಾಸ್ ಎಂಬ ಕ್ರಿಕೆಟರ್‌ಗೆ ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿ ದೊರೆತಿದೆ. ಹೀಗಾಗಿ ಆತನಿಗೆ ವಿಶೇಷ ಉಡುಗೊರೆಯಾಗಿ 5 ಲೀಟರ್ ಪೆಟ್ರೋಲ್ ನೀಡಲಾಗಿದೆ.
ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಅದಕ್ಕೆ ವಿವಿಧ ಪ್ರತಿಕ್ರಿಯೆಗಳು ಬಂದಿವೆ. ಮ್ಯಾನ್ ಆಫ್ ದ ಮ್ಯಾಚ್‌ಗೆ ಎಂಥಾ ಕಾಸ್ಲಿ ಪ್ರಶಸ್ತಿ ನೀಡಲಾಗಿದೆ ಎಂದು ಎಲ್ಲರೂ ಫೋಟೋವನ್ನು ಹಂಚಿಕೊಳ್ಳುತ್ತಿದ್ದಾರೆ. ಅಂದ್ಹಾಗೆ ಪೆಟ್ರೋಲ್ ಕ್ಯಾನ್‌ನ ಮೇಲೆ ಪ್ರಧಾನಿ ನರೇಂದ್ರ ಮೋದಿಯ ವ್ಯಂಗ್ಯ ಚಿತ್ರ ಕೂಡ ಇದೆ.