Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಿಡ್ನಿ: ಭುವನೇಶ್ವರ್ ಕುಮಾರ ಈಗ ಏಕದಿನ 100 ವಿಕೆಟ್‌ಗಳ ಸರದಾರ!

IND vs AUS 1ST ODI : ಅಘಾತದಿಂದ ಚೇತರಿಸಿಕೊಳ್ಳುತ್ತಿದೆ ಆಸ್ಟ್ರೇಲಿಯಾ..! | Oneindia Kannada
Bhuvneshwar Kumar becomes 12th Indian pacer to take 100 ODI wickets

ಸಿಡ್ನಿ, ಜನವರಿ 12: ಭಾರತದ ವೇಗಿ ಭುವನೇಶ್ವರ್ ಕುಮಾರ್ ಅವರು ಏಕದಿನ ಕ್ರಿಕೆಟ್‌ನಲ್ಲಿ 100 ವಿಕೆಟ್ ಪಡೆದ ಭಾರತದ 12ನೇ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಶನಿವಾರ (ಜನವರಿ 12) ನಡೆದ ಆಸ್ಟ್ರೇಲಿಯಾ ಭಾರತ ಮೊದಲ ಏಕದಿನ ಪಂದ್ಯದಲ್ಲಿ ಭುವಿ ಈ ಸಾಧನೆ ಮೆರೆದರು.

ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಆಸ್ಟ್ರೇಲಿಯಾ ತಂಡ, ನಾಯಕ ಆ್ಯರನ್ ಫಿಂಚ್ ಅವರ ವಿಕೆಟನ್ನು ಬಹುಬೇಗನೆ ಕಳೆದುಕೊಂಡಿತು. ಭುವಿ, ಫಿಂಚ್ ಅವರನ್ನು ಕೇವಲ 6 ರನ್ನಿಗೆ ಪೆವಿಲಿಯನ್‌ಗೆ ಅಟ್ಟುವ ಮೂಲಕ ಏಕದಿನದಲ್ಲಿ 100ನೇ ವಿಕೆಟ್ ಮೈಲಿಗಲ್ಲು ಸ್ಥಾಪಿಸಿದರು.

28ರ ಹರೆಯದ ಭುವನೇಶ್ವರ್ ಒಟ್ಟು 96 ಪಂದ್ಯಗಳಲ್ಲಿ 37.88ರ ಸರಾಸರಿಯಂತೆ 100 ವಿಕೆಟ್ ಪಡೆದಿದ್ದಾರೆ. ಸರಾಸರಿ ಅಷ್ಟೇನೂ ಉತ್ತಮವಿಲ್ಲದಿದ್ದರೂ ಭುವಿ ಭಾರತದ ಭರವಸೆಯ ಬೌಲರ್ ಎನ್ನುವಲ್ಲಿ ಎರಡು ಮಾತಿಲ್ಲ. ಮೂರು ಪಂದ್ಯಗಳ ಭಾರತ-ಆಸೀಸ್ ಏಕದಿನ ಸರಣಿಯಲ್ಲಿ ಭುವಿ ಇನ್ನಷ್ಟು ವಿಕೆಟ್ ಗಳಿಸುವ ನಿರೀಕ್ಷೆಯಿದೆ.

Story first published: Saturday, January 12, 2019, 9:03 [IST]
Other articles published on Jan 12, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+