Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ವೇಗಿ ಭುವನೇಶ್ವರ್ ಕುಮಾರ್

ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡ ತವರಿನಲ್ಲಿ ಅಮೋಘ ಪ್ರದರ್ಶನ ನೀಡಿ 19ನೇ ಆವೃತ್ತಿಯ ಐಪಿಎಲ್‌ನಲ್ಲಿ ಎರಡನೇ ಜಯ ಸಾಧಿಸಿದೆ. ಈ ವೇಳೆ ತಂಡದ ಸಂಘಟಿತ ಆಟ ಜಯದಲ್ಲಿ ಮಿಂಚಿದೆ. ಭರವಸೆಯ ಬ್ಯಾಟರ್‌ ಟೀಮ್ ಡೇವಿಡ್‌ ಬ್ಯಾಟಿಂಗ್‌ನಲ್ಲಿ ಕಾಣಿಕೆ ನೀಡಿದರೆ, ವೇಗದ ಬೌಲರ್‌ ಭುವನೇಶ್ವರ್ ಕುಮಾರ್ ಬೌಲಿಂಗ್‌ನಲ್ಲಿ ಕಾಣಿಕೆ ನೀಡಿದ್ದಾರೆ. ಈ ಪಂದ್ಯದಲ್ಲಿ ಮೂರು ವಿಕೆಟ್‌ ಪಡೆಯುವ ಮೂಲಕ ಭುವಿ ಅಬ್ಬರಿಸಿದ್ದಾರೆ. ಈ ಮೂಲಕ ಸ್ವಿಂಗ್ ಬೌಲರ್‌ ದೊಡ್ಡ ದಾಖಲೆಯನ್ನು ಬರೆದಿದ್ದಾರೆ.

ಆರ್‌ಸಿಬಿ ನೀಡಿದ 251 ರನ್‌ಗಳ ಸವಾಲಿನ ಮೊತ್ತವನ್ನು ಹಿಂಬಾಲಿಸಿದ ಚೆನ್ನೈ ಸೂಪರ್ ಕಿಂಗ್ಸ್‌ (ಸಿಎಸ್‌ಕೆ) ತಂಡದ ಆರಂಭಕ್ಕೆ ಆರ್‌ಸಿಬಿ ತಂಡದ ಬೌಲರ್‌ಗಳು ಪೆಟ್ಟು ನೀಡಿದರು. ಈ ವೇಳೆ ಭುವನೇಶ್ವರ್ ಕುಮಾರ್ ಸಹ ಕಮಾಲ್ ಪ್ರದರ್ಶನ ನೀಡಿದರು. ಇವರು ತಮ್ಮ ಮೊದಲ ಓವರ್‌ನ ಎರಡನೇ ಎಸೆತದಲ್ಲಿ ಚೆನ್ನೈ ತಂಡದ ಯುವ ಆಟಗಾರ ಆಯುಷ್ ಮಾತ್ರೆಗೆ ಖೆಡ್ಡಾ ತೋಡಿದರು. ಬ್ಯಾಕ್ ಆಫ್ ಲೆಂಥ್ ಎಸೆತವನ್ನು ತಪ್ಪಾಗಿ ಗ್ರಹಿಸಿದ ಆಯುಷ್ ನಾಯಕ ರಜತ್ ಪಾಟಿದಾರ್ ಅವರಿಗೆ ಕ್ಯಾಚ್ ನೀಡಿದರು.

Bhuvneshwar Kumar

ಆಯುಷ್ ಮಾತ್ರೆ ಅವರನ್ನು ಪೆವಿಲಿಯನ್‌ಗೆ ಕಳುಹಿಸುತ್ತಲೇ ಭುವನೇಶ್ವರ್ ಕುಮಾರ್ ದೊಡ್ಡ ದಾಖಲೆಯನ್ನು ಬರೆದರು. ಈ ಮೂಲಕ ಭುವನೇಶ್ವರ್ ಕುಮಾರ್ ಐಪಿಎಲ್‌ ಇತಿಹಾಸದಲ್ಲಿ 200ಕ್ಕೂ ಹೆಚ್ಚು ವಿಕೆಟ್‌ ಪಡೆದ ಮೊದಲ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಐಪಿಎಲ್‌ನಲ್ಲಿ 200ಕ್ಕೂ ಹೆಚ್ಚು ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಭುವಿ ಸ್ಥಾನ ಪಡೆದರು. ಇದಕ್ಕೂ ಮೊದಲು ಈ ಸಾಧನೆಯನ್ನು ಸ್ಪಿನ್ ಬೌಲರ್ ಯುಜುವೇಂದ್ರ ಚಾಹಲ್ ಮಾಡಿದ್ದರು. ಈಗ ಈ ಪಟ್ಟಿಗೆ ಭುವನೇಶ್ವರ್ ಕುಮಾರ್ ಎಂಟ್ರಿ ಪಡೆದಿದ್ದಾರೆ.

ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ 5 ಬೌಲರ್‌ಗಳು

ಯುಜುವೇಂದ್ರ ಚಾಹಲ್, 176 ಪಂದ್ಯ, 224 ವಿಕೆಟ್‌
ಭುವನೇಶ್ವರ್ ಕುಮಾರ್, 192 ಪಂದ್ಯ, 202 ವಿಕೆಟ್‌
ಸುನಿಲ್ ನರೈನ್, 191 ಪಂದ್ಯ, 193 ವಿಕೆಟ್‌
ಪಿಯೂಷ್ ಚಾವ್ಲಾ, 192 ಪಂದ್ಯ, 192 ವಿಕೆಟ್‌
ಆರ್‌ ಅಶ್ವಿನ್‌, 221 ಪಂದ್ಯ, 187 ವಿಕೆಟ್‌

ಈ ಪಂದ್ಯದಲ್ಲಿ ಬಿಗುವಿನ ಬೌಲಿಂಗ್ ದಾಳಿ ನಡೆಸಿದ ಭುವನೇಶ್ವರ್ ಕುಮಾರ್ 4 ಓವರ್‌ಗಳಲ್ಲಿ 41 ರನ್‌ ನೀಡಿ 3 ವಿಕೆಟ್‌ ಪಡೆದರು.

ಪಂದ್ಯದ ಫಲಿತಾಂಶ

19ನೇ ಆವೃತ್ತಿ ಐಪಿಎಲ್‌ನ 11ನೇ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 250 ರನ್‌ ಸೇರಿಸಿತು. ಈ ವೇಳೆ ಆರ್‌ಸಿಬಿ ತಂಡದ ಭರವಸೆಯ ಬ್ಯಾಟರ್‌ ದೇವದತ್‌ ಪಡಿಕ್ಕಲ್ 50, ರಜತ್ ಪಾಟಿದಾರ್ ಅಜೇಯ 48 ರನ್‌ ಬಾರಿಸಿದರು. ಟೀಮ್ ಡೇವಿಡ್ ಸ್ಫೋಟಕ ಬ್ಯಾಟಿಂಗ್ ನಡೆಸಿ ಅಜೇಯ 70 ರನ್‌ ಸಿಡಿಸಿದರು. ಗುರಿಯನ್ನು ಬೆನ್ನಟ್ಟಿದ ಚೆನ್ನೈ ತಂಡದ ಪರ ಸರ್ಫರಾಜ್ ಖಾನ್ 50, ಪ್ರಶಾಂತ್ ವೀರ್‌ 43, ಜೇಮಿ ಓವರ್‌ಟನ್‌ 37 ರನ್‌ ಬಾರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಚೆನ್ನೈ 18.4 ಓವರ್‌ಗಳಲ್ಲಿ 207 ರನ್‌ಗಳಿಗೆ ಸರ್ವಪತನ ಕಂಡಿತು.

Story first published: Monday, April 6, 2026, 8:05 [IST]
Other articles published on Apr 6, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+