RCB vs DC: 7 ಎಸೆತಗಳಲ್ಲಿ 3 ವಿಕೆಟ್ ಪಡೆದ Bhuvneshwar Kumar
19ನೇ ಆವೃತ್ತಿಯ 26ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 175 ರನ್ ಸೇರಿಸಿತು. ಆರಂಭಿಕ ಫಿಲ್ ಸಾಲ್ಟ್ (63) ಅರ್ಧಶತಕ ಬಾರಿಸಿ ತಂಡಕ್ಕೆ ಆಧಾರವಾದರು. ಇನ್ನು ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ತಂಡಕ್ಕೆ ಭುವನೇಶ್ವರ್ ಕುಮಾರ್ ಮಾರಕ ದಾಳಿ ನಡೆಸಿದರು.
ಸ್ಪರ್ಧಾತ್ಮಕ ಮೊತ್ತದ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭ ಕಳಪೆಯಾಗಿತ್ತು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಟಾಪ್ ಆರ್ಡರ್ ಬ್ಯಾಟರ್‌ಗಳನ್ನು ಭುವನೇಶ್ವರ್ ಕುಮಾರ್ ತಮ್ಮ ಸ್ವಿಂಗ್ ಬೌಲಿಂಗ್ ಮೂಲಕ ಎದುರಾಳಿಗಳನ್ನು ಕಾಡಿದರು. ಇವರು ಮೊದಲ ಓವರ್‌ನಲ್ಲೇ ಪತುಮ್ ನಿಸ್ಸಂಕಾ ಅವರಿಗೆ ಖೆಡ್ಡಾ ತೋಡಿದರು.

ಇನಿಂಗ್ಸ್ ಮೊದಲ ಓವರ್ ಎಸೆದ ಭುವನೇಶ್ವರ್ ಕುಮಾರ್ ಬ್ಯಾಟರ್‌ಗಳನ್ನು ಕಟ್ಟಿ ಹಾಕಿದರು. ಇವರು ಎಸೆದ ಲೆಂತ್ ಬೌಲ್, ಔಟ್ ಸೈಡ್ ಆಫ್ ಸ್ಟಂಪ್ ಹಾಕಿದ ಎಸೆತವನ್ನು ಕೆಣಕಿದ ಪತುಮ್ ನಿಸ್ಸಂಕಾ ಅವರು ತಪ್ಪಾಗಿ ಗ್ರಹಿಸಿದರು. ಚೆಂಡು ನೇರವಾಗಿ ಬಂದು ಪ್ಯಾಡ್‌ಗೆ ಬಡಿಯಿತು. ಭುವಿ ಔಟ್‌ಗೆ ಮನವಿ ಸಲ್ಲಿಸಿದರು. ಫೀಲ್ಡ್ ಅಂಪೈರ್ ನಟೌಟ್ ಎಂದು ನೀಡಿದರು. ನಾಯಕ ರಜತ್ ಪಾಟಿದಾರ್ ಡಿಆರ್‌ಎಸ್ ಪಡೆದರು. ಮೂರನೇ ಅಂಪೈರ್ ಪರಿಶೀಲಿಸಿ ಔಟ್ ಎಂದು ನೀಡಿದರು. ಡೆಲ್ಲಿ ಕ್ಯಾಪಿಟಲ್ಸ್‌ಗೆ ಆರಂಭದಲ್ಲಿ ಭುವಿ ಪೆಟ್ಟು ನೀಡಿದರು.
ಭುವಿ ಅಬ್ಬರ
ಇನಿಂಗ್ಸ್‌ನ ಮೂರನೇ ಓವರ್ ಬೌಲ್ ಮಾಡಲು ಬಂದ ಭುವಿ ಮತ್ತೊಮ್ಮೆ ಮಾರಕರಾದರು. ಈ ಓವರ್‌ನ ಎರಡನೇ ಎಸೆತದಲ್ಲಿ ಕರುಣ್ ನಾಯರ್ ಅವರಿಗೆ ಔಟ್ ಸೈಡ್ ಆಫ್ ಸ್ಟಂಪ್ ಎಸೆತವನ್ನು ಎಸೆದು ಡೀಪ್ ಥರ್ಡ್ ಮ್ಯಾನ್‌ನಲ್ಲಿ ಫಿಲ್ ಸಾಲ್ಟ್ ಅವರು ಹಿಡಿದ ಅಮೋಘ ಕ್ಯಾಚ್‌ಗೆ ಬಲಿಯಾದರು.
3ನೇ ಓವರ್‌ನ ಐದನೇ ಎಸೆತದಲ್ಲಿ ಭುವನೇಶ್ವರ್ ಕುಮಾರ್ ಮತ್ತೊಂದು ಶಾಕ್‌ನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಭುವಿ ನೀಡಿದರು. ಲೀಗ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಸಮೀರ್ ರಿಜ್ವಿ, ಸ್ವಿಂಗ್ ಬೌಲರ್ ಭುವನೇಶ್ವರ್ ಅವರ ಎಸೆತವನ್ನು ಕೆಣಕಿ ವಿಕೆಟ್ ಕೀಪರ್ ಜಿತೇಶ್ ಶರ್ಮಾ ಅವರಿಗೆ ಕ್ಯಾಚ್ ನೀಡಿದರು. ಈ ಮೂಲಕ ಭುವನೇಶ್ವರ್ ಕುಮಾರ್ ತಾವು ಎಸೆದ 7 ಎಸೆತಗಳಲ್ಲಿ 3 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications