ಮೊದಲ ಪಂದ್ಯದಲ್ಲೆ ದೊಡ್ಡ ದಾಖಲೆ ಮೇಲೆ ಕಣ್ಣು ನೆಟ್ಟಿರುವ RCB ವೇಗಿ
ಐಪಿಎಲ್ 18ನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ. ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಕಾದಾಟ ನಡೆಸಲಿವೆ. ಮೊದಲ ಪಂದ್ಯಕ್ಕೆ ಈಡನ್ ಗಾರ್ಡನ್ ಅಂಗಳ ಆತಿಥ್ಯ ವಹಿಸಲಿದೆ. ಈ ಬಾರಿ ಆರ್‌ಸಿಬಿ ವ ಉತ್ಸಾಹದಲ್ಲಿ ಕಣಕ್ಕೆ ಇಳಿಯಲಿದೆ. ಈ ವೇಳೆ ಸ್ಟಾರ್ ಆಟಗಾರರು ಆರ್‌ಸಿಬಿ ಮಡಿಲು ಸೇರಿದ್ದಾರೆ. ಹೀಗಾಗಿ ಈ ಬಾರಿ ಆರ್‌ಸಿಬಿ ಕಪ್ ಗೆಲ್ಲಬಹುದು ಎಂಬ ಲೆಕ್ಕಾಚಾರಗಳು ಆರಂಭವಾಗಿವೆ.
ಇಷ್ಟು ದಿನ ಆರ್‌ಸಿಬಿಯ ಆ ಒಂದು ವಿಭಾಗ ಕೊಂಚ ವೀಕ್ ಆದಂತೆ ಕಂಡು ಬರುತ್ತಿತ್ತು. ಆದ್ರೆ ಈ ಬಾರಿ ಆರ್‌ಸಿಬಿ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗವನ್ನು ಸಮಾನವಾಗಿ ಸರಿದೂಗಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಲುಂಗಿ ಎನ್‌ಗಿಡಿ, ಯಶ್ ದಯಾಳ್ ಅವರಂತಹ ಸ್ಟಾರ್ ಬೌಲರ್‌ಗಳು ಇದ್ದಾರೆ. ಇವರು ಎದುರಾಳಿ ಬ್ಯಾಟರ್‌ಗಳ ತಂತ್ರವನ್ನು ಮೆಟ್ಟಿ ನಿಲ್ಲಬಹುದು.

ಇತ್ತೀಚಿಗೆ ಸೌದಿಯಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಭುವನೇಶ್ವರ್ ಕುಮಾರ್ ಅವರನ್ನು ಆರ್‌ಸಿಬಿ ಜಿದ್ದಿಗೆ ಬಿದ್ದು ಖರೀದಿ ಮಾಡಿತ್ತು. ಈ ವೇಳೆ ಭುವಿ ಅವರನ್ನು ಸನ್ ತಂಡ ಉಳಿಸಿಕೊಳ್ಳುವಲ್ಲಿ ವಿಫಲವಾಗಿತ್ತು. ಇವರಿಗೆ ಹರಾಜಿನಲ್ಲಿ ಆರ್‌ಸಿಬಿ 10.75 ಕೋಟಿ ರೂಪಾಯಿ ನೀಡಿ ತಂಡಕ್ಕೆ ಬರಮಾಡಿಕೊಂಡಿದೆ. ಇವರು ಡೆತ್ ಓವರ್ ಹಾಗೂ ಪವರ್ ಪ್ಲೇನಲ್ಲಿ ಪರಿಣಾಮಕಾರಿ ಆಗಿದ್ದಾರೆ. ಇವರು ತಮ್ಮ ಸ್ವಿಂಗ್ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ಕಾಡಬಲ್ಲರು. ಕಳೆದ ಬಾರಿಯ ಐಪಿಎಲ್‌ನಲ್ಲಿ ಭುವಿ ಆಡಿದ 16 ಪಂದ್ಯಗಳಲ್ಲಿ 11 ವಿಕೆಟ್ ಕಬಳಿಸಿದ್ದರು.
ಯಾವ ದಾಖಲೆಯ ಮೇಲೆ ಭುವಿ ಕಣ್ಣು?
ಮೊದಲ ಪಂದ್ಯದಲ್ಲಿ ಆಡಲು ಮೈದಾನಕ್ಕೆ ಇಳಿಯುವಾಗ ಭುವಿ ದೊಡ್ಡ ಪಣವನ್ನು ತೊಟ್ಟ ಅಖಾಡ ಪ್ರವೇಶಿಸಲಿದ್ದಾರೆ. ಈ ವೇಳೆ ಭುವನೇಶ್ವರ್ ಕುಮಾರ್ ಅತಿ ದೊಡ್ಡ ದಾಖಲೆಯ ಮೇಲೆ ಕಣ್ಣು ನೆಟ್ಟಿರಲಿದ್ದಾರೆ. ಈ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಮೂರು ವಿಕೆಟ್ ಗಳನ್ನು ಪಡೆಯುವಲ್ಲಿ ಸಫಲರಾದ್ರೆ, ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಬಡ್ತಿ ಪಡೆಯಬಹುದು. ಸದ್ಯ ಇವರು ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಭುವಿ 176 ಪಂದ್ಯಗಳಲ್ಲಿ ಭುವಿ 181 ವಿಕೆಟ್‌ಗಳನ್ನು ಪಡೆದಿದ್ದಾರೆ. ಕೆಕೆಆರ್ ವಿರುದ್ಧ ಭುವನೇಶ್ವರ್ ಮೂರು ವಿಕೆಟ್ ಪಡೆದಲ್ಲಿ, ಡ್ವೇನ್ ಬ್ರಾವೋ ದಾಖಲೆಯನ್ನು ಹಿಂದಿಕ್ಕಲಿದ್ದಾರೆ. ಬ್ರಾವೋ ಐಪಿಎಲ್‌ನಲ್ಲಿ ಆಡಿದ 192 ಪಂದ್ಯಗಳಲ್ಲಿ 183 ವಿಕೆಟ್ ಕಬಳಿಸಿದ್ದಾರೆ.

ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಟಾಪ್ 5 ಬೌಲರ್ಸ್
ಯುಜುವೇಂದ್ರ ಚಹಾಲ್, 160 ಪಂದ್ಯ, 205 ವಿಕೆಟ್
ಪಿಯೂಷ್ ಚಾವ್ಲಾ, 192 ಪಂದ್ಯ, 192 ವಿಕೆಟ್
ಡ್ವೆನ್ ಬ್ರಾವೋ, 161 ಪಂದ್ಯ, 183 ವಿಕೆಟ್
ಭುವನೇಶ್ವರ್ ಕುಮಾರ್, 176 ಪಂದ್ಯ, 181 ವಿಕೆಟ್
ಸುನಿಲ್ ನರೈನ್, 177 ಪಂದ್ಯ, 180 ವಿಕೆಟ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications