Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೀಮ್ ಇಂಡಿಯಾದ ಬಾಗಿಲು ಬಡೆಯುತ್ತಿರುವ 36 ವರ್ಷದ ಭುವಿ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌)ನ ಲೀಗ್‌ ಹಂತದ ಕೊನೆಯ ಘಟ್ಟಕ್ಕೆ ಬಂದು ನಿಂತಿದೆ. ಈ ಲೀಗ್‌ನಲ್ಲಿ ಯುವ ಆಟಗಾರರು ಭರ್ಜರಿ ಪ್ರದರ್ಶನ ನೀಡಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಕನಸು ಕಾಣುತ್ತಿದ್ದಾರೆ. ಇನ್ನು ಅನುಭವಿ ಆಟಗಾರರು ಸಹ ತಾವೇನು ಕಡಿಮೆ ಇಲ್ಲ ಎನ್ನುವಂತಹ ಪ್ರದರ್ಶನ ನೀಡುತ್ತಿದ್ದಾರೆ. ಅನುಭವಿ ಆಟಗಾರರು ಜೆನ್‌ ಝಿ ಸವಾಲನ್ನು ಮೆಟ್ಟಿನಿಂತು ಅಬ್ಬರಿಸುತ್ತಾ ಇದ್ದಾರೆ. ಈ ವೇಳೆ ಎಲ್ಲರ ಗಮನ ಸೆಳೆದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಕಾಣಿಸಿಕೊಳ್ಳುವ ಆಟಗಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ವೇಗದ ಬೌಲರ್‌ ಭುವನೇಶ್ವರ್ ಕುಮಾರ್‌.

ಟೀಮ್ ಇಂಡಿಯಾ ಪರ ಈಗಾಗಲೇ ಟಿ20 ಕ್ರಿಕೆಟ್‌ ಆಡಿ ಗಮನ ಸೆಳೆದಿದ್ದಾರೆ. ಅಲ್ಲದೆ ಇವರು ಭಾರತದ ಪರ ಮೂರು ಮಾದರಿಯ ಕ್ರಿಕೆಟ್‌ ಆಡಿದ ಅನುಭವ ಹೊಂದಿದ್ದಾರೆ. ಇವರು ಭಾರತದ ಪರ ನವೆಂಬರ್‌ 22, 2022 ರಂದು ನ್ಯೂಜಿಲೆಂಡ್‌ ವಿರುದ್ಧ ಕೊನೆಯ ಪಂದ್ಯವನ್ನು ಆಡಿದ್ದರು. ಅಲ್ಲಿಂದ ಇವರು ಬ್ಲ್ಯೂ ಜೆರ್ಸಿ ತೊಟ್ಟೇ ಇಲ್ಲ. ಈಗ ಇವರು ಟೀಮ್ ಇಂಡಿಯಾಕ್ಕೆ ಕಮ್‌ ಬ್ಯಾಕ್‌ ಮಾಡುವ ಕನಸು ಕಾಣುತ್ತಿದ್ದಾರೆ.

Bhuvneshwar Kumar

19ನೇ ಆವೃತ್ತಿಯ ಐಪಿಎಲ್‌ನಲ್ಲಿ ಭುವನೇಶ್ವರ್ ಕುಮಾರ್ ಕಮಾಲ್‌ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಈ ಲೀಗ್‌ನಲ್ಲಿ ಚೆಂಡು ಭುವನೇಶ್ವರ್ ಅವರ ಮಾತು ಕೇಳುತ್ತಿದೆ. ಪವರ್‌ ಪ್ಲೇನಲ್ಲಿ ಆರ್‌ಸಿಬಿ ತಂಡ ಮೇಲುಗೈ ಸಾಧಿಸಲು ಸಹಾಯಕವಾಗಿರುವ ಬೌಲರ್‌. ಭಾನುವಾರ ನಡೆದ ಎರಡನೇ ಪಂದ್ಯದಲ್ಲೂ ಭುವಿ ಕಮಾಲ್ ಪ್ರದರ್ಶನ ನೀಡಿದ್ದಾರೆ. ಅಲ್ಲದೆ ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಬ್ಯಾಟರ್‌ಗಳಿಗೆ ಕಂಟಕವಾದರು.

ಭುವನೇಶ್ವರ್‌ ಕುಮಾರ್‌ ಈ ಬಾರಿಯ ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದಿರುವ ಬೌಲರ್‌. ಇವರು ಆಡಿದ 11 ಪಂದ್ಯಗಳಲ್ಲಿ 21 ವಿಕೆಟ್‌ ಕಬಳಿಸಿ ಮತ್ತೊಮ್ಮೆ ಪರ್ಪಲ್ ಕ್ಯಾಪ್ ಪಡೆಯುವ ರೇಸ್‌ನಲ್ಲಿದ್ದಾರೆ. ಈ ಮೂಲಕ ಇವರು ಬಿಸಿಸಿಐ ಆಯ್ಕೆದಾರರ ಗಮನ ಸೆಳೆಯುತ್ತಿದ್ದಾರೆ. ಇವರಿಗೆ ಟೀಮ್ ಇಂಡಿಯಾದಲ್ಲಿ ಚಾನ್ಸ್‌ ನೀಡಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಬಿಸಿಸಿಐ ಅವರಿಗೆ ಬರೀ ಪ್ರದರ್ಶನದ ಆಧಾರದ ಮೇಲೆ ಅವಕಾಶ ನೀಡುವುದಾದರೆ ಇವರಿಗೂ ಒಂದು ಅವಕಾಶ ನೀಡಬೇಕು ಎಂಬ ಕೂಗು ಕೇಳಿ ಬರುತ್ತಿದೆ.

ಭುವಿ ಸಾಧನೆ

ಟೀಮ್ ಇಂಡಿಯಾದ ಪರ ಭುವನೇಶ್ವರ್ ಕುಮಾರ್‌ ಆಡಿದ 21 ಟೆಸ್ಟ್‌ ಪಂದ್ಯಗಳಲ್ಲಿ 63 ವಿಕೆಟ್‌ ಪಡೆದಿದ್ದಾರೆ. ಅಲ್ಲದೆ ಇವರು ಆಡಿದ 121 ಏಕದಿನ ಪಂದ್ಯಗಳಲ್ಲಿ 141 ವಿಕೆಟ್‌ ಪಡೆದಿದ್ದಾರೆ. ಭುವಿ ಭಾರತದ ಪರ 87 ಟಿ20 ಪಂದ್ಯಗಳನ್ನು ಆಡಿದ್ದು 90 ವಿಕೆಟ್‌ ಕಬಳಿಸಿದ್ದಾರೆ. ಇನ್ನು ಭುವನೇಶ್ವರ್ ಕುಮಾರ್ ಐಪಿಎಲ್‌ನಲ್ಲಿ 3 ತಂಡಗಳ ಪರ ಕಣಕ್ಕೆ ಇಳಿದಿದ್ದು, 201 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಇವರು 219 ವಿಕೆಟ್‌ ಪಡೆದಿದ್ದಾರೆ. ಅಲ್ಲದೆ ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

Story first published: Monday, May 11, 2026, 10:07 [IST]
Other articles published on May 11, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+