Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕ್ರಿಕೆಟರ್ ಭುವನೇಶ್ವರ್ ಜತೆ ನೂಪುರ್ ನಿಶ್ಚಿತಾರ್ಥ

ಮೀರತ್(ಉತ್ತರಪ್ರದೇಶ), ಅಕ್ಟೋಬರ್ 05: ತನ್ನ ಗೆಳತಿಯ ಜತೆ ಡೇಟಿಂಗ್ ಮಾಡಿದ ಚಿತ್ರವನ್ನು ಹಂಚಿಕೊಂಡಿದ್ದ ಕ್ರಿಕೆಟರ್ ಭುವನೇಶ್ವರ್ ಕುಮಾರ್ ಅವರು ಈಗ ವಿವಾಹ ನಿಶ್ಚಿತಾರ್ಥದ ಸಂಭ್ರಮದಲ್ಲಿದ್ದಾರೆ.

27 ವರ್ಷ ವಯಸ್ಸಿನ ಭುವನೇಶ್ವರ್ ಕುಮಾರ್ ಅವರು ಮದುವೆ ನೂಪುರ್ ನಾಗರ್ ಜತೆ ನಿಶ್ಚಯವಾಗಿದೆ. ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಕ್ರಿಕೆಟ್ ಸರಣಿಯಿಂದ ಸಿಕ್ಕ ಸಣ್ಣ ಬಿಡುವಿನಲ್ಲಿ ಈ ಶುಭ ಸಮಾರಂಭವನ್ನು ಸಂಪನ್ನಗೊಳಿಸಿದ್ದಾರೆ.

Bhuvneshwar Kumar gets engaged to his 'better half' Nupur Nagar

ಬುಧವಾರದಂದು ವೇಗಿ ಭುವನೇಶ್ವರ್ ಕುಮಾರ್ ಅವರು ತಮ್ಮ ಗೆಳತಿ ನೂಪುರ್ ಅವರ ಚಿತ್ರವನ್ನು ಮೊದಲ ಬಾರಿಗೆ ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಂಡಿದ್ದರು. ಉತ್ತರಪ್ರದೇಶದ ಮೀರತ್ ಜಿಲ್ಲೆಯಲ್ಲಿ ನನ್ನ ಸಂಗಾತಿ ಜತೆಗಿದ್ದೇನೆ ಎಂದಿದ್ದರು.

ಈ ಮುಂಚೆ ಬೆಂಗಾಲಿ ರೂಪದರ್ಶಿ ಕಮ್ ನಟಿ ಅನುಸ್ಮೃತಿ ಸರ್ಕಾರ್ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಇಬ್ಬರು ಮುಂಬೈನಲ್ಲಿ ಆಗಾಗ ಪಾರ್ಟಿಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು.

ಆದರೆ, ಸನ್ ರೈಸರ್ಸ್ ಹೈದರಾಬಾದ್ ತಂಡದ ವೇಗಿ ಭುವನೇಶ್ವರ್ ಅವರು ಎಲ್ಲಾ ಸುದ್ದಿಗಳನ್ನು ಅಲ್ಲಗೆಳೆದು, ತಮ್ಮ ಸಂಗಾತಿಯನ್ನು ಪರಿಚಿಯಿಸಿದ್ದು, ನಿಶ್ಚಿತಾರ್ಥ ಕೂಡಾ ಮುಗಿಸಿಕೊಂಡಿದ್ದಾರೆ.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+