ವೇಗಿ ಭುವನೇಶ್ವರ್ ಕುಮಾರ್‌ರಲ್ಲಿ ಕೋವಿಡ್-19 ಲಕ್ಷಣ, ಕ್ವಾರಂಟೈನ್

ನವದೆಹಲಿ: ಕೋವಿಡ್-19 ದ್ವಿತೀಯ ಅಲೆ ಭಾರತದಲ್ಲಿ ಸಂಕಷ್ಟ ಸೃಷ್ಠಿಸಿದೆ. ಬಾಲಿವುಡ್ ಸ್ಟಾರ್‌ಗಳು, ಕ್ರೀಡಾಪಟುಗಳು, ರಾಜಕಾರಣಿಗಳು ಮೊದಲಾದವರಿಗೆಲ್ಲ ಮಾರಕ ಸೋಂಕು ತಗುಲಿದೆ. 2021 ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕೂಡ ಕೋವಿಡ್ ಕಾರಣದಿಂದಲೇ ಅರ್ಧದಲ್ಲೇ ನಿಲ್ಲಿಸಲ್ಪಟ್ಟಿತ್ತು.
ಐಪಿಎಲ್ ವೇಳೆ ಒಂದಷ್ಟು ಆಟಗಾರರಿಗೆ ಕೊರೊನಾ ಸೋಂಕು ತಗುಲಿತ್ತು. ಭಾರತದ ವೇಗಿ ಭುವೇಶ್ವರ್ ಕುಮಾರ್ ಅವರಲ್ಲೂ ಈಗ ಕೋವಿಡ್-19 ಲಕ್ಷಣಗಳು ಕಾಣಿಸಿರುವುದಾಗಿ ವರದಿಯಾಗಿದೆ. ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಭುವಿಯೀಗ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.
ಸನ್‌ರೈಸರ್ಸ್ ಹೈದರಾಬಾದ್ ವೇಗಿಯಾಗಿರುವ ಭುವಿ ಮತ್ತವರ ಪತ್ನಿ ನುಪುರ್ ನಗರ್ ಉತ್ತರಪ್ರದೇಶದ ಮೀರತ್‌ನಲ್ಲಿರುವ ತಮ್ಮ ನಿವಾಸದಲ್ಲಿ ಕ್ವಾರಂಟೈನ್ ಪಾಲಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಭುವನೇಶ್ವರ್ ತಾಯಿಗೆ ಕೋವಿಡ್ ಪಾಸಿಟಿವ್ ಬಂದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ಅದಾದ ಬಳಿಕ ಭುವಿ ಮತ್ತು ಅವರ ಪತ್ನಿಯೂ ಕ್ವಾರಂಟೈನ್‌ಗೆ ಹೋಗಿರುವುದಾಗಿ ತಿಳಿದು ಬಂದಿದೆ.
ಭುವಿ ಮತ್ತು ಅವರ ಪತ್ನಿಗೆ ಕೋವಿಡ್ ಪಾಸಿಟಿವ್ ಬಂದಿದೆಯಾ ಇಲ್ಲವಾ ಅನ್ನೋದು ಇನ್ನೂ ಖಾತರಿಯಾಗಿಲ್ಲ. ಆದರೆ ಇಬ್ಬರೂ ಸದ್ಯ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದಷ್ಟೇ ಹೇಳಲಾಗುತ್ತಿದೆ. ಮೇ 21ರಂದು ಭುವಿ ತಾಯಿಗೆ ಕೋವಿಡ್ ಪಾಸಿಟಿವ್ ಬಂದಿತ್ತು. ಕಳೆದ ತಿಂಗಳಲ್ಲಷ್ಟೇ ಭುವಿ ತಂದೆ ಲಿವರ್ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications