2021ರ ಐಪಿಎಲ್‌ನಲ್ಲಿ ಕಣಕ್ಕಿಳಿಯಲಿದ್ದಾರೆ ಭುವನೇಶ್ವರ್ ಕುಮಾರ್

ನವದೆಹಲಿ: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ನಡೆದಿದ್ದ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅಕ್ಟೋಬರ್ 2ರಂದು ಸ್ನಾಯು ಸೆಳೆತದಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದ ಭಾರತದ ವೇಗಿ ಭುವನೇಶ್ವರ್ ಕುಮಾರ್ 2021ರ ಐಪಿಎಲ್‌ನಲ್ಲಿ ಮತ್ತೆ ಕಣಕ್ಕಿಳಿಯಲಿದ್ದಾರೆ.
2021ರ ಏಪ್ರಿಲ್ ಆರಂಭದಲ್ಲಿ ಶುರುವಾಗಲಿರುವ 14ನೇ ಆವೃತ್ತಿ ಐಪಿಎಲ್‌ನಲ್ಲಿ ಭುವನೇಶ್ವರ್ ಮತ್ತೆ ಬೌಲಿಂಗ್ ಮಾಡಲಿದ್ದಾರೆ. ಅಲ್ಲಿಗೆ ಭುವಿ ಸುಮಾರು 6 ತಿಂಗಳ ಕಾಲ ವಿಶ್ರಾಂತಿ ಪಡೆದುಕೊಂಡಂತಾಗುತ್ತೆ. 2020ರ ಐಪಿಎಲ್‌ನಲ್ಲಿ ಭುವನೇಶ್ವರ್ ಸನ್ ರೈಸರ್ಸ್ ಹೈದರಾಬಾದ್ ಪರ ಆಡುತ್ತಿದ್ದರು.
30ರ ಹರೆಯದ ಭಯವನೇಶ್ವರ್ ಸದ್ಯ ಬೆಂಗಳೂರಿನಲ್ಲಿರುವ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಫಿಟ್‌ಗೆ ಮರಳುತ್ತಿದ್ದಾರೆ. ಮುಂದಿನ ತಿಂಗಳ ವೇಳೆ ಭುವಿ ಸಂಪೂರ್ಣವಾಗಿ ಫಿಟ್ನೆಸ್‌ಗೆ ಮರಳು ನಿರೀಕ್ಷೆಯಿದೆ.
'ಸುಮಾರು 6 ತಿಂಗಳ ಕಾಲ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿಯಲಿರುವ ಭುವನೇಶ್ವರ್ ಕುಮಾರು 2021ರ ಐಪಿಎಲ್‌ನಲ್ಲಿ ಆಡಲು ಲಭ್ಯರಿರಲಿದ್ದಾರೆ,' ಎಂದು ಅಧಿಕಾರಿಯೊಬ್ಬರು ಭುವಿ ಚೇತರಿಕೆಯ ಬಗ್ಗೆ ಎಎನ್‌ಐಗೆ ಮಾಹಿತಿ ನೀದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications