ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿ ನಡೆಯುತ್ತಿದೆ. ಈ ವೇಳೆ ಟೀಮ್ ಇಂಡಿಯಾ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾಗುತ್ತಿದ್ದಾರೆ. ತಾವು ಬಯಸಿದ ಸ್ಲಾಟ್‌ನಲ್ಲೇ ರನ್ ಬರ ಅನುಭವಿಸುತ್ತಿರುವ ಸ್ಟಾರ್ ಆಟಗಾರ ಶುಭಮನ್ ಗಿಲ್, ಟೀಕಾಕಾರರಿಗೆ ಆಹಾರವಾಗಿದ್ದಾರೆ. ಮ್ಯಾನೇಜ್ಮೆಂಟ್ ಕಾಡಿ ಬೇಡಿ ಮೂರನೇ ಕ್ರಮಾಂಕ ಪಡೆದಿದ್ದ ಶುಭಮನ್ ಗಿಲ್, ಈ ಸ್ಲಾಟ್‌ನಲ್ಲಿ ಅಬ್ಬರಿಸುವುದು ಮಂಕಾದಂತೆ ಆಗಿದೆ. ಆಗೊಮ್ಮೆ ಈಗೊಮ್ಮೆ ಅಬ್ಬರಿಸಿದರೂ, ಇವರ ಆಟ ತಂಡಕ್ಕೆ ನೆರವಾಗುತ್ತಿಲ್ಲ.
ದಕ್ಷಿಣ ಆಫ್ರಿಕಾ (ಎಸ್), ಇಂಗ್ಲೆಂಡ್ (ಇ), ನ್ಯೂಜಿಲೆಂಡ್ (ಎನ್), ಆಸ್ಟ್ರೇಲಿಯಾ (ಎ) ಪಿಚ್‌ಗಳಲ್ಲಿ ಶುಭಮನ್ ಗಿಲ್ ದಾಖಲೆ ನೀರಸವಾಗಿದೆ. ಸೆನಾ ರಾಷ್ಟ್ರದಲ್ಲಿ ಇವರು ರನ್ ಕಲೆ ಹಾಕುವಲ್ಲಿ ವಿಫಲರಾಗುತ್ತಿದ್ದ ತಂಡದ ಚಿಂತೆಯನ್ನು ಹೆಚ್ಚಿಸಿದೆ. ಪ್ರಸಕ್ತ ಬಾರ್ಡರ್ ಗವಾಸ್ಕರ್ ಸರಣಿಯಲ್ಲೂ ಇವರ ಬ್ಯಾಟ್ ಮೌನಕ್ಕೆ ಶರಣಾಗಿದೆ. ತಂಡ ಇವರ ಮೇಲೆ ಭರವಸೆ ಇಟ್ಟರು ಸಹ ಠುಸ್ ಪಟಾಕಿ ಆಗಿದೆ. ನೆಲಕಚ್ಚಿ ನಿಂತು ಬ್ಯಾಟ್ ಮಾಡಬೇಕಿದ್ದ ಮೂರನೇ ಕ್ರಮಾಂಕದಲ್ಲಿ ಶುಭಮನ್ ಗಿಲ್ ಕೆಟ್ಟ ಹೊಡೆತಗಳನ್ನು ಪ್ರಯೋಗಿಸಿ ಔಟ್ ಆಗುತ್ತಿದ್ದಾರೆ.

ಶುಭಮನ್ ಗಿಲ್ ಏಷ್ಯಾ ಖಂಡದ ಆಚೆ ಆಡುವ ಟೆಸ್ಟ್‌ನಲ್ಲಿ ಅಂತಹ ಸಾಧನೆಯನ್ನು ಏನು ಮಾಡಿಲ್ಲ. ಸೇನಾ ರಾಷ್ಟ್ರದಲ್ಲಿ ಇವರ ಪ್ರದರ್ಶನವನ್ನು ಅಭಿಮಾನಿಗಳು ಭುವನೇಶ್ವರ್ ಕುಮಾರ್ ಅವರೊಂದಿಗೆ ತುಲನೆ ಮಾಡುತ್ತಾ ಇದ್ದಾರೆ. ಅಭಿಮಾನಿಗಳು ಹೇಳುವಂತೆ ಸೇನಾ ರಾಷ್ಟ್ರದಲ್ಲಿ ಗಿಲ್‌ಗಿಂತಲೂ, ಭುವನೇಶ್ವರ್ ಕುಮಾರ್ ಅವದ ದಾಖಲೆ ಬೆಸ್ಟ್ ಇದೆ ಎಂದು ಹೇಳುತ್ತಿದ್ದಾರೆ. ಇದಕ್ಕೆ ಅಂಕಿ ಅಂಶಗಳು ಸಹ ಸಾಥ್ ನೀಡಿವೆ.
ಶುಭಮನ್ ಗಿಲ್ ಆಸ್ಟ್ರೇಲಿಯಾ ಪ್ರವಾಸದಲ್ಲಿ ಮೊದಲ ಟೆಸ್ಟ್ ಮಿಸ್ ಮಾಡಿಕೊಂಡಿದ್ದರು. ಗಾಯದ ಕಾರಣದಿಂದ ಪರ್ತ್ ಟೆಸ್ಟ್‌ನಿಂದ ಇವರು ದೂರ ಉಳಿದಿದ್ದರು. ಎರಡನೇ ಟೆಸ್ಟ್‌ನಲ್ಲಿ ತಂಡ ಸೇರಿದ ಗಿಲ್ ಮೊದಲ ಇನಿಂಗ್ಸ್‌ನಲ್ಲಿ 31 ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 28 ರನ್ ಸಿಡಿಸಿದರು. ಇನ್ನು ಮೂರನೇ ಟೆಸ್ಟ್‌ನಲ್ಲೂ ವಿಶೇಷ ಸಾಧನೆ ಮಾಡಲಿಲ್ಲ. ಗಿಲ್ ಸೇನಾ ರಾಷ್ಟ್ರದಲ್ಲಿ ಇದುವರೆಗೆ 26.7ರ ಸರಾಸರಿಯಲ್ಲಿ 481 ರನ್ ಸಿಡಿಸಿದ್ದಾರೆ. ಇದರಲ್ಲಿ 2 ಅರ್ಧಶತಕ ಸೇರಿವೆ.

ಭುವನೇಶ್ವರ್ ಕುಮಾರ್ ಒಬ್ಬ ಉತ್ತಮ ವೇಗದ ಬೌಲರ್ ಅಲ್ಲದೆ ಒಬ್ಬ ಕ್ಲಾಸ್ ಆಲ್‌ರೌಂಡರ್. ಇವರು ತಂಡಕ್ಕೆ ಅಗತ್ಯವಿದ್ದಾಗ ಹಲವು ಪಂದ್ಯಗಳಲ್ಲಿ ಮನಮೋಹಕ ಬ್ಯಾಟಿಂಗ್ ನಡೆಸಿದ್ದಾರೆ. ಇವರು ಸೇನಾ ರಾಷ್ಟ್ರದಲ್ಲಿ 30.6ರ ಸರಾಸರಿಯಲ್ಲಿ 398 ರನ್ ಸಿಡಿಸಿದ್ದಾರೆ. ಇದರಲ್ಲಿ 3 ಅರ್ಧಶತಕಗಳು ಸೇರಿವೆ. ಈ ಅಂಕಿ ಅಂಶಗಳನೆಲ್ಲಾ ನೋಡಿದ ಅಭಿಮಾನಿಗಳು ಸೇನಾ ರಾಷ್ಟ್ರದಲ್ಲಿ ಶುಭಮನ್ ಗಿಲ್ ಅವರಿಗಿಂತಲೂ, ಭುವನೇಶ್ವರ್ ಕುಮಾರ್ ಬೆಸ್ಟ್ ಪ್ಲೇಯರ್ ಎಂದು ಹೇಳುತ್ತಿದ್ದಾರೆ. ಭುವಿ ಇಂಗ್ಲೆಂಡ್‌ನಲ್ಲಿ 247, ದಕ್ಷಿಣ ಆಫ್ರಿಕಾದಲ್ಲಿ 101, ಆಸ್ಟ್ರೇಲಿಯಾದಲ್ಲಿ 50 ರನ್ ಸಿಡಿಸಿದ್ದಾರೆ.