IPL 2025: ಐಪಿಎಲ್‌ನಲ್ಲಿ ವಿಶೇಷ ದಾಖಲೆಯ ಮೇಲೆ ಕಣ್ಣು ನೆಟ್ಟಿರುವ ಸ್ಟಾರ್ಸ್
ಈ ಬಾರಿಯ ಐಪಿಎಲ್‌ನಲ್ಲಿ ಹಲವು ಸ್ಟಾರ್ ಆಟಗಾರರು ತಮ್ಮ ಸ್ಥಿರ ಪ್ರದರ್ಶನವನ್ನು ಮುಂದುವರೆಸುವ ಇರಾದೆಯನ್ನು ಹೊಂದಿದ್ದಾರೆ. ಈ ಸಾಲಿನಲ್ಲಿ ಆರ್‌ಸಿಬಿ ಆಟಗಾರರು ಕಾಣಿಸಿಕೊಳ್ಳುತ್ತಾರೆ. ತಮ್ಮ ಬಿಗುವಿನ ದಾಳಿಯಿಂದ ಹೆಸರುವಾಸಿಯಾಗಿದ್ದ ಭುವನೇಶ್ವರ್ ಕುಮಾರ್ ಈ ಬಾರಿಯ ಐಪಿಎಲ್‌ನಲ್ಲಿ ದೊಡ್ಡ ದಾಖಲೆಯನ್ನು ಬರೆಯುವ ಕನಸು ಹೊಂದಿದ್ದಾರೆ. ಇವರೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಅಶ್ವಿನ್ ಸಹ ಇಂತಹದ್ದೇ ದಾಖಲೆಯನ್ನು ಈ ಆವೃತ್ತಿಯ ಐಪಿಎಲ್‌ನಲ್ಲಿ ನಿರ್ಮಿಸುವ ಕನಸು ಹೊಂದಿದ್ದಾರೆ.
ಈ ಇಬ್ಬರೂ ಬೌಲರ್‌ಗಳು ತಮ್ಮ ತಮ್ಮ ವಿಭಾಗದಲ್ಲಿ ಅಬ್ಬರಿಸಿದವರು. ವೇಗದ ದಾಳಿಯಲ್ಲಿ ಭುವಿ ಎದುರಾಳಿಗಳನ್ನು ಕಾಡುವ ಬೌಲರ್. ಇನ್ನು ಸ್ಪಿನ್ ವಿಭಾಗದಲ್ಲಿ ಅಶ್ವಿನ್ ತಮ್ಮ ಪಿರ್ಕಿಯಿಂದ ಬ್ಯಾಟರ್‌ಗಳ ನಿದ್ದೆ ಕೆಡಿಸುವ ಬೌಲರ್. ಈ ಇಬ್ಬರೂ ಆಟಗಾರರು ಈಗ ವಿಶೇಷ ಕ್ಲಬ್ ಸೇರುವ ಕನಸಿನಲ್ಲಿದ್ದಾರೆ. ಅಂದಹಾಗೆ ಈ ವಿಶೇಷ ಕ್ಲಬ್‌ನ್ನು ಯುಜುವೇಂದ್ರ ಚಹಾಲ್ ಮಾತ್ರ ಸೇರಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಭುವಿ, ಅಶ್ವಿನ್ ಈ ಕ್ಲಬ್ ಸೇರುವ ಇರಾದೆಯನ್ನು ಹೊಂದಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ 200 ವಿಕೆಟ್ ಪಡೆಯುವ ದಾಖಲೆಯ ಮೇಲೆ ಭುವನೇಶ್ವರ್ ಕುಮಾರ್ ಹಾಗೂ ಅಶ್ವಿನ್ ಕಣ್ಣು ನೆಟ್ಟಿದ್ದಾರೆ. ಈ ಕ್ಲಬ್‌ನಲ್ಲಿ ಈಗ ಯುಜುವೇಂದ್ರ ಚಹಾಲ್ ಮಾತ್ರ ಇದ್ದು, ಇವರ ಬುಟ್ಟಿಯಲ್ಲಿ 205 ವಿಕೆಟ್‌ಗಳು ಇವೆ. ಇವರು ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್. ಈ ಪಟ್ಟಿಯಲ್ಲಿ ಪಿಯೂಷ್ ಚಾವ್ಲಾಗೆ (192 ವಿಕೆಟ್) ಎರಡನೇ ಸ್ಥಾನ. ಮಾಜಿ ಆಲ್‌ರೌಂಡರ್ ಡ್ವೇನ್ ಬ್ರಾವೊಗೆ (183 ವಿಕೆಟ್) ಮೂರನೇ ಸ್ಥಾನ. ನಾಲ್ಕನೇ ಸ್ಥಾನದಲ್ಲಿ ಭುವನೇಶ್ವರ್ ಕುಮರ್ ಇದ್ದಾರೆ.
ಯಾವ ದಾಖಲೆಯ ಸನಿಹದಲ್ಲಿದ್ದಾರೆ ಸ್ಟಾರ್ಸ್?
ಭುವನೇಶ್ವರ್ ಕುಮಾರ್ ಒಟ್ಟಾರೆ ಐಪಿಎಲ್‌ನಲ್ಲಿ 176 ಪಂದ್ಯಗಳನ್ನು ಆಡಿದ್ದು 181 ವಿಕೆಟ್‌ಗಳನ್ನು ಪಡೆದಿದ್ದಾರೆ. ಇವರು ಈ ಐಪಿಎಲ್‌ನಲ್ಲಿ 19 ವಿಕೆಟ್ ಪಡೆದಲ್ಲಿ 200 ವಿಕೆಟ್ ಸಾಧನೆ ಮಾಡಬಹುದಾಗಿದೆ. ಇನ್ನು ಇದೇ ಸಾಧನೆಯನ್ನು ಮಾಡುವ ನಿಟ್ಟಿನಲ್ಲಿ ಸುನಿಲ್ ನರೈನ್ ಸಹ ಕಣ್ಣು ನೆಟ್ಟಿದ್ದಾರೆ. ಇವರು ಆಡಿದ 177 ಪಂದ್ಯಗಳಲ್ಲಿ 180 ವಿಕೆಟ್ ಕಬಳಿಸಿದ್ದಾರೆ. ಇವರಿಗೆ 20 ವಿಕೆಟ್ ಈ ಐಪಿಎಲ್‌ನಲ್ಲಿ ಸಿಕ್ಕಲ್ಲಿ ಇವರು ಸಹ ವಿಶೇಷ ಕ್ಲಬ್‌ಗೆ ಎಂಟ್ರಿ ಪಡೆಯಬಹುದು.

ಪ್ರಸಕ್ತ ಐಪಿಎಲ್ 2025 ರಲ್ಲಿ ಮತ್ತೆ ಸಿಎಸ್‌ಕೆ ಜೆರ್ಸಿಯಲ್ಲಿ ರವಿಚಂದ್ರನ್ ಅಶ್ವಿನ್ ಕಾಣಿಸಿಕೊಳ್ಳಲಿದ್ದಾರೆ. ಸಿಎಸ್‌ಕೆ ತಂಡದ ತವರು ಮೈದಾನ ಎಂಎ ಚಿದಂಬರಂ ಕ್ರೀಡಾಂಗಣವನ್ನು ಸ್ಪಿನ್ನರ್‌ಗಳಿಗೆ ಅನುಕೂಲಕರವಾಗಿರುತ್ತದೆ. ಅಶ್ವಿನ್ 212 ಪಂದ್ಯಗಳಲ್ಲಿ 180 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಆವೃತ್ತಿಯಲ್ಲಿ 20 ವಿಕೆಟ್ ಪಡೆದಲ್ಲಿ ವಿಶೇಷ ಕ್ಲಬ್ ಸೇರಬಹುದು.
ಪ್ರಸಕ್ತ ಐಪಿಎಲ್‌ನಲ್ಲಿ ಈ ಕ್ಲಬ್‌ನ್ನು ಯಾರು ಬೇಗ ಮುಟ್ಟುತ್ತಾರೆ ಎಂಬ ಪ್ರಶ್ನೆಗಳು ಎದ್ದಿವೆ. ಮೊದಲ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಭುವನೇಶ್ವರ್ ಕುಮಾರ್ ಹೇಗೆ ಪ್ರದರ್ಶನ ನೀಡಲಿದ್ದಾರೆ ಎನ್ನುವತ್ತ ಆರ್‌ಸಿಬಿ ಅಭಿಮಾನಿಗಳ ಚಿತ್ತ ನೆಟ್ಟಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications