For Quick Alerts
ALLOW NOTIFICATIONS  
For Daily Alerts
 

CSK vs RCB IPL 2025: ಆರ್‌ಸಿಬಿ ತಂಡದಲ್ಲಿ ಬದಲಾವಣೆ: ತಂಡಕ್ಕೆ ಎಂಟ್ರಿ ನೀಡಲಿದ್ದಾರೆ ಸ್ವಿಂಗ್ ಕಿಂಗ್

18ನೇ ಆವೃತ್ತಿಯ ಐಪಿಎಲ್‌ ಉದ್ಘಾಟನಾ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿ ಗೆಲುವು ಸಾಧಿಸಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಅಬ್ಬರಿಸಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಕೋಲ್ಕತ್ತಾ ನೈಟ್ ರೈಡರ್ಸ್‌ ತಂಡವನ್ನು ಮಣಿಸಿ ಆರ್ಭಟಿಸಿದೆ. ಆರ್‌ಸಿಬಿ ಈಗ ಎರಡನೇ ಪಂದ್ಯಕ್ಕಾಗಿ ಸಿದ್ಧತೆ ನಡೆಸಿದೆ. ಬೆಂಗಳೂರು ತಂಡ ತನ್ನ ಎರಡನೇ ಪಂದ್ಯವನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಆಡಲಿದೆ. ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ತಂಡದಲ್ಲಿ ಬದಲಾವಣೆ ಕಾಣಬಹುದು.

ಚೆನ್ನೈನ ಎಂ.ಎ ಚಿದಂಬರಂ ಅಂಗಳದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಬೆಂಗಳೂರು ತಂಡದಲ್ಲಿ ಬದಲಾವಣೆ ಕಾಣಲಿದೆ. ಮೊದಲ ಪಂದ್ಯದಿಂದ ದೂರ ಉಳಿದಿದ್ದ ಸ್ವಿಂಗ್‌ ಬೌಲರ್‌ ಭುವನೇಶ್ವರ್ ಕುಮಾರ್‌ ಅವರು ಎರಡನೇ ಪಂದ್ಯಕ್ಕೆ ಫಿಟ್ ಆಗಿದ್ದಾರೆ ಎಂಬ ಮಾಹಿತಿಗಳು ಬರುತ್ತಿವೆ. ಗೆಲುವಿನ ತಂಡದ ಕಾಂಬಿನೇಷನ್‌ ಚೇಂಜ್‌ ಮಾಡುವ ಅನಿವಾರ್ಯತೆ ಆರ್‌ಸಿಬಿಗೆ ಇದೆ. ಭುವನೇಶ್ವರ್ ಕುಮಾರ್ ಅವರು ತಂಡದಲ್ಲಿ ಸ್ಥಾನ ಪಡೆದರೆ ಯಾರ ಸ್ಥಾನಕ್ಕೆ ಅಪಾಯ ಎಂಬ ಬಗ್ಗೆ ವರದಿ ಇಲ್ಲಿದೆ.

Bhuvneshwar Kumar Set to Return for RCB s Clash Against CSK Rasik Salamdar s Spot in Jeopardy

ಯಾರ ಸ್ಥಾನಕ್ಕೆ ಕುತ್ತು?

ಕೋಲ್ಕತ್ತಾ ನೈಟ್‌ ರೈಡರ್ಸ್ ವಿರುದ್ಧ ಪಂದ್ಯದಲ್ಲಿ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದಿದ್ದ ರಸಿಕ್ ಸಲಾಂ ದಾರ್ ಸ್ಥಿರ ಪ್ರದರ್ಶನ ನೀಡಿದ್ದರು. ಇವರು 3 ಓವರ್‌ ಬೌಲಿಂಗ್ ನಡೆಸಿ 35 ರನ್‌ ನೀಡಿ 1 ವಿಕೆಟ್ ಕಬಳಿಸಿದರು. ಇವರು 11.67ರ ಎಕನಾಮಿಯಲ್ಲಿ ರನ್‌ ನೀಡಿದ್ದಾರೆ. ಇವರು ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಕೊಂಚ ಎಡವಿದ್ರು. ಹೀಗಾಗಿ ಇವರ ಸ್ಥಾನದ ಮೇಲೆ ಅಪಾಯದ ತೂಗಗತ್ತಿ ನೇತಾಡುತ್ತಿದೆ.

Take a Poll

ಇನ್ನು ಮೊದಲ ಪಂದ್ಯದಲ್ಲಿ ತನ್ನ ಮಾಜಿ ತಂಡದ ವಿರುದ್ಧ ಸ್ಥಿರ ಬೌಲಿಂಗ್ ಪ್ರದರ್ಶನ ನೀಡಿದ ಸುಯೇಶ್ ಶರ್ಮಾ ಅವರ ಸ್ಥಾನದ ಮೇಲೆ ಅಪಾಯದ ತುಗುಗತ್ತಿ ನೇತಾಡುತ್ತಿದೆ. ಇವರು ಸಹ ಮೊದಲ ಪಂದ್ಯದಲ್ಲಿ ರನ್‌ಗಳನ್ನು ನೀಡಿ ಕೈ ಸುಟ್ಟುಕೊಂಡಿದ್ದಾರೆ. ಮಾಡಿದ 4 ಓವರ್‌ಗಳಲ್ಲಿ ಇವರು 47 ರನ್‌ ನೀಡಿದ್ದರು. ಆದ್ರೆ ಇವರು ಆಂಡ್ರೆ ರಸೆಲ್‌ ಅವರ ಮಹತ್ವದ ವಿಕೆಟ್‌ ಪಡೆದಿದ್ದರು. ಚೆನ್ನೈನಲ್ಲಿ ಬೌಲ್‌ ಸ್ಪಿನ್ ಆಗುವುದರಿಂದ ಇವರನ್ನು ತಂಡದಲ್ಲಿ ಉಳಿಸಿಕೊಳ್ಳಬಹುದು ಎಂಬ ಲೆಕ್ಕಾಚಾರ ಇದೆ.

Bhuvneshwar Kumar Set to Return for RCB s Clash Against CSK Rasik Salamdar s Spot in Jeopardy

ಮೊದಲ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದ ಭುವನೇಶ್ವರ್‌ ಕುಮಾರ್ ತಮ್ಮ ಸ್ವಿಂಗ್ ಜಾದೂ ತೋರಿಸಲು ಸಜ್ಜಾಗಿದ್ದಾರೆ. ಇವರನ್ನು ಆರ್‌ಸಿಬಿ ಮೆಗಾ ಹರಾಜಿನಲ್ಲಿ ಜಿದ್ದಿಗೆ ಬಿದ್ದು ತಂಡಕ್ಕೆ ಸೇರಿಸಿಕೊಂಡಿದೆ. ಇವರು ಬೌಲ್‌ ಸ್ವಿಂಗ್ ಮಾಡುವ ಕ್ಷಮತೆಯನ್ನು ಹೊಂದಿದ್ದಾರೆ. ಭುವಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಕಣಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಅಲ್ಲದೆ ಪ್ರಸಕ್ತ ಸಾಲಿನ ತಮ್ಮ ಅಭಿಯಾನವನ್ನು ಭುವನೇಶ್ವರ್ ಚೆನ್ನೈನಲ್ಲಿ ಆರಂಭಿಸಲಿದ್ದಾರೆ. ಈಗಾಗಲೇ ಭುವನೇಶ್ವರ್ ಕುಮಾರ್‌ ಚೆನ್ನೈ ವಿರುದ್ಧ ಈ ಹಿಂದೆ ಉತ್ತಮ ದಾಖಲೆ ಹೊಂದಿದ್ದಾರೆ. ಇವರು ಸಿಎಸ್‌ಕೆ ವಿರುದ್ಧ 13 ವಿಕೆಟ್ ಪಡೆದು ಬೀಗಿದ್ದಾರೆ.

Story first published: Wednesday, March 26, 2025, 9:06 [IST]
Other articles published on Mar 26, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+