ಐಪಿಎಲ್ ಹರಾಜಿಗೂ ಮುನ್ನವೇ ಈ ತಂಡದ ನಾಯಕರಾದ ಭುವನೇಶ್ವರ್ ಕುಮಾರ್
ಈ ತಿಂಗಳು 24 ಹಗೂ 25 ರಂದು ಐಪಿಎಲ್ ಮೆಗಾ ಹರಾಜು ನಡೆಯಲಿದೆ. ಈ ಮೆಗಾ ಹರಾಜಿನಲ್ಲಿ ಅನೇಕ ಸ್ಟಾರ್ ಆಟಗಾರರು ಭಾಗವಹಿಸುತ್ತಿದ್ದಾರೆ. ಈ ವೇಳೆ ಸನ್‌ರೈಸರ್ಸ್ ಹೈದರಾಬಾದ್ ತಂಡ ಕೈ ಬಿಟ್ಟ ಸ್ಟಾರ್ ವೇಗಿ ಭುವನೇಶ್ವರ್ ಕುಮಾರ್ ಸಹ ಮೆಗಾ ಹರಾಜಿನಲ್ಲಿ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ. ಇವರು ಪವರ್ ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ಬಿಗುವಿನ ಬೌಲಿಂಗ್ ದಾಳಿ ಸಂಘಟಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದು, ಇವರಿಗೆ ಮಾಲೀಕರು ಹಣವನ್ನು ಹೂಡಬಹುದು. ಈ ಮಧ್ಯೆ ಇವರು ಈ ಒಂದು ತಂಡಕ್ಕೆ ನಾಯಕರಾಗಿ ನೇಮಕರಾಗಿದ್ದಾರೆ.
ಇನ್ನೇನು ಕೆಲವೇ ದಿನಗಳಲ್ಲಿ ಸೈಯದ್ ಮುಷ್ತಾಕ್ ಅಲಿ ಟಿ-20 ಕ್ರಿಕೆಟ್ ಟೂರ್ನಿ ಆರಂಭವಾಗಲಿದೆ. ಈ ಟೂರ್ನಿಗೆ ಈಗ ಎಲ್ಲ ತಂಡಗಳು ಒಂದೊಂದಾಗಿ ತಂಡವನ್ನು ಪ್ರಕಟಿಸುತ್ತಿದ್ದಾವೆ. ಇದೇ ಸಾಲಿಗೆ ಈಗ ಉತ್ತರ ಪ್ರದೇಶ ತಂಡ ಸೇರಿಕೊಂಡಿದೆ. ಉತ್ತರ ಪ್ರದೇಶ ತನ್ನ ತಂಡವನ್ನು ಪ್ರಕಟಿಸಿದೆ, ಇದರಲ್ಲಿ ಭುವನೇಶ್ವರ್ ಕುಮಾರ್, ರಿಂಕು ಸಿಂಗ್, ನಿತೀಶ್ ರಾಣಾ ಮತ್ತು ಯಶ್ ದಯಾಲ್ ಕೂಡ ಸೇರಿದ್ದಾರೆ. ಅನುಭವಿಗಳ ತಂಡವನ್ನು ಭುವನೇಶ್ವರ್ ಕುಮಾರ್ ಮುನ್ನಡೆಸಲಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ತಂಡದಲ್ಲಿ ಸ್ಥಾನ ಪಡೆದಿರುವ ಧ್ರುವ್ ಜುರೇಲ್ ಈ ಬಾರಿ ತಂಡದ ಭಾಗವಾಗಿಲ್ಲ.

ಭುವಿಗೆ ಪಟ್ಟ
ಭುವಿ ಯುಪಿ ಟಿ 20 ಲೀಗ್‌ನಲ್ಲಿ ಕೊನೆಯ ಬಾರಿಗೆ ಆಡಿದ್ದು, ಈ ಟೂರ್ನಿಯಲ್ಲಿ ಅವರು 11 ಪಂದ್ಯಗಳಲ್ಲಿ ಕೇವಲ 7 ವಿಕೆಟ್ ಪಡೆದಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2023 ರಲ್ಲಿ, ಉತ್ತರ ಪ್ರದೇಶವು ಕ್ವಾರ್ಟರ್‌ಫೈನಲ್ ನಲ್ಲಿ ನಿರಾಸೆ ಅನುಭವಿಸಿತ್ತು.
ಸನ್‌ರೈಸರ್ಸ್ ತಂಡ ತನ್ನ ಅನುಭವಿ ಆಟಗಾರ ಭುವನೇಶ್ವರ್ ಕುಮಾರ್ ಅವರನ್ನು ಈ ಬಾರಿ ಮೆಗಾ ಹರಾಜಿಗೆ ರಿಲೀಸ್ ಮಡಿದೆ. ಸನ್ ಪರ ಭುವಿ 10 ವರ್ಷದಿಂದ ಆಡುತ್ತಿದ್ದರು. ಎಸ್‌ಆರ್‌ಎಚ್ ಪ್ಯಾಟ್ ಕಮಿನ್ಸ್, ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ನಿತೀಶ್ ಕುಮಾರ್ ರೆಡ್ಡಿ ಮತ್ತು ಹೆನ್ರಿಚ್ ಕ್ಲಾಸೆನ್ ಅವರನ್ನು ಉಳಿಸಿಕೊಂಡಿದೆ.

ಎಸ್‌ಆರ್‌ಎಚ್ ಪರ ಭುವನೇಶ್ವರ್ ಕುಮಾರ್ 176 ಐಪಿಎಲ್ ಪಂದ್ಯಗಳಲ್ಲಿ 181 ವಿಕೆಟ್ ಪಡೆದಿದ್ದಾರೆ. ಇವರನ್ನು ಕೊಳ್ಳಲು ಮಾಲೀಕರು ಹಣದ ಹೊಳೆಯನ್ನು ಹರಿಸಲಿದ್ದಾರೆ. ಇವರ ತಮ್ಮ ಶಿಸ್ತು ಬದ್ಧ ದಾಳಿಯಿಂದಲೇ ಹೆಸರುವಾಸಿ.
ಯುಪಿ ತಂಡ: ಭುವನೇಶ್ವರ್ ಕುಮಾರ್ (ನಾಯಕ), ಮಾಧವ್ ಕೌಶಿಕ್ (ಉಪನಾಯಕ), ಕರಣ್ ಶರ್ಮಾ, ರಿಂಕು ಸಿಂಗ್, ನಿತೀಶ್ ರಾಣಾ, ಸಮೀರ್ ರಿಜ್ವಿ, ಸ್ವಸ್ತಿಕ್ ಚಿಕಾರಾ, ಪ್ರಿಯಮ್ ಗಾರ್ಗ್, ಆರ್ಯನ್ ಜುಯಲ್, ಆದಿತ್ಯ ಶರ್ಮಾ, ಪಿಯೂಷ್ ಚಾವ್ಲಾ, ವಿಪ್ರರಾಜ್ ಚಾವ್ಲಾ ನಿಗಮ್, ಕಾರ್ತಿಕೇಯ ಜೈಸ್ವಾಲ್, ಶಿವಂ ಶರ್ಮಾ, ಯಶ್ ದಯಾಳ್, ಮೊಹ್ಸಿನ್ ಖಾನ್, ಆಕಿಬ್ ಖಾನ್, ಶಿವಂ. ಮಾವಿ, ವಿನೀತ್ ಪನ್ವಾರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications