200ನೇ ಪಂದ್ಯಕ್ಕೆ ಸಜ್ಜಾಗಿರುವ ಭುವನೇಶ್ವರ್ ಕುಮಾರ್
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 19ನೇ ಆವೃತ್ತಿಯ 50ನೇ ಪಂದ್ಯ ಲಕ್ನೋದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಆತಿಥೇಯ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಎಲ್ಲರ ಕಣ್ಣುಗಳು ಆರ್‌ಸಿಬಿ ತಂಡದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಅವರ ಮೇಲೆ ನೆಟ್ಟಿರಲಿವೆ. ತವರಿನ ಅಂಗಳದಲ್ಲಿ ಭುವನೇಶ್ವರ್ ಕುಮಾರ್ ಸ್ಮರಣೀಯ ಐಪಿಎಲ್ ಪಂದ್ಯವನ್ನು ಆಡಲು ಸಜ್ಜಾಗಿದ್ದಾರೆ.
ಐಪಿಎಲ್ 2026ರಲ್ಲಿ ಭುವನೇಶ್ವರ್ ಕುಮಾರ್ ತಮ್ಮ ಸ್ವಿಂಗ್ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟರ್‌ಗಳಿಗೆ ಕಾಟ ನೀಡಿದ ಬೌಲರ್. ಇವರ ಸ್ವಿಂಗ್ ಬೌಲಿಂಗ್ ಎದುರಿಸುವಲ್ಲಿ ಸ್ಟಾರ್ ಬ್ಯಾಟರ್‌ಗಳು ಕಂಗಾಲಾಗುತ್ತಾರೆ. ಇವರ ಪವರ್ ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ವಿಕೆಟ್ ಬೇಟೆ ನಡೆಸುವಲ್ಲಿ ಹೆಸರುವಾಸಿ. ಭುವಿ ಬರೀ ವಿಕೆಟ್ ಬೇಟೆ ನಡೆಸುವುದು ಅಷ್ಟೇ ಅಲ್ಲ ಒಳ್ಳೆಯ ಎಕಾನಮಿಯನ್ನು ಸಹ ಹೊಂದಿದ್ದಾರೆ. ಹೀಗಾಗಿ ಇವರನ್ನು ಐಪಿಎಲ್ ಬೆಸ್ಟ್ ವೇಗದ ಬೌಲರ್‌ಗಳಲ್ಲಿ ಒಬ್ಬರು ಎಂದು ಗುರುತಿಸಲಾಗುತ್ತಿದೆ.

ಭುವನೇಶ್ವರ್ ಕುಮಾರ್ ಲಕ್ನೋ ವಿರುದ್ಧದ ಪಂದ್ಯದಲ್ಲಿ ಅಂಗಳಕ್ಕೆ ಇಳಿಯುತ್ತಲೇ ದೊಡ್ಡ ದಾಖಲೆಯನ್ನು ಬರೆಯಲಿದ್ದಾರೆ. ಈ ಮೂಲಕ ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ವೇಗದ ಬೌಲರ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಳ್ಳಲಿದ್ದಾರೆ. ಏಕಾನಾ ಮೈದಾನದಲ್ಲಿ ಭುವಿ ತಮ್ಮ ಐಪಿಎಲ್ ವೃತ್ತಿ ಜೀವನದ 200ನೇ ಪಂದ್ಯವನ್ನು ಆಡಲಿದ್ದಾರೆ. ಸ್ವಿಂಗ್ ಬೌಲಿಂಗ್‌ಗೆ ಹೆಸರುವಾಸಿಯಾಗಿರುವ ಭುವಿ, ಕಳೆದ ಎರಡು ಆವೃತ್ತಿಗಳಲ್ಲಿ ಆರ್‌ಸಿಬಿ ತಂಡದ ಬೌಲಿಂಗ್ ನೊಗವನ್ನು ಮುನ್ನಡೆಸುತ್ತಿದ್ದಾರೆ.
ಸ್ಮರಣೀಯ ಪಂದ್ಯ
ಐಪಿಎಲ್‌ನಲ್ಲಿ ವೇಗದ ಬೌಲರ್ ಆಗಿ 200 ಪಂದ್ಯಗಳನ್ನು ಆಡಿದ ಹೆಗ್ಗಳಿಕೆ ಭುವನೇಶ್ವರ್ ಅವರದ್ದಾಗಲಿದೆ. ಇದಕ್ಕೂ ಮೊದಲು ರವೀಂದ್ರ ಜಡೇಜಾ, ಆರ್.ಅಶ್ವಿನ್ ಬೌಲರ್ ಆಗಿ ಐಪಿಎಲ್‌ನಲ್ಲಿ 200ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ ಹಿರಿಮೆ ಹೊಂದಿದ್ದಾರೆ. ಆದರೆ ಇವರಿಬ್ಬರೂ ಸ್ಪಿನ್ ಬೌಲರ್ ಆಗಿ ಆಡಿದ್ದಾರೆ.

ವಿರಾಟ್ ಕೊಹ್ಲಿ ಅವರ ಭುವನೇಶ್ವರ್ ಕುಮಾರ್ ಅವರ ವಿಶೇಷ ದಿನದಂದು ಅಭಿನಂದಿಸಿದ್ದಾರೆ. ಅಲ್ಲದೆ ಇವರನ್ನು ಐಪಿಎಲ್‌ನ ಸಾರ್ವಕಾಲಿಕ ಬೆಸ್ಟ್ ಮೂರು ವೇಗದ ಬೌಲರ್‌ಗಳಲ್ಲಿ ಒಬ್ಬರು ಎಂದಿದ್ದಾರೆ.
ಐಪಿಎಲ್‌ನಲ್ಲಿ ಭುವಿ ಸಾಧನೆ
ಭುವನೇಶ್ವರ್ ಕುಮಾರ್ ಐಪಿಎಲ್‌ನಲ್ಲಿ ಮೂರು ತಂಡಗಳ ಪರ ಆಡಿರುವ ಅನುಭವ ಹೊಂದಿದ್ದಾರೆ. ಈ ವೇಳೆ ಇವರು ಆಡಿದ 199 ಪಂದ್ಯಗಳಲ್ಲಿ 215 ವಿಕೆಟ್ ಪಡೆದಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಭುವನೇಶ್ವರ್ ಕುಮಾರ್ ಅಮೋಘ ಪ್ರದರ್ಶನ ನೀಡಿದ್ದು 17 ವಿಕೆಟ್ ಪಡೆದಿದ್ದಾರೆ. ಅಲ್ಲದೆ ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.
ಐಪಿಎಲ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರರ ಪಟ್ಟಿ
| ಕ್ರಮ ಸಂಖ್ಯೆ | ಆಟಗಾರ | ಪಂದ್ಯಗಳು | ಅವಧಿ |
|---|---|---|---|
| 1 | ಮಹೇಂದ್ರ ಸಿಂಗ್ ಧೋನಿ | 278 | 2008–2026 |
| 2 | ರೋಹಿತ್ ಶರ್ಮಾ | 277 | 2008–2026 |
| 3 | ವಿರಾಟ್ ಕೊಹ್ಲಿ | 276 | 2008–2026 |
| 4 | ರವೀಂದ್ರ ಜಡೇಜಾ | 264 | 2008–2026 |
| 5 | ದಿನೇಶ್ ಕಾರ್ತಿಕ್ | 257 | 2008–2024 |
| 6 | ಶಿಖರ್ ಧವನ್ | 222 | 2008–2024 |
| 7 | ರವೀಂದ್ರನ್ ಅಶ್ವಿನ್ | 221 | 2009–2025 |
| 8 | ಅಜಿಂಕ್ಯ ರಹಾನೆ | 207 | 2008–2026 |
| 9 | ಸುರೇಶ್ ರೈನಾ | 205 | 2008–2021 |
| 10 | ರಾಬಿನ್ ಉತ್ತಪ್ಪ | 205 | 2008–2022 |
| 11 | ಅಂಬಟಿ ರಾಯುಡು | 204 | 2010–2023 |
| 12 | ಭುವನೇಶ್ವರ್ ಕುಮಾರ್ | 200 | 2011–2026 |
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications