Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಈ ವರ್ಷದ ಅಂತ್ಯಕ್ಕೆ 10ನೇ ಆವೃತ್ತಿಯ ಬಿಗ್‌ ಬ್ಯಾಷ್ ಲೀಗ್ ಆರಂಭ

Big Bash League 10 to start in Australia in this year

ಸಿಡ್ನಿ, ಜುಲೈ 15: 10ನೇ ಆವೃತ್ತಿಯ ಬಿಗ್‌ ಬ್ಯಾಷ್ ಲೀಗ್ ಟಿ20 ಟೂರ್ನಿ ಈ ವರ್ಷದ ಅಂತ್ಯಕ್ಕೆ ಆರಂಭಗೊಳ್ಳಲಿದೆ. 61 ಪಂದ್ಯಗಳನ್ನೊಳಗೊಂಡಿರುವ ಬಿಬಿಎಲ್ ಟೂರ್ನಿಯನ್ನು ವರ್ಷದ ಅಂತ್ಯಕ್ಕೆ ಆರಂಭಿಸಲಾಗುತ್ತದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಬುಧವಾರ ತಿಳಿಸಿದೆ.

ಕ್ರಿಕೆಟ್ ಆಸ್ಟ್ರೇಲಿಯಾದ ಪ್ರಕಟಣೆಯ ಪ್ರಕಾರ, ವರ್ಷದ ಬಿಬಿಎಲ್ ಟೂರ್ನಿ ಡಿಸೆಂಬರ್ 3ರಿಂದ ಆರಂಭಗೊಳ್ಳಲಿದೆ. ಉದ್ಘಾಟನಾ ಪಂದ್ಯದಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ಮತ್ತು ಮೆಲ್ಬರ್ನ್ ರೆನೆಗೇಡ್ಸ್ ತಂಡಗಳು ಕಾದಾಡಲಿವೆ. ಅಡಿಲೇಡ್ ಓವಲ್‌ನಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ.

ಬಿಬಿಎಲ್ ಫೈನಲ್ ಪಂದ್ಯ 2021ರ ಫೆಬ್ರವರಿ 6ರಂದು ನಡೆಯಲಿದೆ. ವಿಮೆನ್ಸ್ ಬಿಗ್‌ ಬ್ಯಾಷ್‌ ಲೀಗ್‌ನ ವೇಳಾಪಟ್ಟಿಯೂ ಪ್ರಕಟಗೊಂಡಿದೆ. ಡಬ್ಲ್ಯೂಬಿಬಿಎಲ್ ಒಟ್ಟಿಗೆ 59 ಪಂದ್ಯಗಳನ್ನು ಒಳಗೊಂಡಿರಲಿದ್ದು, ಅಕ್ಟೋವರ್ 17ರಿಂದ ನವೆಂಬರ್ 29ರ ವರೆಗೆ ನಡೆಯಲಿದೆ.

'ಕೊರೊನಾವೈರಸ್ ಪಿಡುಗಿನ ಕಾರಣ ಪಂದ್ಯಗಳಲ್ಲಿ ಬದಲಾವಣೆಯಾಗಬಹುದು. ಆದರೆ ಸಂಪೂರ್ಣ 61 ಪಂದ್ಯಗಳ ವೇಳಾಪಟ್ಟಿಯನ್ನು ಘೋಷಿಸುವ ಮೂಲಕ ನಾವು ಟೂರ್ನಿಯನ್ನು ಖಾತರಿಪಡಿಸುತ್ತಿದ್ದೇವೆ. ಇದರಲ್ಲಿ ಐದು ತಂಡಗಳ ಫೈನಲ್ ಮಾದರಿಯೂ ಸೇರಿರಲಿದೆ,' ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ.

Story first published: Wednesday, July 15, 2020, 14:52 [IST]
Other articles published on Jul 15, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+