Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಿಡ್ನಿ ಸಿಕ್ಸರ್ಸ್ ಮುಡಿಗೆ ಮತ್ತೆ ಬಿಗ್‌ ಬ್ಯಾಷ್ ಲೀಗ್ ಚಾಂಪಿಯನ್ಸ್ ಕಿರೀಟ

Big Bash League 2020-21 Final: Sydney Sixers beat Perth Scorchers by 27 runs

ಸಿಡ್ನಿ: ಬಿಗ್‌ ಬ್ಯಾಷ್ ಲೀಗ್ (ಬಿಬಿಎಲ್‌)ನಲ್ಲಿ ಮತ್ತೆ ಸಿಡ್ನಿ ಸಿಕ್ಸರ್ ತಂಡ ಚಾಂಪಿಯನ್ಸ್ ಆಗಿ ಹೊರ ಹೊಮ್ಮಿದೆ. ಶನಿವಾರ (ಫೆಬ್ರವರಿ 6) ನಡೆದ ಬಿಬಿಎಲ್ ಫೈನಲ್ ಪಂದ್ಯದಲ್ಲಿ ಸಿಡ್ನಿ ಸಿಕ್ಸರ್ಸ್ ತಂಡ ಪರ್ತ್ ಸ್ಕಾರ್ಚರ್ಸ್ ವಿರುದ್ಧ 27 ರನ್‌ಗಳ ರೋಚಕ ಜಯ ಗಳಿಸಿದೆ. ಸಿಡ್ನಿ ಸಿಕ್ಸರ್ಸ್ ಇದು ಎರಡನೇ ಬಾರಿಗೆ ಟ್ರೋಫಿ ತನ್ನದಾಗಿಸಿಕೊಂಡಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಸಿಡ್ನಿ ಸಿಕ್ಸರ್ಸ್‌ನಿಂದ ಜೋಶ್ ಫಿಲಿಪ್ 9, ಜೇಮ್ಸ್ ವಿನ್ಸ್ 95 (60 ಎಸೆತ), ಡೇನಿಯಲ್ ಹ್ಯೂಜ್ಸ್ 13, ಮೋಯ್ಸಸ್ ಹೆನ್ರಿಕ್ಸ್ 18, ಜೋರ್ಡನ್ ಸಿಲ್ಕ್ 17, ಡೇನಿಯಲ್ ಕ್ರಿಸ್ಚಿಯನ್ 20, ಕಾರ್ಲೋಸ್ ಬ್ರಾತ್‌ವೇಟ್ 10 ರನ್‌ನೊಂದಿಗೆ 20 ಓವರ್‌ಗೆ 6 ವಿಕೆಟ್ ಕಳೆದು 188 ರನ್ ಗಳಿಸಿತ್ತು.

ಗುರಿ ಬೆನ್ನಟ್ಟಿದ ಪರ್ತ್ ಸ್ಕಾರ್ಚರ್ಸ್, ಕ್ಯಾಮರಾನ್ ಬ್ಯಾನ್‌ಕ್ರಾಫ್ಟ್‌ 30, ಲಿಯಾಮ್ ಲಿವಿಂಗ್‌ಸ್ಟೋನ್ 20, ಜೋಶ್ ಇಂಗ್ಲಿಷ್ 22, ಮಿಚೆಲ್ ಮಾರ್ಷ್ 11, ಆ್ಯಷ್ಟನ್ ಟರ್ನರ್ 11, ಆ್ಯರನ್ ಹಾರ್ಡಿ 26 ರನ್‌ನೊಂದಿಗೆ 20 ಓವರ್‌ಗೆ 9 ವಿಕೆಟ್ ಕಳೆದು 161 ರನ್ ಗಳಿಸಿ ತಲೆ ಬಾಗಿತು.

ಸಿಡ್ನಿ ಇನ್ನಿಂಗ್ಸ್‌ನಲ್ಲಿ ಪರ್ತ್‌ನ ಜಾಯೆ ರಿಚರ್ಡ್ಸ್‌ಸನ್ 2, ಆ್ಯಂಡ್ರ್ಯೂ ಟೈ 2, ಫವಾದ್ ಅಹ್ಮದ್ 1 ವಿಕೆಟ್ ಪಡೆದರೆ, ಪರ್ತ್‌ ಇನ್ನಿಂಗ್ಸ್‌ನಲ್ಲಿ ಸಿಡ್ನಿಯ ಜ್ಯಾಕ್ಸನ್ ಬರ್ಡ್ 2, ಬೆನ್ ದ್ವಾರ್ಶುಯಿಸ್ 3, ಸೀನ್ ಅಬಾಟ್ 2, ಡೇನಿಯಲ್ ಕ್ರಿಸ್ಚಿಯನ್ 2 ವಿಕೆಟ್‌ನೊಂದಿಗೆ ಪಾರಮ್ಯ ಎರೆದರು. ಜೇಮ್ಸ್ ವಿನ್ಸ್ ಪಂದ್ಯಶ್ರೇಷ್ಠರೆನಿಸಿದರೆ, ಜೋಶ್ ಫಿಲಿಪ್ ಸರಣಿ ಶ್ರೇಷ್ಠರೆನಿಸಿದರು.

Story first published: Saturday, February 6, 2021, 18:23 [IST]
Other articles published on Feb 6, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+