ಬಿಬಿಎಲ್: ಬ್ರಿಸ್ಬೇನ್ ಹೀಟ್ ಕೋಚ್ ಸ್ಥಾನ ತೊರೆದ ಡೇನಿಯಲ್ ವೆಟೋರಿ

ಸಿಡ್ನಿ, ಫೆಬ್ರವರಿ 9: ಆಸ್ಟ್ರೇಲಿಯಾದ ಟಿ20 ಟೂರ್ನಿ ಬಿಗ್ ಬ್ಯಾಷ್ ಲೀಗ್‌ನ ತಂಡ, ಬ್ರಿಸ್ಬೇನ್ ಹೀಟ್‌ನ ಕೋಚ್ ಸ್ಥಾನದಿಂದ ನ್ಯೂಜಿಲ್ಯಾಂಡ್ ಮಾಜಿ ನಾಯಕ ಡೇನಿಯಲ್ ವೆಟೋರಿ ಕೆಳಗಿಳಿದಿದ್ದಾರೆ. ಶನಿವಾರ (ಫೆಬ್ರವರಿ 9) ವೆಟೋರಿ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಬಿಗ್ ಬ್ಯಾಷ್ ಲೀಗ್ 2018-19ರ ಸೀಸನ್ ಆರಂಭಕ್ಕೂ ಮುನ್ನ 40ರ ಹರೆಯದ ಡೇನಿಯಲ್ ತಾನು ಬ್ರಿಸ್ಬೇನ್ ಹೀಟ್ ಕೋಚ್ ಸ್ಥಾನ ತೊರೆಯುವ ಸುಳಿವು ನೀಡಿದ್ದರು. ಇಲ್ಲಿಗೆ ಬಿಗ್ ಬ್ಯಾಷ್ ಲೀಗ್‌ನಿಂದ ನ್ಯೂಜಿಲ್ಯಾಂಡ್ ಇಬ್ಬರು ಆಟಗಾರರು ದೂರ ಸರಿದಂತಾಗಿದೆ. ಇದಕ್ಕೂ ಮುನ್ನ ನ್ಯೂಜಿಲ್ಯಾಂಡ್ ನ ಬ್ರೆಂಡನ್ ಮೆಕಲಮ್ ಬಿಬಿಎಲ್‌ನಿಂದ ನಿವೃತ್ತಿ ಘೋಷಿಸಿದ್ದರು.
ವೆಟೋರಿ ಸೇವೆಯನ್ನು ನೆನೆದು ಧನ್ಯವಾದ ಅರ್ಪಿಸಿರುವ ಬ್ರಿಸ್ಬೇನ್ ಹೀಟ್‌ನ ಜನರಲ್ ಮ್ಯಾನೇಜರ್ ಆ್ಯಂಡ್ರ್ಯೂ ಮೆಕ್‌ಶಿಯಾ, 'ತಂಡದ ಮಟ್ಟಿಗೆ ಇದು ಯುಗವೊಂದು ಕೊನೆಯಾದಂತೆ ಅನ್ನಿಸಿದೆ' ಎಂದು ಅಭಿಪ್ರಾಯಿಸಿದ್ದಾರೆ.
Story first published: Saturday, February 9, 2019, 19:17 [IST]
Other articles published on Feb 9, 2019
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications