Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮುಂಬೈ ಇಂಡಿಯನ್ಸ್ ತಂಡಕ್ಕೆ ಆಘಾತ: ಬುಮ್ರಾ ಐಪಿಎಲ್‌ನಲ್ಲಿ ಆಡೋದೆ ಅನುಮಾನ, ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೂ ಅಲಭ್ಯ?

Big Blow For MI And Team India: Jasprit Bumrah Is Likely To Be Ruled Out Of The IPL And WTC Final

ಭಾರತ ತಂಡ ಮತ್ತು ಮುಂಬೈ ಇಂಡಿಯನ್ಸ್ ತಂಡಕ್ಕೆ ಆಘಾತಕಾರಿ ಸುದ್ದಿ ಸಿಕ್ಕಿದೆ. ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಫಿಟ್ ಆಗಲು ಇನ್ನೂ ಹೆಚ್ಚಿನ ಸಮಯ ಬೇಕಿದ್ದು, ಈ ಬಾರಿ ಐಪಿಎಲ್‌ನಲ್ಲಿ ಆಡುವುದೇ ಅನುಮಾನ ಎಂದು ಹೇಳಲಾಗಿದೆ.

ಮೂಲಗಳ ಪ್ರಕಾರ ಜೂನ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ವೇಳೆಗೂ ಬುಮ್ರಾ ಫಿಟ್ ಆಗುವುದು ಅನುಮಾನ ಎನ್ನಲಾಗಿದೆ. ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ಬುಮ್ರಾ ಫಿಟ್ ಆಗದ ಕಾರಣ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಮತ್ತು ಏಕದಿನ ಸರಣಿಯಿಂದ ಹೊರಗುಳಿದಿದ್ದರು.

2022ರ ಸೆಪ್ಟಂಬರ್ ತಿಂಗಳಿನಲ್ಲಿ ಬುಮ್ರಾ ಭಾರತದ ಪರವಾಗಿ ಕೊನೆಯ ಟಿ20 ಪಂದ್ಯವನ್ನು ಆಡಿದ್ದರು. ಅದಾದ ಬಳಿಕ ಬೆನ್ನು ಮೂಳೆ ಒತ್ತಡ ಕಾಣಿಸಿಕೊಂಡಿದ್ದರಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದಿದ್ದರು.

ಅಂದಿನಿಂದಲೂ ವಿಶ್ರಾಂತಿ ಪಡೆದ ಬುಮ್ರಾ 2023ರ ಜನವರಿಯಿಂದ ಭಾರತ ತಂಡಕ್ಕೆ ಮರಳಲು ಶತಪ್ರಯತ್ನ ಮಾಡುತ್ತಿದ್ದಾರೆ. ಎನ್‌ಸಿಎನಲ್ಲಿ ಸಾಕಷ್ಟು ಬೆವರು ಹರಿಸಿದ ನಂತರ ಅವರನ್ನು ಶ್ರೀಲಂಕಾ ವಿರುದ್ಧದ ಸರಣಿಗೆ ಆಯ್ಕೆ ಮಾಡಿದ್ದರಾದರು, ವೈದ್ಯರ ಸಲಹೆ ಮೇರೆಗೆ ಮತ್ತೆ ತಂಡದಿಂದ ಕೈಬಿಡಲಾಗಿತ್ತು.

ನಂತರ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಮತ್ತು ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಆಡುವ ನಿರೀಕ್ಷೆ ಇತ್ತಾದರೂ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಅವರನ್ನು ತಂಡಕ್ಕೆ ಆಯ್ಕೆ ಮಾಡಲಿಲ್ಲ.

Big Blow For MI And Team India: Jasprit Bumrah Is Likely To Be Ruled Out Of The IPL And WTC Final

ಐಪಿಎಲ್‌ನಿಂದಲೂ ಹೊರ ಬೀಳುವ ಸಾಧ್ಯತೆ

2023ರಲ್ಲಿ ಏಕದಿನ ವಿಶ್ವಕಪ್ ಇರುವ ಕಾರಣ ಬುಮ್ರಾ ಲಭ್ಯತೆ ಭಾರತಕ್ಕೆ ಪ್ರಮುಖವಾಗಲಿದೆ. ಬುಮ್ರಾ ವಿಚಾರದಲ್ಲಿ ಬಿಸಿಸಿಐ ಯಾವುದೇ ಅವಸರ ಮಾಡದೇ ಇರಲು ನಿರ್ಧರಿಸಿದೆ. ಅವರು ಐಪಿಎಲ್‌ನಲ್ಲಿ ಆಡುತ್ತಾರೆ ಎಂದು ಹೇಳಿತ್ತಾದರೂ, ಕೆಲಸದ ಒತ್ತಡ ನಿರ್ವಹಣೆ ಮಾಡಲು ತಿಳಿಸಿತ್ತು.

ಆದರೆ ಈಗ ಬಂದಿರುವ ಮಾಹಿತಿ ಪ್ರಕಾರ ಬುಮ್ರಾ ಐಪಿಎಲ್‌ನಿಂದ ಕೂಡ ದೂರವುಳಿಯಬೇಕಾಗಿದೆ. ಇದು ಮುಂಬೈ ಇಂಡಿಯನ್ಸ್ ತಂಡಕ್ಕೆ ಭಾರಿ ಹಿನ್ನಡೆಯಾಗಲಿದೆ. ಬುಮ್ರಾ ಚೇತರಿಸಿಕೊಳ್ಳಲು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.

ಕ್ರಿಕ್‌ಬುಜ್ ವರದಿ ಮಾಡಿರುವ ಪ್ರಕಾರ, ಬುಮ್ರಾ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಅವರು ಸಂಪೂರ್ಣವಾಗಿ ಗುಣಮುಖರಾಗಲು ದೀರ್ಘಕಾಲದ ವಿಶ್ರಾಂತಿಯ ಅಗತ್ಯವಿದೆ. ಬಿಸಿಸಿಐನ ಕೆಲವು ಮೂಲಗಳ ಪ್ರಕಾರ ಬುಮ್ರಾರನ್ನು ಸೆಪ್ಟೆಂಬರ್ ನಲ್ಲಿ ನಡೆಯಲಿರುವ ಏಷ್ಯಾಕಪ್‌ ವೇಳೆಗೆ ಭಾರತ ತಂಡಕ್ಕೆ ಕರೆತರುವ ಸಾಧ್ಯತೆ ಇದೆ ಎನ್ನಲಾಗಿದೆ.

Story first published: Monday, February 27, 2023, 2:30 [IST]
Other articles published on Feb 27, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+