Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಗೂ ಮುನ್ನ ಭಾರತಕ್ಕೆ ಪೆಟ್ಟು; ವೇಗದ ಬೌಲರ್‌ ಔಟ್‌

ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ಐದು ಪಂದ್ಯಗಳ ಟಿ20 ಸರಣಿಯನ್ನು 4-0ಯಿಂದ ಸೋತಿದೆ. ಈ ಸರಣಿ ಸೋಲಿನ ಕಹಿ ಮರೆತು ಪುಟಿದೇಳಲು ಟೀಮ್ ಇಂಡಿಯಾ ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದ್ದು, ಇಂಗ್ಲೆಂಡ್‌ ವಿರುದ್ಧ ಜುಲೈ 14 ರಿಂದ ಆರಂಭವಾಗಲಿರುವ ಏಕದಿನ ಸರಣಿಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಸರಣಿ ಆರಂಭವಾಗುವ ಮುನ್ನವೇ ಟೀಮ್ ಇಂಡಿಯಾಕ್ಕೆ ಪೆಟ್ಟು ಬಿದ್ದಿದೆ. ವೇಗದ ಬೌಲರ್‌ ಹರ್ಷಿತ್ ರಾಣಾ ಗಾಯದ ಸಮಸ್ಯೆಯಿಂದ ಏಕದಿನ ಸರಣಿಯಿಂದ ಹೊರ ನಡೆದಿದ್ದಾರೆ.

ಹರ್ಷಿತ್ ರಾಣಾ ಇಂಗ್ಲೆಂಡ್‌ ವಿರುದ್ಧದ ಟಿ20 ಸರಣಿಯ ವೇಳೆ ತಂಡದ ಭಾಗವಾಗಿದ್ದರು. ಆದರೆ ಇವರು ತಮ್ಮ ಸ್ಥಿರ ಪ್ರದರ್ಶನ ನೀಡದೆ ನಿರಾಸೆ ಅನುಭವಿಸಿದ್ದರು. ಇವರು ಮೂರನೇ ಟಿ20 ಪಂದ್ಯದ ವೇಳೆ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿಯೇ ಇವರು ಮುಂದಿನ ಎರಡೂ ಪಂದ್ಯಗಳಲ್ಲಿ ಕಣಕ್ಕೆ ಇಳಿಯಲು ಸಾಧ್ಯವಾಗಲಿಲ್ಲ. ಇನ್ನು ಸ್ಪಿನ್ ಬೌಲರ್‌ ವರುಣ್‌ ಚಕ್ರವರ್ತಿ ಸಹ ಗಾಯದಿಂದ ಬಳಲಿದ್ದು, ಕೊನೆಯ ಟಿ20 ಪಂದ್ಯದಿಂದ ಹೊರಗುಳಿದಿದ್ದರು.

Harshit Rana Out Of ENG ODIs

ಹರ್ಷಿತ್ ರಾಣಾ ಅವರಿಗೆ ಗಾಯ ಬಹುವಾಗಿ ಕಾಡುತ್ತಿದೆ. ಇವರು ಟಿ20 ವಿಶ್ವಕಪ್‌ನಿಂದಲೂ ಗಾಯದ ಕಾರಣದಿಂದಲೇ ಹೊರ ನಡೆದಿದ್ದರು. ಈಗ ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಯಿಂದಲೂ ಹೊರ ನಡೆದಿದ್ದಾರೆ. ಇವರ ಬದಲಿಗೆ ಬಿಸಿಸಿಐ ಯುವ ಬೌಲರ್‌ ಪ್ರಿನ್ಸ್‌ ಯಾದವ್ ಅವರಿಗೆ ಮಣೆ ಹಾಕಿದೆ. ಈಗಾಗಲೇ ಪ್ರಿನ್ಸ್‌ ಯಾದವ್ ಟಿ20 ಹಾಗೂ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ.

ಜಿಂಬಾಬ್ವೆ ಸರಣಿಯಿಂದಲೂ ಔಟ್‌

ಟೀಮ್ ಇಂಡಿಯಾ ಇನ್ನು ಮುಂದಿನ ಟಿ20 ಸರಣಿಯನ್ನು ಈ ವರ್ಷದ ಅಂತ್ಯದಲ್ಲಿ ಆಡಲಿದೆ. ಭಾರತ, ಜಿಂಬಾಬ್ವೆ ವಿರುದ್ಧ ಟಿ20 ಸರಣಿ ಆಡಲಿದೆ. ಈ ಸರಣಿಗೆ ಇತ್ತಿಚೆಗೆ ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಿತ್ತು. ಈ ತಂಡದಲ್ಲಿ ಸ್ಪಿನ್ ಬೌಲರ್‌ ವರುಣ್‌ ಚಕ್ರವರ್ತಿ ಸಹ ಸ್ಥಾನ ಪಡೆದಿದ್ದರು. ಆದರೆ ಇವರಿಗೆ ಗಾಯವಾಗಿದ್ದರಿಂದ ಇವರು ಜಿಂಬಾಬ್ವೆ ಪ್ರವಾಸವನ್ನು ಕೈಗೊಳ್ಳುತ್ತಿಲ್ಲ. ಹೀಗಾಗಿ ಇವರ ಬದಲಿಗೆ ರವಿ ಬಿಷ್ಣೋಯಿ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ.

Harshit Rana Out Of ENG ODIs

ಇಂಗ್ಲೆಂಡ್ ಪ್ರವಾಸದ ವೇಳೆ ಹರ್ಷಿತ್ ರಾಣಾ, ವರುಣ್‌ ಗಾಯಕ್ಕೆ ತುತ್ತಾಗಿದ್ದಾರೆ. ವೇಗಿ ಹರ್ಷಿತ್ ರಾಣಾ ಅವರ ಬಲಗಾಲಿನಲ್ಲಿ ಗ್ರೇಡ್ 1 ಮಂಡಿರಜ್ಜು ಗಾಯವಾಗಿದ್ದು, ಇವರು ಏಕದಿನ ಸರಣಿಯಿಂದ ಹೊರ ನಡೆದಿದ್ದಾರೆ. ಇನ್ನು ಸ್ಪಿನ್ ಬೌಲರ್‌ ವರುಣ್ ಚಕ್ರವರ್ತಿ ಎಡಗಾಲಿನಲ್ಲಿ ಗ್ರೇಡ್ 2 ಮಂಡಿರಜ್ಜು ಗಾಯವಾಗಿದೆ. ಈ ಇಬ್ಬರೂ ಆಟಗಾರರು ಪುನರ್ವಸತಿಗಾಗಿ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ಗೆ ಹೋಗಲಿದ್ದಾರೆ.

ಭಾರತ ಹಾಗೂ ಇಂಗ್ಲೆಂಡ್ ನಡುವಣ ಏಕದಿನ ಸರಣಿಯ ವೇಳಾಪಟ್ಟಿ

ಮೊದಲ ಏಕದಿನ ಪಂದ್ಯ, ಜು.14, ಬರ್ಮಿಂಗ್‌ಹ್ಯಾಮ್‌, ಮಧ್ಯಾಹ್ನ 3.30ಕ್ಕೆ
ಎರಡನೇ ಏಕದಿನ ಪಂದ್ಯ, ಜು.16, ಕಾರ್ಡಿಫ್‌, ಸಂಜೆ 5.30ಕ್ಕೆ
ಮೂರನೇ ಏಕದಿನ ಪಂದ್ಯ, ಜು.19, ಲಾರ್ಡ್ಸ್‌, ಮಧ್ಯಾಹ್ನ 3.30ಕ್ಕೆ

Story first published: Sunday, July 12, 2026, 18:15 [IST]
Other articles published on Jul 12, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+