For Quick Alerts
ALLOW NOTIFICATIONS  
For Daily Alerts
 

IPL 2025: ಮೆಗಾ ಹರಾಜಿಗೂ ಮುನ್ನ ಬಿಸಿಸಿಐನಿಂದ ದೊಡ್ಡ ಬದಲಾವಣೆ?

ಭಾರೀ ಕುತೂಹಲ ಮೂಡಿಸಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್)ನ ಮೆಗಾ ಹರಾಜು ಪ್ರಕ್ರಿಯೆಗೆ ಸಿದ್ಧತೆಗಳು ಭರದಿಂದ ಸಾಗಿವೆ. ಇದಕ್ಕೂ ಮೊದಲು ಐಪಿಎಲ್ ಫ್ರಾಂಚೈಸಿ ತಂಡಗಳು ಆಟಗಾರರನ್ನು ಉಳಿಸಿಕೊಳ್ಳುವ ನಿಯಮಗಳ ಬಗ್ಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತೆಗೆದುಕೊಳ್ಳುವ ನಿರ್ಧಾರದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ಈ ನಿಯಮಗಳ ಬಗ್ಗೆ ನಿರ್ಧಾರವನ್ನು ಬಿಸಿಸಿಐ ಶೀಘ್ರದಲ್ಲೇ ಪ್ರಕಟಿಸುವ ಸಾಧ್ಯತೆಯಿದೆ. ಇದೀಗ ಆಟಗಾರರನ್ನು ಉಳಿಸಿಕೊಳ್ಳುವ ನಿಯಮಗಳ ಬಗ್ಗೆ ಬಿಗ್ ಅಪ್ಡೇಟ್ ಹೊರ ಬಿದ್ದಿದೆ. ಬಿಸಿಸಿಐ ಮುಂಬರುವ ಐಪಿಎಲ್ ಹರಾಜಿನಲ್ಲಿ ಫ್ರಾಂಚೈಸಿಗಳಿಗೆ 5 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಇದು ನಡೆದರೆ ಮುಂಬೈ ಇಂಡಿಯನ್ಸ್ ತನ್ನ ಪ್ರಮುಖ ಆಟಗಾರರನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಲಿದೆ.

Big change from BCCI before ipl 2025 mega auction

ಇತ್ತೀಚೆಗೆ ಐಪಿಎಲ್‌ನ ಎಲ್ಲಾ ಹತ್ತು ಫ್ರಾಂಚೈಸಿ ತಂಡಗಳ ಮಾಲೀಕರೊಂದಿಗೆ ಬಿಸಿಸಿಐ ಸಭೆ ನಡೆಸಿದೆ. ಈ ಸಭೆಯಲ್ಲಿ ಪ್ರಮುಖವಾಗಿ ಮೆಗಾ ಹರಾಜಿಗೂ ಮುನ್ನ ಉಳಿಸಿಕೊಳ್ಳುವ ಆಟಗಾರರ ಸಂಖ್ಯೆಯನ್ನು 5 ಅಥವಾ 6ಕ್ಕೆ ಹೆಚ್ಚಿಸುವಂತೆ ಕೆಲವು ತಂಡದ ಮಾಲೀಕರು ಬಿಸಿಸಿಐ ಮುಂದೆ ತಮ್ಮ ಪ್ರಸ್ತಾಪವನ್ನು ಮತ್ತೊಮ್ಮೆ ಇಟ್ಟಿದ್ದಾರೆ. 5 ಆಟಗಾರರನ್ನು ಉಳಿಸಿಕೊಳ್ಳುವುದರಿಂದ ಫ್ರಾಂಚೈಸಿ ತನ್ನ ಬ್ರ್ಯಾಂಡ್ ಮೌಲ್ಯವನ್ನು ಕಾಪಾಡಿಕೊಳ್ಳಬಹುದು ಎಂಬುದನ್ನು ಗಮನಿಸಿರುವ ಬಿಸಿಸಿಐ ಅವರ ಮನವಿಯನ್ನು ಪರಿಗಣಿಸಿದ್ದು, ತನ್ನ ನಿರ್ಧಾರವನ್ನು ತಿಳಿಸಿಲ್ಲ.

ಮುಂಬೈಗೆ ಲಕ್?

5 ಆಟಗಾರರನ್ನು ಉಳಿಸಿಕೊಳ್ಳಲು ಬಿಸಿಸಿಐ ಅನುಮತಿ ನೀಡಿದರೆ ಮುಂಬೈ ಇಂಡಿಯನ್ಸ್ ತಂಡವು ತನ್ನ ಸ್ಟಾರ್ ಆಟಗಾರರನ್ನು ಸುಲಭವಾಗಿ ಉಳಿಸಿಕೊಳ್ಳಲಿದೆ. ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಅವರನ್ನು ಉಳಿಸಿಕೊಳ್ಳವ ಮೂಲಕ ಮುಂಬೈ ಉಳಿದ ತಂಡಗಳಿಗಿಂತ ಬಲಿಷ್ಠವಾಗಿ ಕಾಣಿಸಿಕೊಳ್ಳಬಹುದು. ಉಳಿದಂತೆ ಚೆನ್ನೈ ಸೂಪರ್ ಕಿಂಗ್ಸ್, ಕೋಲ್ಕತ್ತಾ ನೈಟ್ ರೈಡರ್ಸ್‌ ಮತ್ತು ಸನ್‌ ರೈಸರ್ಸ್ ಹೈದಾರಾಬಾದ್ ತಂಡಗಳಿಗೂ ಅನುಕೂಲವಾಗಲಿದೆ. ಇದೀಗ ಎಲ್ಲರ ಕಣ್ಣು ಮುಂಬೈ ಇಂಡಿಯನ್ಸ್ ಮೇಲೆ ಬಿದ್ದಿದೆ.

ಟೂರ್ನಿ ಪ್ರಾರಂಭದಿಂದಲೂ ಐಪಿಎಲ್ ಭಾಗವಾಗಿರುವ ಹೆಚ್ಚಿನ ಫ್ರಾಂಚೈಸಿಗಳು ನಾಲ್ಕು ಅಥವಾ ಐದು ವರ್ಷಗಳಿಗೊಮ್ಮೆ ಮೆಗಾ ಹರಾಜು ಪ್ರಕ್ರಿಯೆ ನಡೆಸಬೇಕೆಂದು ಬಿಸಿಸಿಐ ಮುಂದೆ ಪ್ರಸ್ತಾಪಿಸಿವೆ. ಅವರು ಹೂಡಿಕೆ ಮಾಡಿದ ಪ್ರಮುಖ ಆಟಗಾರರ ಕಳೆದುಕೊಳ್ಳಲು ಬಯಸದ ಕಾರಣ ಬಿಸಿಸಿಐ ಮೆಗಾ ಹರಾಜನ್ನು ಒಂದು ವರ್ಷ ಹೆಚ್ಚು ಹೆಚ್ಚಿಸಬೇಕೆಂದು ಐಪಿಎಲ್ ತಂಡಗಳ ಮಾಲೀಕರು ಹೇಳಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ 2018 ಮತ್ತು 2022 ರಲ್ಲಿ ಎರಡು ಮೆಗಾ ಹರಾಜು ಪ್ರಕ್ರಿಯೆಗಳು ನಡೆದಿವೆ.

Story first published: Wednesday, September 25, 2024, 22:34 [IST]
Other articles published on Sep 25, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+