ಈ ಬಾರಿ ಐಪಿಎಲ್ ಹರಾಜಿನಲ್ಲಿ ಹಲವು ಸ್ಟಾರ್ ಆಟಗಾರರನ್ನು ಕೊಳ್ಳಲು ಮಾಲೀಕರು ಹಿಂದೇಟು ಹಾಕಿದ್ದಾರೆ. ಭವಿಷ್ಯದ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಫ್ರಾಂಚೈಸಿಗಳು ಚಿತ್ತ ನೆಟ್ಟಿದ್ದರೆ, ಇನ್ನು ಹಲವು ಆಟಗಾರರಿಗೆ ಗಾಯದಿಂದ ಇನ್ನು ಚೇತರಿಸಿಕೊಂಡಿಲ್ಲ. ಹೀಗಾಗಿ ಮಾಲೀಕರು ಇವರಿಗೆ ಬಿಡ್ ಮಾಡಲಿಲ್ಲ. ವಿಶ್ವದ ಶ್ರೀಮಂತ ಲೀಗ್‌ಗಳಲ್ಲಿ ಒಂದಾಗಿರುವ ಐಪಿಎಲ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಆಟಗಾರರು ಸಹ ಈ ಬಾರಿ ಮಾಲೀಕರನ್ನು ಹುಡಿಕಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಈ ಪಟ್ಟಿಯಲ್ಲಿ ಹೆಚ್ಚಾಗಿ ವಿದೇಶಿ ಆಟಗಾರರು ಎದ್ದು ಕಾಣುತ್ತಾರೆ.
ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಡೇವಿಡ್ ವಾರ್ನರ್ ಅವರನ್ನು ಕೊಳ್ಳಲು ಯಾವುದೇ ಫ್ರಾಂಚೈಸಿ ಮನಸ್ಸು ಮಾಡಲಿಲ್ಲ. ಇದಕ್ಕೆ ಕಾರಣ ಇವರ ಮೂಲ ಬೆಲೆ ಹಾಗೂ ಇವರ ವಯಸ್ಸು. ಹೀಗಾಗಿ ಇವರನ್ನು ಕೊಳ್ಳಲು ಮಾಲೀಕರು ಹಿಂದೇಟು ಹಾಕಿದ್ದಾರೆ. ಅದರಂತೆ ಈ ಮೊದಲು ಐಪಿಎಲ್ ತಂಡವನ್ನು ಮುನ್ನಡೆಸಿದ್ದ ಕೇನ್ ವಿಲಿಯಮ್ಸನ್ ಮಯಾಂಕ್ ಅಗರ್‌ವಾಲ್ ಐಪಿಎಲ್ ಮೆಗಾ ಹರಾಜಿನಲ್ಲಿ ಸೇಲ್ ಆಗದೇ ಉಳಿದಿದ್ದಾರೆ. ಇನ್ನು ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ ಸಹ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಡೇವಿಡ್ ವಾರ್ನರ್ --2 ಕೋಟಿ ರೂ.
ಜಾನಿ ಬೇರ್ ಸ್ಟೋ --2 ಕೋಟಿ ರೂ.
ಕೇನ್ ವಿಲಿಯಮ್ಸನ್ --2 ಕೋಟಿ ರೂ.
ಡ್ಯಾರಿಲ್ ಮಿಚೆಲ್ --2 ಕೋಟಿ ರೂ.
ಶಾರ್ದೂಲ್ ಠಾಕೂರ್ --2 ಕೋಟಿ ರೂ.
ಮುಜೀಬ್ ಉರ್ ರಹಮಾನ್ --2 ಕೋಟಿ ರೂ.
ಆದಿಲ್ ರಶೀದ್ --2 ಕೋಟಿ ರೂ.
ಫಿನ್ ಅಲೆನ್ --2 ಕೋಟಿ ರೂ.
ಬೆನ್ ಡಕೆಟ್ --2 ಕೋಟಿ ರೂ.
ಮುಸ್ತಫಿಜುರ್ ರೆಹಮಾನ್ --2 ಕೋಟಿ ರೂ.
ನವೀನ್ ಉಲ್ ಹಕ್ --2 ಕೋಟಿ ರೂ.
ಉಮೇಶ್ ಯಾದವ್ --2 ಕೋಟಿ ರೂ.
ಸ್ಟೀವ್ ಸ್ಮಿತ್ --2 ಕೋಟಿ ರೂ.
ಗಸ್ ಅಟ್ಕಿನ್ಸನ್ --2 ಕೋಟಿ ರೂ.
ಅಲ್ಜಾರಿ ಜೋಸೆಫ್ --2 ಕೋಟಿ ರೂ.
ಆಡಮ್ ಮಿಲ್ನೆ --2 ಕೋಟಿ ರೂ.
ಕ್ರಿಸ್ ಜೋರ್ಡಾನ್ --2 ಕೋಟಿ ರೂ.
ಅಕೇಲ್ ಹೊಸೈನ್, --1.50 ಕೋಟಿ ರೂ.
ಟಾಮ್ ಲ್ಯಾಥಮ್ --1.50 ಕೋಟಿ ರೂ.
ಕೈಲ್ ಮೇಯರ್ಸ್ --1.50 ಕೋಟಿ ರೂ.
ಜೇಸನ್ ಬೆಹ್ರೆನ್ಡಾರ್ಫ್ --1.50 ಕೋಟಿ ರೂ.
ಮೈಕೆಲ್ ಬ್ರೇಸ್‌ವೆಲ್ --1.50 ಕೋಟಿ ರೂ.
ವಿಲಿಯಂ ಓ'ರೂರ್ಕ್ --1.50 ಕೋಟಿ ರೂ.
ಕೇಲ್ ಜೇಮಿನ್ಸನ್ --1.50 ಕೋಟಿ ರೂ.
ಶಾಯ್ ಹೋಪ್ --1.25 ಕೋಟಿ ರೂ.
ಸಿಕಂದರ್ ರಜಾ --1.25 ಕೋಟಿ ರೂ.
ಲ್ಯಾನ್ಸ್ ಮೋರಿಸ್ --1.25 ಕೋಟಿ ರೂ.
ಮಾಯಾಂಕ್ ಅಗರವಾಲ್ --1.00 ಕೋಟಿ ರೂ.
ಅಲೆಕ್ಸ್ ಕ್ಯಾರಿ --1.00 ಕೋಟಿ ರೂ.
ಲುಂಗಿ ಎನ್‌ಗಿಡಿ --1.00 ಕೋಟಿ ರೂ.
ನಾಥನ್ ಸ್ಮಿತ್ 1.00 ಕೋಟಿ ರೂ.