IPL 2025: ಆರ್‌ಸಿಬಿ ಕಂಟಕ ಜಸ್ಟ್ ಮಿಸ್: ಕೆಕೆಆರ್‌ಗೆ ತಲೆ ನೋವು
ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸ್ಥಿರ ಪ್ರದರ್ಶನ ನೀಡುತ್ತಿದ್ದು ಅಭಿಮಾನಿಗಳ ಮನ ಗೆದ್ದಿದೆ. ಈ ವೇಳೆ ಸ್ಟಾರ್ ಆಟಗಾರರು ತಂಡದ ಗೆಲುವಿನಲ್ಲಿ ಮಹತ್ವದ ಕಾಣಿಕೆ ನೀಡುತ್ತಿದ್ದು, ಭರವಸೆ ಮೂಡಿಸಿದ್ದಾರೆ. ಇದೇ ವೇಳೆ ಆರ್‌ಸಿಬಿ ದೊಡ್ಡ ಪೆಟ್ಟಿನಿಂದ ಕೊಂಚದರಲ್ಲಿ ಮಿಸ್ ಆಗಿದೆ. ಮೆಗಾ ಹರಾಜಿನಲ್ಲಿ ಮಾಡಲು ಹೊರಟ್ಟಿದ್ದ ತಪ್ಪು ನೆನಪಿಸುತ್ತದೆ. ಈ ವೇಳೆ ಆರ್‌ಸಿಬಿ ಹಲವು ಸ್ಟಾರ್ ಆಟಗಾರರಿಗೆ ಕೋಟಿ ಕೋಟಿ ಬಾಜಿ ಕಟ್ಟಲು ಮುಂದಾಗಿತ್ತು. ಇದೇ ವೇಳೆ ಈ ಪ್ಲೇಯರ್‌ಗೂ ಸಹ ದೊಡ್ಡ ಮೊತ್ತದ ಬಾಜಿ ಕಟ್ಟಿತ್ತು. ಆದರೆ ಕೊನೆಗೆ ಈ ಪ್ಲೇಯರ್ ಜಸ್ಟ್ ಮಿಸ್ ಆಗಿದ್ದಾರೆ.
ಐಪಿಎಲ್ ಮೆಗಾ ಹರಾಜಿನಲ್ಲಿ ಆಟಗಾರರಿಗೆ ಹಿಂದಿನ ವರ್ಷ ನೀಡಿದ ಪ್ರದರ್ಶನ ಹಾಗೂ ಹಾಲಿ ದೇಶೀಯ ಹಾಗೂ ರಾಷ್ಟ್ರೀಯ ತಂಡದ ಪರ ಹೇಗೆ ಪ್ರದರ್ಶನ ನೀಡಿದ್ದಾರೆ ಎಂಬುದರ ಮೇಲೆ ಮ್ಯಾನೇಜ್ಮೆಂಟ್ ಆಟಗಾರರಿಗೆ ಮಣೆ ಹಾಕುತ್ತದೆ. ಈ ವೇಳೆ ಆರ್‌ಸಿಬಿ ಸಹ ಆ ಒಬ್ಬ ಪ್ಲೇಯರ್ ಬೇಕೆ ಬೇಕು ಎಂದು ಹಣದ ಹೊಳೆಯನ್ನು ಹರಿಸಲು ಸಜ್ಜಾಗಿತ್ತು. ಆದರೆ 20 ಕೋಟಿ ರೂಪಾಯಿ ದಾಟುತ್ತಿದ್ದಂತೆ ಬಾಜಿ ಕಟ್ಟಲು ಹಿಂದೇಟು ಹಾಕಿತು. ಆಗ ಆರ್‌ಸಿಬಿ ಮ್ಯಾನೇಜ್ಮೆಂಟ್ ಬೇಸರ ಮಾಡಿಕೊಂಡಿತ್ತು. ಆದರೆ ಈಗ ಆ ಸ್ಟಾರ್ ಪ್ಲೇಯರ್ ನೀಡುತ್ತಿರುವ ಪ್ರದರ್ಶನ ಆರ್‌ಸಿಬಿ ಮ್ಯಾನೇಜ್ಮೆಂಟ್‌ಗೆ ಕೊಂಚ ರೀಲಿಫ್ ನೀಡಿರುತ್ತದೆ.

ಆಲ್‌ರೌಂಡರ್ ಕೋಟಾದಲ್ಲಿ ಇವರ ಹೆಸರನ್ನು ಸೇರಿಸಲಾಗಿತ್ತು. ಆ ಪ್ಲೇಯರ್ ಈ ಸೀಜನ್‌ನಲ್ಲಿ ಬೌಲಿಂಗ್ ಮಾಡುವುದು ಬಿಡಿ, ಬ್ಯಾಟಿಂಗ್ ಮಾಡುವಲ್ಲಿ ವಿಫಲರಾಗಿದ್ದಾರೆ. ಹಿಂದಿನ ಆವೃತ್ತಿಯಲ್ಲಿ ಕೆಕೆಆರ್ ಚಾಂಪಿಯನ್ ಪಟ್ಟವನ್ನು ಅಲಂಕರಿಸುವಲ್ಲಿ ದೊಡ್ಡ ಕೊಡುಗೆ ನೀಡಿದ್ದ ಸ್ಟಾರ್ ಪ್ಲೇಯರ್ ಈಗ ನಿರಾಸೆಯ ದೋಣಿಯ ನಾವಿಕರಾಗಿದ್ದಾರೆ. ಎಸ್ ಅವರೇ ಕೆಕೆಆರ್ ತಂಡದ ದುಬಾರಿ ಆಟಗಾರ ವೆಂಕಟೇಶ್ ಅಯ್ಯರ್.
ಅಯ್ಯರ್ ಸಾಧನೆ
ಐಪಿಎಲ್ ಹರಾಜಿನ ಅಂಗಳಕ್ಕೆ ವೆಂಕಟೇಶ್ ಅಯ್ಯರ್ 2 ಕೋಟಿ ಮೂಲ ಬೆಲೆಯೊಂದಿಗೆ ಅಂಗಳಕ್ಕೆ ಇಳಿದಿದ್ದರು. ಇವರಿಗೆ ಕೆಕೆಆರ್ 23.75 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿದೆ. ಆದರೆ ಇವರು ಪ್ರದರ್ಶನ ನೀಡುವಲ್ಲಿ ವಿಫಲರಾಗುತ್ತಿದ್ದಾರೆ. ಪ್ರಸಕ್ತ ಐಪಿಎಲ್‌ನಲ್ಲಿ ವೆಂಟಕೇಶ್ ಅಯ್ಯರ್ ಆಡಿರುವ 10 ಪಂದ್ಯಗಳಲ್ಲಿ 20.28ರ ಸರಾಸರಿಯಲ್ಲಿ 142 ರನ್ ಕಲೆ ಹಾಕಿದ್ದಾರೆ. ಈ ವೇಳೆ ಇವರ ಬ್ಯಾಟ್‌ನಿಂದ ಒಂದು ಅರ್ಧಶತಕ ಬಂದಿದೆ. ಆದರೆ ಇವರು ಕಳೆದ ವರ್ಷ ಮಾಡಿದ ಇಂಪ್ಯಾಕ್ಟ್ ಮಾಡುವಲ್ಲಿ ವಿಫಲರಾಗಿರುವುದು ನಿಜಕ್ಕೂ ಮ್ಯಾನೇಜ್ಮೆಂಟ್ ಚಿಂತೆಯನ್ನು ಹೆಚ್ಚಿಸಿದೆ. ವೆಂಕಟೇಶ್ ಅಯ್ಯರ್ 10 ಪಂದ್ಯಗಳಲ್ಲಿ ಕೇವಲ 15 ಬೌಂಡರಿ, 4 ಸಿಕ್ಸರ್ ಬಾರಿಸಿ ನಿರಾಸೆ ಅನುಭವಿಸಿದ್ದಾರೆ.

ವೆಂಕಟೇಶ್ ಅಯ್ಯರ್ ಅವರಿಗೆ 18ನೇ ಆವೃತ್ತಿಯ ಐಪಿಎಲ್ ಯಾವುದೇ ದುಸ್ವಪ್ನಕ್ಕಿಂತ ಭಿನ್ನವಾಗಿಲ್ಲ. ಲಯಕ್ಕಾಗಿ ಪರದಾಡುತ್ತಿರುವ ವೆಂಕಟೇಶ್ ಮ್ಯಾನೇಜ್ಮೆಂಟ್ ಚಿಂತೆಯನ್ನು ಹೆಚ್ಚಿಸಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಇವರ ಪ್ರದರ್ಶನ ಹೇಗಿರಲಿದೆ ಎಂಬ ಬಗ್ಗೆ ಪ್ರಶ್ನೆಗಳು ಎದ್ದಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications