For Quick Alerts
ALLOW NOTIFICATIONS  
For Daily Alerts
 

India Tour Of England: ಇಂಗ್ಲೆಂಡ್ ಪ್ರವಾಸದಲ್ಲಿ ಕನ್ನಡಿಗನಿಗೆ ದೊಡ್ಡ ಜವಾಬ್ದಾರಿ

ಟೀಮ್ ಇಂಡಿಯಾದ ಆಟಗಾರರು ಸದ್ಯ ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡುತ್ತಿದ್ದಾರೆ. ಈ ಲೀಗ್‌ ಮುಗಿದ ಬಳಿಕ ಆಟಗಾರರು ಇಂಗ್ಲೆಂಡ್ ಫ್ಲೈಟ್ ಏರಲಿದ್ದಾರೆ. ಈ ಪ್ರವಾಸದ ಮೇಲೆ ಎಲ್ಲರ ಚಿತ್ತ ನೆಟ್ಟಿರಲಿದೆ. ಕಾರಣ ಈ ಬಾರಿ ಯಂಗ್ ಟೀಮ್ ಇಂಗ್ಲೆಂಡ್ ಪ್ರವಾಸವನ್ನು ಬೆಳೆಸಲಿದೆ. ಟೀಮ್ ಇಂಡಿಯಾದ ಸೂಪರ್‍‌ ಸ್ಟಾರ್ ಆಟಗಾರ ರೋಹಿತ್ ಶರ್ಮಾ, ವಿರಾಟ್‌ ಕೊಹ್ಲಿ ನಿವೃತ್ತಿಯ ಬಳಿಕ ಈಗ ಏನೆದ್ರೂ ಡ್ರೆಸ್ಸಿಂಗ್‌ ರೂಮ್‌ನಲ್ಲಿ ಯುವಕರದ್ದೇ ಕಾರುಬಾರು.

ರೋಹಿತ್‌ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರು ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಇವರ ಸ್ಥಾನವನ್ನು ತುಂಬುವುದು ಸದ್ಯ ತುಂಬ ಕಷ್ಟ. ಆಗುವುದೇ ಇಲ್ಲ ಎಂದು ಅಲ್ಲ. ಆದರೆ ಕೆಲ ವರ್ಷಗಳ ಕಾಲ ಇವರ ಅನುಪಸ್ಥಿತಿ ಬಹುವಾಗಿ ತಂಡವನ್ನು ಕಾಡಲಿದೆ. ಇಷ್ಟಾಗ್ಯೂ ತಂಡ ತನ್ನ ಮುಂದಿನ ಸರಣಿಗಾಗಿ ತಯಾರಿಯನ್ನು ನಡೆಸಲಿದೆ. ಈ ವೇಳೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್‌ ಒಂದು ಬ್ಲ್ಯೂ ಪ್ರೀಂಟ್‌ ರೆಡಿ ಮಾಡಿಕೊಳ್ಳುವ ಸಾಧ್ಯತೆ ಇದೆ. ಈ ವೇಳೆ ಕನ್ನಡಿಗನಿಗೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ದೊಡ್ಡ ಜವಾಬ್ದಾರಿ ನೀಡುವ ಸಾಧ್ಯತೆ ಇದೆ.

Big Responsibility Likely for Karnataka Star KL Rahul on England Tour After Kohli-Rohit Retirement

ಟೀಮ್ ಇಂಡಿಯಾದಲ್ಲಿ ಸದ್ಯ ಅನುಭವಿಗಳೆಂದರೆ ಜಸ್ಪ್ರಿತ್ ಬುಮ್ರಾ ಅವರತ್ತ ಎಲ್ಲರ ಚಿತ್ತ ನೆಟ್ಟಿರುತ್ತದೆ. ಇವರ ಬಳಿಕ ಎಲ್ಲರ ಚಿತ್ತವನ್ನು ಕದ್ದ ಆಟಗಾರರಲ್ಲಿ ಎದ್ದು ಕಾಣುವ ಆಟಗಾರ ಟೀಮ್ ಇಂಡಿಯಾದ ಅನುಭವಿ ಕೆಎಲ್ ರಾಹುಲ್. ಕರ್ನಾಟಕದ ಸ್ಟಾರ್ ಪ್ಲೇಯರ್‌ ತಂಡಕ್ಕೆ ಅಗತ್ಯ ಇದ್ದಾಗ ತಮ್ಮ ಕಾಣಿಕೆ ನೀಡುತ್ತಲೇ ಇದ್ದಾರೆ. ಹೀಗಾಗಿ ಇವರಿಗೆ ಇಂಗ್ಲೆಡ್ ವಿರುದ್ಧದ ಸರಣಿಯ ವೇಳೆ ದೊಡ್ಡ ಜವಾಬ್ದಾರಿಯನ್ನು ನೀಡುವ ಸಾಧ್ಯತೆ ಇದೆ.

ಯಾವ ಜವಾಬ್ದಾರಿಯನ್ನು ನೀಡುವ ಸಾಧ್ಯತೆ?

ಟೀಮ್ ಇಂಡಿಯಾ ಕನ್ನಡಿಗ ಕೆಎಲ್‌ ರಾಹುಲ್‌ ಅವರಿಗೆ ದೊಡ್ಡ ಜವಾಬ್ದಾರಿಯನ್ನು ನೀಡುವ ಸಾಧ್ಯತೆ ಇದೆ. ರಾಹುಲ್‌ ಯಾವುದೇ ಕ್ರಮಾಂಕದಲ್ಲಿ ತಾವು ಬ್ಯಾಟ್ ಮಾಡಬಲ್ಲ ಕ್ಷಮತೆ ಇರುವುದಾಗಿ ತಿಳಿಸಿದ್ದಾರೆ. ಇವರು ಆಸ್ಟ್ರೇಲಿಯಾ ಪ್ರವಾಸದಲ್ಲಿ ಅಗ್ರ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ತಂಡಕ್ಕೆ ನೆರವಾದ್ರೆ, ಇನ್ನು ಕೆಲವೊಮ್ಮೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದಾರೆ. ಹೀಗಾಗಿ ಇವರಲ್ಲಿನ ಬ್ಯಾಟಿಂಗ್ ಎಬಿಲಿಟಿ ಕಂಡು ತಂಡ ದೊಡ್ಡ ಜವಾಬ್ದಾರಿಯನ್ನು ನೀಡುವ ಸಾಧ್ಯತೆ ಇದೆ.

Big Responsibility Likely for Karnataka Star KL Rahul on England Tour After Kohli-Rohit Retirement

ರಾಹುಲ್‌ ಆರಂಭಿಕ ಹಾಗೂ ಐದನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಅನುಭವ ಇವರಿಗಿದೆ. ಇವರ ಅನುಭವವನ್ನು ತಂಡ ಬಳಸಿಕೊಳ್ಳಲು ಪ್ಲ್ಯಾನ್ ಮಾಡಿದೆ. ಅಂದಗಹಾಗೆ ವಿರಾಟ್ ಕೊಹ್ಲಿ ಅವರಿಂದ ತೆರವಾದ ನಾಲ್ಕನೇ ಕ್ರಮಾಂಕದಲ್ಲಿ ಕೆಎಲ್ ರಾಹುಲ್ ಆಡುವ ಸಾಧ್ಯತೆ ಇದೆ. ಏಕೆಂದ್ರೆ ಈ ಕ್ರಮಾಂಕದಲ್ಲಿ ಆಡುವ ಆಟಗಾರನ ಮೇಲೆ ಹೆಚ್ಚಿನ ಭಾರ ಇರುತ್ತದೆ. ಅಲ್ಲದೆ ಆಂಕರ್‌ ರೋಲ್‌ ಪ್ಲೇ ಮಾಡಬೇಕಾಗುತ್ತದೆ. ಹೀಗಾಗಿ ಇವರ ಅನುಭವವನ್ನು ಬಳಸಿಕೊಂಡು ಟೀಮ್ ಇಂಡಿಯಾ ದೊಡ್ಡ ಜವಾಬ್ದಾರಿಯನ್ನು ನೀಡುವ ಸಾಧ್ಯತೆ ಇದೆ.

Story first published: Tuesday, May 13, 2025, 14:18 [IST]
Other articles published on May 13, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+