ಲಂಕಾ ವಿರುದ್ಧವೂ ರೋಹಿತ್ ಅಬ್ಬರಿಸಿದರೆ ಈ ದಾಖಲೆಗಳು ಪುಡಿಪುಡಿ!

ಲಂಡನ್, ಜುಲೈ 05: ಟೀಮ್ ಇಂಡಿಯಾದ ಉಪ ನಾಯಕ ರೋಹಿತ್ ಶರ್ಮಾ ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಲಯದಲ್ಲಿದ್ದು, ನಾಲ್ಕು ಶತಕಗಳನ್ನು ದಾಖಲಿಸುವ ಮೂಲಕ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ಗಳನ್ನು ಗಳಿಸಿದವರ ಪೈಕಿ ಮುಂಚೂಣಿಯಲ್ಲುದ್ದಾರೆ.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
ಭಾರತ ತಂಡ ಇದೀಗ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಲೀಡ್ಸ್‌ನಲ್ಲಿ ಪೈಪೋಟಿ ನಡೆಯಲಿದ್ದು, ಈ ಪಂದ್ಯದಲ್ಲಿ 32 ವರ್ಷದ ಅನುಭವಿ ಬ್ಯಾಟ್ಸ್‌ಮನ್ ರೋಹಿತ್ ಶತಕ ದಾಖಲಿಸಿದ್ದೇ ಆದಲ್ಲಿ ಹಲವು ವಿಶ್ವ ದಾಖಲೆಗಳು ನುಚ್ಚು ನೂರಾಗಲಿದೆ. ಅಂದಹಾಗೆ ಒಂದೇ ವಿಶ್ವಕಪ್‌ನಲ್ಲಿ ನಾಲ್ಕು ಶತಕ ಬಾರಿಸಿದ ವಿಶ್ವದ ಎರಡನೇ ಆಟಗಾರ ರೋಹಿತ್.
ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಆಡಿರುವ 7 ಪಂದ್ಯಗಳಿಂದ ಒಟ್ಟು 544 ರನ್‌ಗಳನ್ನು ಚಚ್ಚಿದ್ದಾರೆ. ಇದರಲ್ಲಿ ನಾಲ್ಕು ಶತಕಗಳು ಮತ್ತು ಒಂದು ಅರ್ಧಶತಕ ಸೇರಿದೆ.

5 ಶತಕಗಳ ವಿಶ್ವ ದಾಖಲೆ
ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 104 ರನ್‌ಗಳನ್ನು ಚೆಚ್ಚಿ ಟೀಮ್ ಇಂಡಿಯಾಗೆ ಜಯ ತಂದುಕೊಟ್ಟ ರೋಹಿತ್, ಈ ಮೂಲಕ ಒಂದೇ ಆವೃತ್ತಿಯ ವಿಶ್ವಕಪ್‌ನಲ್ಲಿ ನಾಲ್ಕು ಶತಕಗಳನ್ನು ಸಿಡಿಸಿದ ಮೊದಲ ಭಾರತೀಯ ಹಾಗೂ ವಿಶ್ವದ ಎರಡನೇ ಬ್ಯಾಟ್ಸ್‌ಮನ್ ಎಂಬ ದಾಖಲೆ ಬರೆದರು. ಶ್ರೀಲಂಕಾದ ಮಾಜಿ ದಿಗ್ಗಜ ಬ್ಯಾಟ್ಸ್‌ಮನ್ ಕುಮಾರ ಸಂಗಕ್ಕಾರ 2015ರ ವಿಶ್ವಕಪ್‌ನಲ್ಲಿ ನಾಲ್ಕು ಶತಕ ದಾಖಲಿಸಿದ ವಿಶ್ವ ದಾಖಲೆ ಬರೆದಿದ್ದರು. ಇದೀಗ ರೋಹಿತ್ ಅವರ ಬಳಿ ಈ ದಾಖಲೆ ಮುರಿಯುವ ಉತ್ತಮ ಅವಕಾಶವಿದೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶತಕ ಬಾರಿಸಿದರೆ ಒಂದೇ ಆವೃತ್ತಿಯಲ್ಲಿ 5 ಶತಕ ಸಿಡಿಸಿದ ವಿಶ್ವದ ಮೊದಲ ಆಟಗಾರ ಎಂಬ ವಿಶ್ವ ದಾಖಲೆ ತಮ್ಮದಾಗಿಸಿಕೊಳ್ಳಲಿದ್ದಾರೆ.

ಲೀಗ್ ಹಂತದಲ್ಲಿ ಅತಿ ಹೆಚ್ಚು ರನ್
ಇನ್ನ ವಿಶ್ವಕಪ್ ಟೂರ್ನಿಯ ಆವೃತ್ತಿ ಒಂದರ ಲೀಗ್ ಹಂತದಲ್ಲಿ ಅತಿ ಹೆಚ್ಚು ರನ್‌ಗಳನ್ನು ಗಳಿಸಿದ ವಿಶ್ವ ದಾಖಲೆ ಬರೆಯುವ ಅವಕಾಶ ಕೂಡ ರೋಹಿತ್ ಬಳಿ ಇದೆ. ಸದ್ಯ 7 ಪಂದ್ಯಗಳಿಂದ 544 ರನ್‌ಗಳನ್ನು ಗಳಿಸಿರುವ ಹಿಟ್‌ಮ್ಯಾನ್, ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಭಾರತದ ಬ್ಯಾಟಿಂಗ್ ದಂತಕತೆ ಸಚಿನ್ ತೆಂಡೂಲ್ಕರ್ (586 ರನ್, 2003ರ ವಿಶ್ವಕಪ್) ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್ (580 ರನ್, 2007ರ ವಿಶ್ವಕಪ್) ಮಾತ್ರವೇ ರೋಹಿತ್‌ಗಿಂತಲೂ ಮುಂದಿದ್ದಾರೆ. ಸಚಿನ್ ದಾಖಲೆ ಮುರಿಯಲು ರೋಹಿತ್ ಇನ್ನು 42 ರನ್‌ಗಳನ್ನು ಮಾತ್ರವೇ ಗಳಿಸಬೇಕಿದೆ.

ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್
ವಿಶ್ವಕಪ್ ಟೂರ್ನಿಯ ಆವೃತ್ತಿ ಒಂದರಲ್ಲಿ ಅತಿ ಹೆಚ್ಚು ರನ್‌ಗಳನ್ನು ಗಳಿಸಿದ ವಿಶ್ವ ದಾಖಲೆ 'ಗಾಡ್ ಆಫ್ ಕ್ರಿಕೆಟ್' ಖ್ಯಾತಿಯ ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಅವರ ಹೆಸರಲ್ಲಿದೆ. 2003ರ ವಿಶ್ವಕಪ್ ಟೂರ್ನಿಯಲ್ಲಿ ಸಚಿನ್ ಒಟ್ಟು 673 ರನ್‌ಗಳನ್ನು ಚೆಚ್ಚಿದ್ದರು. ಭಾರತ ತಂಡ ಟೂರ್ನಿಯಲ್ಲಿ ಫೈನಲ್ ತಲುಪಿತ್ತಾದರೂ, ಆಸ್ಟ್ರೇಲಿಯಾ ವಿರುದ್ಧ ಸೋತು ನಿರಾಸೆ ಅನುಭವಿಸಿತ್ತು. ಅಂದಹಾಗೆ ರೋಹಿತ್‌ಗೆ ಇದೀಗ ಈ ವಿಶ್ವ ದಾಖಲೆ ಅಳಿಸಿ ಹಾಕುವ ಉತ್ತಮ ಅವಕಾಶವಿದೆ. ಹಿಟ್‌ಮ್ಯಾನ್ ಇನ್ನು 129 ರನ್‌ಗಳನ್ನು ಗಳಿಸಿದರೆ ನೂತನ ವಿಶ್ವ ದಾಖಲೆ ತಮ್ಮದಾಗಿಸಿಕೊಳ್ಳಲಿದ್ದಾರೆ. ಶ್ರೀಲಂಕಾ ವಿರುದ್ಧ ಶತಕ ಸಿಡಿಸಿದರೆ ರೋಹಿತ್ ಮುಡಿಗೆ ಈ ಎಲ್ಲಾ ದಾಖಲೆಗಳು ಸೇರಲಿವೆ.

ಒಡಿಐನಲ್ಲಿ ರೋಹಿತ್ ಬ್ಯಾಟಿಂಗ್ ಸಾಧನೆ
213 ಪಂದ್ಯ
8554 ರನ್
264 ಗರಿಷ್ಠ
48.88 ಸರಾಸರಿ
88.47 ಸ್ಟ್ರೈಕ್‌ರೇಟ್
26 ಶತಕ
42 ಅರ್ಧಶತಕ
752 ಫೋರ್
230 ಸಿಕ್ಸರ್ಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications